ನರಗುಂದ: ‘ಜಗತ್ತಿನ ಆಧ್ಯಾತ್ಮಿಕ ಕೇಂದ್ರ ಭಾರತ. ಇಲ್ಲಿ ಯಾವಾಗಲೂ ನೈತಿಕ ಮೌಲ್ಯಗಳಿಗೆ, ಮೌಲ್ಯ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ. ಆದ್ದರಿಂದ ಭಾರತೀಯರೆಲ್ಲರೂ ಮೌಲ್ಯ ಶಿಕ್ಷಣಕ್ಕೆ ಒತ್ತು ನೀಡಬೇಕು’ ಎಂದು ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು ಹೇಳಿದರು.

ಪಟ್ಟಣದ ಸರಸ್ವತಿ ನಗರದ ಸರಸ್ವತಿ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ನಡೆದ ಪುರಾಣ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪೋಷಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ಗುಣಾತ್ಮಕ ಶಿಕ್ಷಣ ನೀಡಬೇಕು. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು’ ಎಂದು ತಿಳಿಸಿದರು.

ಬನಹಟ್ಟಿಯ ಶೇಖರಯ್ಯ ಹಿರೇಮಠ ಮಾತನಾಡಿ, ‘ಸಿದ್ಧಾರೂಢರು ನಾಡು ಕಂಡಂತಹ ಅಪರೂಪದ ಸಾಧಕರು. ಆಧ್ಯಾತ್ಮಿಕ ಶ್ರೇಷ್ಠ ಪುರುಷರಾಗಿದ್ದರು. ಎಲ್ಲರೂ ಅವರ ಜೀವನ ಚರಿತ್ರೆ ಅರಿಯಬೇಕು’ ಎಂದರು.

ಪಿಯುಸಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು, ಸಂಗೀತ ಸೇವೆ ನೀಡಿದ ಈಶ್ವರಪ್ಪ ಬಾಳಿಕಾಯಿ, ಬಸನಗೌಡ ಕಲ್ಲನಗೌಡ್ರ ಅವರನ್ನು ಸನ್ಮಾನಿಸಲಾಯಿತು.

ಬಸವರಾಜ ಕೆ.ಎಸ್.ದೊಡಮನಿ, ಬ್ಯಾಹಟ್ಟಿ, ಸಿ.ಎಚ್.ಸಂಗಳಮಠ, ಎಸ್.ಬಿ. ಚನ್ನವೀರಗೌಡ್ರ, ಯು.ಐ.ಬದ್ದಿಕಾಯಿ, ಜಿ.ಬಿ.ತಳವಾರ, ವೈ. ಆಯ್.ಕುಂಬಾರ, ಬಿ.ಎ.ಕುರಿ, ಎಸ್.ಬಿ. ಕರಮಡಿ, ಬಿ.ಎಸ್.ಪೂಜಾರ, ಎಸ್.ವಿ. ಅಲ್ಲಮಪ್ರಭು ದೇವರಮಠ, ದೊಡಮನಿ, ಎನ್.ಡಿ.ಕಿತ್ತೂರ, ಎಲ್.ಬಿ. ಮಂಟೂರ, ಎಂ.ಎಸ್.ಹಿರೇಮಠ, ಪ್ರಕಾಶ ನಂದಿ, ಪ್ರಮೋದ ಪಾಟೀಲ, ಬಸವರಾಜ ಚವಡಿ, ಸೋಮಲಿಂಗಪ್ಪ ಕಲಹಾಳ, ಎಚ್.ಡಿ.ಭಜಂತ್ರಿ, ವಿ.ಕೆ.ಹಿರೇಗೌಡ್ರ, ಆರ್.ಸಿ. ಅಂಗಡಿ ಇದ್ದರು.

ಆರ್.ಬಿ.ಚಿನಿವಾಲರ ನಿರೂಪಿಸಿ, ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-23-1556402143

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.