ಜಗನ್ಮಾತೆಯು ಎಲ್ಲೋ ಹೊರಗಿರುವವಳಲ್ಲ. ಅವಳು ನಮ್ಮಲ್ಲಿಯೇ, ನಮ್ಮದೇ ಪ್ರಾಣಶಕ್ತಿಯಾಗಿ ನೆಲೆಸಿದ್ದಾಳೆ. ಆದರೆ ಇದನ್ನು ನಾವು ತಿಳಿದುಕೊಳ್ಳುವುದು ಹೇಗೆ? ಈ ಒಂದು ಸರಳವಾದ ವಿಷಯವನ್ನು ಅರ್ಥ ಮಾಡಿಕೊಳ್ಳಿ.

ತಾಯಿಯ ಅನುವಂಶಿಕ ಜೀವಾಣು ಡಿಎನ್ಎಯಿಂದ ಈ ದೇಹ ಬಂದಿದೆ. ಈ ದೇಹದೊಳಗೆ ಏನೆಲ್ಲಾ ಇದೆಯೋ, ನಾವು ತಿಂದಿರುವ ಎಲ್ಲಾ ಧಾನ್ಯಗಳು, ಫಲಗಳು, ಎಲ್ಲವೂ ಪ್ರಕೃತಿ ಮಾತೆಯಿಂದಲೇ ಬಂದಿದೆ ಮತ್ತು ಅದು ನಿಮ್ಮದೇ ಭಾಗವಾಗಿಬಿಟ್ಟಿದೆ. ಆದ್ದರಿಂದ ದೇಹವು ಪ್ರಕೃತಿ ಮಾತೆಗೆ ಸೇರಿದೆ. ನೀವು ಜನಿಸಿದಾಗ ಎರಡು-ಮೂರು ಕೆ.ಜಿಗಳಷ್ಟು ಮಾತ್ರ ಇದ್ದಿರಿ. ಇಂದು ಐವತ್ತು, ಅರವತ್ತು, ಎಪ್ಪತ್ತು ಕಿಲೋ ತೂಕವನ್ನು ಹೊಂದಿದ್ದೀರಿ. ದೇಹ ಮತ್ತು ಪ್ರಕೃತಿಯ ನಡುವೆ ಅವಿನಾಭಾವ ಸಂಬಂಧವಿದೆ.

ನಿಮ್ಮಲ್ಲಿರುವ ಪ್ರಾಣಶಕ್ತಿಯು ಜಗನ್ಮಾತೆಯ ಏಳು ನಿರ್ದಿಷ್ಟ ದೈವೀ ಶಕ್ತಿಗಳಾಗಿ ಪ್ರಕಟವಾಗುತ್ತದೆ. ಈ ಶಕ್ತಿಯು ನಿಮ್ಮ ಪ್ರತಿಯೊಂದು ಕೋಶದಲ್ಲೂ, ನಿಮ್ಮ ಪ್ರತಿಯೊಂದು ಉಸಿರಿನಲ್ಲೂ, ನಿಮ್ಮ ಅಸ್ತಿತ್ವದ ಪ್ರತಿಯೊಂದು ಕ್ಷಣದಲ್ಲೂ ಜೀವಂತವಾಗಿದೆ.

ಮೊದಲನೆಯ ಶಕ್ತಿ ಬ್ರಾಹ್ಮೀ ಶಕ್ತಿ; ಪ್ರತಿಯೊಂದು ಬೀಜದಲ್ಲೂ, ಪ್ರತಿಯೊಂದು ಜೀವಜಂತುವಿನಲ್ಲೂ, ಗಿಡಮರಗಳಲ್ಲೂ, ಪ್ರತಿಯೊಂದು ಕೋಶದಲ್ಲೂ ಇರುವ ಸೃಜನಾತ್ಮಕ ಸ್ಪಂದ. ನಿಮ್ಮ ದೇಹದ ಪ್ರತಿಯೊಂದು ಕೋಶವೂ ಸೃಷ್ಟಿಯಲ್ಲಿ ತೊಡಗಿದೆ. ಒಂದು ಕೋಶವು ಮತ್ತೊಂದು ಕೋಶವಾಗಿ, ಅದರ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಅದೇ ಕಾರ್ಯರೂಪದಲ್ಲಿರುವ ಬ್ರಾಹ್ಮೀ ಶಕ್ತಿ. ಬ್ರಾಹ್ಮೀ ಶಕ್ತಿ ಇಲ್ಲದಿದ್ದರೆ ಯಾವ ಸೃಷ್ಟಿಯೂ ನಡೆಯುವುದಿಲ್ಲ.

ಆದರೆ ಸೃಷ್ಟಿಯೊಂದೇ ಸಾಕಾಗುವುದಿಲ್ಲ; ಅದು ಅಪರಿಪೂರ್ಣ. ಸೃಷ್ಟಿಯ ವಿಸ್ತರಣೆಯೂ ಆಗಬೇಕು. ಒಂದು ಬೀಜವು ಮೊಳಕೆಯೊಡೆಯುವ ಮೊದಲು ಅದರ ನಾಶವಾಗಬೇಕು. ಅದೇ ಮಾಹೇಶ್ವರಿ ಶಕ್ತಿ; ಶಿವನ ಶಕ್ತಿ. ಈ ಶಕ್ತಿಯು ನಿಮಗೆ ವಿಶಾಲವಾದ ದೃಷ್ಟಿಯನ್ನು ನೀಡುತ್ತದೆ ಹಾಗೂ ನಿಜವಾಗಿಯೂ ಯಾವುದು ದೊಡ್ಡದು ಎಂಬ ಅರಿವನ್ನು ತಂದುಕೊಡುತ್ತದೆ. ನಿಮ್ಮ ಬಾಲ್ಯವು ಕೊನೆಯಾಗದಿದ್ದರೆ ಯೌವನವು ಬರಲು ಸಾಧ್ಯವಿಲ್ಲ. ಇಲ್ಲಿ ವಿನಾಶವು ಅಂತ್ಯವಾಗಿರದೆ, ಅದು ವಿಸ್ತರಣೆಯ ಮಾರ್ಗವಾಗಿದೆ.

ನಂತರ ಕೌಮಾರಿ ಶಕ್ತಿ; ಸದಾ ಯೌವನಮಯಿಯಾದ, ಕಾರ್ತಿಕೇಯನ ನಿರ್ಭೀತವಾದ ಶಕ್ತಿ. ಈ ಶಕ್ತಿಯು ಧೈರ್ಯವನ್ನು, ವೀರ್ಯವನ್ನು, ನವೀನತೆಯನ್ನು, ಜ್ಞಾನದ ಶಕ್ತಿಯನ್ನು ಹೊಂದಿದೆ. ಸಾಧಕರನ್ನು ನವೀನವಾಗಿರಿಸುವ, ಕುತೂಹಲದಿಂದ ತುಂಬಿಸುವ, ನಿರ್ಭೀತಿಯಿಂದ ತುಂಬಿಸುವ ಶಕ್ತಿಯಿದು.

ನಂತರ ವೈಷ್ಣವಿ ಶಕ್ತಿ; ವಿಷ್ಣುವಿನ ಶಕ್ತಿ, ಇಡೀ ಸೃಷ್ಟಿಯನ್ನು ಸಂರಕ್ಷಿಸುವ ಶಕ್ತಿ. ನೀವು ನಿದ್ದೆ ಮಾಡುತ್ತಿರುವಾಗಲೂ ನಿಮ್ಮ ಹೃದಯದ ಬಡಿತ ಮುಂದುವರಿಯುತ್ತದೆ, ನಿಮ್ಮ ಉಸಿರು ಒಳಗೂ ಹೊರಗೂ ಹೋಗುತ್ತಿರುತ್ತದೆ, ಇಡೀ ದೇಹದಲ್ಲಿ ರಕ್ತಚಲನೆ ನಡೆಯುತ್ತಿರುತ್ತದೆ. ಇವುಗಳಲ್ಲಿ ಯಾವುದನ್ನೂ ನೀವು ಮಾಡುತ್ತಿಲ್ಲ. ಸಂರಕ್ಷಣೆಯ ಹಿಂದಿರುವ ಶಕ್ತಿಯೇ ವೈಷ್ಣವಿ ಶಕ್ತಿ. ಕಾಲಕ್ಕೆ ಅನುಗುಣವಾಗಿ ಋತುಗಳು ಬದಲಾಗುತ್ತವೆ, ಮಳೆ ಮತ್ತೆ ಬರುತ್ತದೆ, ನೀರಿನ ಚಕ್ರ ಪರಿಪೂರ್ಣವಾಗುತ್ತದೆ. ಎಲ್ಲವೂ ಈ ಸಂರಕ್ಷಣಾ ಶಕ್ತಿಯಿಂದಾಗಿ.

ಆದರೆ ಇವೆಲ್ಲದೊಡನೆಯೂ ನಮ್ಮನ್ನು ನೆಲೆನಿಲ್ಲಿಸುವುದು ಯಾವುದು? ಅದೇ ವಾರಾಹಿ ಶಕ್ತಿ. ವಾರಾಹಿ ಶಕ್ತಿಯು ಭೂಮಿಯ ಶಕ್ತಿ. ಇದರಿಂದ ನಮಗೆ ನೆಲೆನಿಲ್ಲಲು ಸಾಧ್ಯವಾಗುತ್ತದೆ. ಎಲ್ಲಾ ಸಂಪತ್ತೂ ಭೂಮಿಯಲ್ಲಿದೆ. ವಾರಾಹಿ ಶಕ್ತಿಯಿಂದ ಮರುಸಂಸ್ಕರಣೆಯಾಗುತ್ತದೆ, ಕಸವು ಸಂಪತ್ತಾಗುತ್ತದೆ, ತ್ಯಾಜ್ಯವು ಗೊಬ್ಬರವಾಗುತ್ತದೆ ಮತ್ತು ಮಣ್ಣು ಪುನಃ ಜೀವಂತವಾಗುತ್ತದೆ. ವಾರಾಹಿ ಶಕ್ತಿ ಇಲ್ಲದೆ ಹೋದರೆ ನಾವು ಗಾಳಿಯಲ್ಲಿ ತೇಲುವ ಹತ್ತಿಯಂತೆ, ಬೇರುಗಳಿಲ್ಲದೆ, ತೂಕವಿಲ್ಲದೆ ಎಲ್ಲೋ ಹಾರಿಹೋಗಿಬಿಡುತ್ತಿದ್ದೆವು.

ವ್ಯಕ್ತಿಯ ಆಚೆಗೆ ಸಮೂಹವಿದೆ. ಈ ಸಮೂಹಕ್ಕೂ ತನ್ನದೇ ಆದ ಚೈತನ್ಯವಿದೆ. ಅದೇ ಇಂದ್ರಾಣಿ ಶಕ್ತಿ; ಸಾಮೂಹಿಕ ಅರಿವಿನ ಶಕ್ತಿ; ಸದಾ ಜಾಗೃತವಾಗಿರುವ, ಸಾವಿರ ಕಣ್ಣುಗಳುಳ್ಳ ಶಕ್ತಿ. ನಿಮ್ಮ ಮನಸ್ಸು ಒಂದು; ಸಮುದಾಯದ ಮನಸ್ಸು ಮತ್ತೊಂದು. ಸಮುದಾಯಗಳನ್ನು, ಸಮಾಜಗಳನ್ನು ಮತ್ತು ನಾಗರಿಕತೆಗಳನ್ನು ಒಂದಾಗಿ ಜಾಗೃತ ಸ್ಥಿತಿಯಲ್ಲಿ ಹಿಡಿದಿಟ್ಟುಕೊಳ್ಳುವ ಶಕ್ತಿಯೇ ಇಂದ್ರಾಣಿ ಶಕ್ತಿ.

ಕೊನೆಯದಾಗಿ ಚಾಮುಂಡಾ ಶಕ್ತಿ; ನಕಾರಾತ್ಮಕತೆಯನ್ನು ನಾಶ ಮಾಡಿ ಜೀವನವನ್ನು ಉತ್ಥಾಪಿಸುವ ಶಕ್ತಿ. ತಮೋಗುಣ, ಆಲಸ್ಯ ಅಥವಾ ಅಂಧಕಾರದ ಶಕ್ತಿಯು ಅರಿವನ್ನು ಹೊಂದಿದಾಗ, ಅದು ಪರಿವರ್ತನೆಗೊಂಡು ಮೋಕ್ಷದ ಶಕ್ತಿಯಾಗುತ್ತದೆ. ಅದುವೇ ಚಾಮುಂಡಾ ಶಕ್ತಿ.

ಕೇವಲ ವಿಗ್ರಹ ರೂಪದಲ್ಲಿ ದೂರದಿಂದ ಪೂಜಿಸಲ್ಪಡುವಂತಹ ದೇವತೆಯರಲ್ಲ ಈ ಶಕ್ತಿಗಳು. ಈ ಶಕ್ತಿಗಳು ನಮ್ಮದೇ ದೇಹ, ಮನಸ್ಸು ಮತ್ತು ಚೈತನ್ಯದಲ್ಲಿರುವ ಜೀವಂತವಾದ ಶಕ್ತಿಗಳು. ನಿಮ್ಮ ಉಸಿರು ವೈಷ್ಣವಿ; ನಿಮ್ಮ ಸೃಜನಶೀಲತೆಯು ಬ್ರಾಹ್ಮಿ; ನಿಮ್ಮ ಧೈರ್ಯ ಕೌಮಾರಿ; ನಿಮ್ಮಲ್ಲಿರುವ ನೆಲೆನಿಲ್ಲುವ ಶಕ್ತಿಯೇ ವಾರಾಹಿ. ಆದ್ದರಿಂದಲೇ ನಮ್ಮ ಪದ್ಧತಿಯಲ್ಲಿ ದೈವತ್ವವನ್ನು ಎಲ್ಲೆಡೆಯೂ ಗುರುತಿಸುತ್ತೇವೆ; ಆನೆಗಳಲ್ಲಿ, ಕುದುರೆಯಲ್ಲಿ, ಹಸುವಿನಲ್ಲಿ, ಪುಟ್ಟ ಹೆಣ್ಣುಮಕ್ಕಳಲ್ಲಿ ಮತ್ತು ವೃದ್ಧ ದಂಪತಿಗಳಲ್ಲಿ, ಗಿಡ ಮರಗಳಲ್ಲಿ, ಅಗ್ನಿಯಲ್ಲಿ, ಜಲದಲ್ಲಿ, ಎಲ್ಲೆಲ್ಲೂ ಪ್ರಾಣಶಕ್ತಿಯನ್ನು ಕಾಣುತ್ತೇವೆ. ಜೋಳದ ಬೀಜವು ಬಾಹ್ಯದಲ್ಲಿ ಕಠಿಣವಾಗಿದ್ದು, ಬೆಂಕಿಯ ತಾಪಕ್ಕೆ ಅದು ಅರಳುವಂತೆಯೇ, ದೈವೀ ಶಕ್ತಿಯು ಈ ವಿಶ್ವದಲ್ಲಿ ಅಂತರ್ಗತವಾಗಿದೆ ಮತ್ತು ಅರಳಲು ಕಾಯುತ್ತಿದೆ. ಮಂತ್ರಪಠಣೆಯಿಂದ, ಧ್ಯಾನದಿಂದ ಮತ್ತು ಭಕ್ತಿಯಿಂದ ಅದು ಅರಳುತ್ತದೆ. ನವರಾತ್ರಿಯಿರುವುದೇ ಅದಕ್ಕಾಗಿ.

ಜಗನ್ಮಾತೆಯನ್ನು ಕೇವಲ ವಿಗ್ರಹದಲ್ಲಿ ಮಾತ್ರ ಗುರುತಿಸಬೇಡಿ. ನಿಮ್ಮಲ್ಲೇ ಇರುವ, ನಿಮ್ಮ ಸುತ್ತಲೂ ಇರುವ ಪ್ರಾಣಶಕ್ತಿಯಾಗಿ ಜಗನ್ಮಾತೆಯನ್ನು ಗುರುತಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.