ನುಗ್ಗೇಹಳ್ಳಿ: ಧರ್ಮ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಉಳಿವು ಬೆಳವಣಿಗೆಗಳಿಂದ ಸಮಾಜದಲ್ಲಿ ಶಾಂತಿ, ಸೌಹಾರ್ದದ ನೆಮ್ಮದಿ ದೊರೆಯುತ್ತದೆ ಎಂದು ಕತ್ತರಿ ಘಟ್ಟ ಮೇಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ್ ಗುರೂಜಿ ಹೇಳಿದರು.

ಹೋಬಳಿಯ ದ್ಯಾವಲಾಪುರ ಗ್ರಾಮದಲ್ಲಿ ಶುಕ್ರವಾರ ಲಕ್ಕಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಮಹಿಳೆಯರಿಗೆ ಬಾಗಿನ ನೀಡಿ ಆಶೀರ್ವಚನ ನೀಡಿದರು.

‘ಮನುಷ್ಯನಿಗೆ ಗುರಿ ಇಲ್ಲದಿದ್ದರೆ ಸಾಧನೆ ವ್ಯರ್ಥವಾಗುತ್ತದೆ. ಹಸಿವು ಇಲ್ಲದಿದ್ದರೆ ಭೋಜನ ವ್ಯರ್ಥವಾಗುತ್ತದೆ. ಪರಮಾತ್ಮನನ್ನು ಅರಿಯದಿದ್ದರೆ ಜೀವನ ವ್ಯರ್ಥವಾಗುತ್ತದೆ. ಮನುಷ್ಯ ಹುಟ್ಟಿದ ಮೇಲೆ ಏನಾದರೂ ಸಾಧನೆ ಮಾಡುವ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು’ ಎಂದರು.

‘ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಸಂಸ್ಕಾರವಂತರನ್ನಾಗಿ ಮಾಡಿ ದೇಶದ ಅಭಿವೃದ್ಧಿಗೆ ಮುಂದಾಗಿ’ ಎಂದರು.

ನಿವೃತ್ತ ಶಿಕ್ಷಕ ವಿ. ಮಲ್ಲಿಕಾರ್ಜುನಯ್ಯ ಅವರನ್ನು ಚಂದ್ರಶೇಖರ್ ಗುರೂಜಿ ಅಭಿನಂದಿಸಿದರು.

ಜಿ.ಪಂ. ಮಾಜಿ ಅಧ್ಯಕ್ಷೆ ಅಂಬಿಕಾ ರಾಮಣ್ಣ, ರಾಜಶೇಖರ್, ರಾಮ್ ಪ್ರಸಾದ್, ನಟರಾಜ್, ಎಲ್ಐಸಿ ಡಿ.ಸಿ. ನಾಗರಾಜ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಡಿ. ಎಚ್. ಸ್ವಾಮಿ, ಡಿ. ಆರ್. ನಾಗೇಶ್, ಡಿ.ಸಿ. ಉಮೇಶ್, ಡಿ.ಪಿ. ರವಿಚಂದ್ರನ್, ಡಿ. ಎಚ್. ಜಯರಾಮ್, ಡಿ. ಎಚ್. ರಂಗನಾಥ್, ಶಿವಲಿಂಗೇಗೌಡ, ಪಟೇಲ್ ಆನಂದ್, ಬಸವರಾಜ್, ಡಿ.ಜೆ. ರಾಕೇಶ್, ಡಿ.ಎಚ್. ಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-36-1037794637

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.