ಪಡುಬಿದ್ರಿ: ವಿದ್ಯಾರ್ಥಿಗಳು ವೇದ ಪಾರಾಯಣವನ್ನು ನಿರಂತರವಾಗಿ ಮುಂದುವರಿಸಬೇಕು. ವೇದಗಳ ಸಂರಕ್ಷಣೆ ಮತ್ತು ಪರಂಪರೆಯ ಉಳಿವು ಪ್ರತಿ ವಿದ್ಯಾರ್ಥಿಯ ಧ್ಯೇಯವಾಗಬೇಕು ಎಂದು ಯೋಗದೀಪಿಕಾ ಗುರುಕುಲದ ಕುಲಪತಿಯಾಗಿರುವ ಪಲಿಮಾರು ಮಠಾಧೀಶ ವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದರು.

ಪಲಿಮಾರು ಮೂಲಮಠದಲ್ಲಿ ಹನುಮಜಯಂತಿಯ ಪರ್ವಕಾಲದಲ್ಲಿಸೋಮವಾರ ನಡೆದ ಶ್ರೀಯೋಗ ದೀಪಿಕಾ ವಿದ್ಯಾಪೀಠದ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಘಟಿಕೋತ್ಸವವೇ ಮಂಗಲವಲ್ಲ. ವಿದ್ಯಾರ್ಥಿಗಳ ಜೀವನದಲ್ಲಿ ನಿಜವಾದ ಮಂಗಳವು ಸದಾ ನೆಲೆಸಬೇಕು. ವೇದ ಅಧ್ಯಯನವು ಕೇವಲ ಶಿಕ್ಷಣವಲ್ಲ, ಅದು ಜೀವನದ ಸಾಧನೆಯ ಮಾರ್ಗವಾಗಿದೆ. ಪುರೋಹಿತರಾಗಿ ಸೇವೆ ಸಲ್ಲಿಸುವವರು ನಿಷ್ಕಾಮ ಕರ್ಮದ ತತ್ವವನ್ನು ಅಳವಡಿಸಿಕೊಂಡು ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು. ಧಾರ್ಮಿಕ ಮೌಲ್ಯ ಮತ್ತು ಸಂಸ್ಕೃತಿಯನ್ನು ಉಳಿಸುವಲ್ಲಿ ವೇದ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದರು.

ಅದಮಾರು ಮಠಾಧೀಶ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಪುರೋಹಿತರು ಹಿಂದೂ ಸಮಾಜದ ಆಧಾರಸ್ತಂಭಗಳಾಗಿದ್ದು, ಅವರ ಪಾತ್ರ ಸಮಾಜದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉಳಿವಿಗೆ ಮಹತ್ವದ್ದಾಗಿದೆ. ದೇವರ ಭಯ ಹಾಗೂ ಆಶೀರ್ವಾದ ಮಾನವನ ಬದುಕಿಗೆ ದಾರಿದೀಪವಾಗಬಲ್ಲದು. ರಾಷ್ಟ್ರಹಿತಕ್ಕಾಗಿ ಹಾಗೂ ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ ತಾಯಂದಿರು ಕನಿಷ್ಠ ಒಬ್ಬ ಮಗುವನ್ನಾದರೂ ಯೋಗದೀಪಿಕಾದಂತಹ ಗುರುಕುಲಗಳಿಗೆ ಕಳುಹಿಸುವ ಅಗತ್ಯವಿದೆ ಎಂದರು.

ಸುಬ್ರಹ್ಮಣ್ಯ ಮಠಾಧೀಶ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ನಾಸ್ತಿಕತೆ ಹಾಗೂ ಚಾರ್ವಾಕ ಸಿದ್ಧಾಂತಗಳಿಂದ ಪ್ರಾಪಂಚಿಕ ಬದುಕು ಕ್ಷೇಮವಾಗದು. ಅಪೌರುಷೇಯವಾದ ವೇದಗಳ ಅಧ್ಯಯನದಿಂದಲೇ ಆಸ್ತಿಕತೆಯು ಪ್ರಪಂಚದಲ್ಲಿ ಉಳಿಯುತ್ತದೆ. ಯೋಗದೀಪಿಕಾ ಗುರುಕುಲದ ಮೂಲಕ ವೇದ, ಶಾಸ್ತ್ರಗಳ ಅಧ್ಯಯನ ನಿರಂತರವಾಗಿ ನಡೆಯುತ್ತಿದ್ದು, ನಮ್ಮ ಆಚಾರ-ವಿಚಾರ ಹಾಗೂ ಸಂಸ್ಕಾರ ಇಂದಿಗೂ ಉಳಿದುಬಂದಿದೆ ಎಂದರು. ಅದಮಾರು ಕಿರಿಯ ಯತಿಈಶಪ್ರಿಯ ತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ಶ್ರೀಯೋಗದೀಪಿಕಾ ವಿದ್ಯಾಪೀಠದ ಘಟಿಕೋತ್ಸವವನ್ನು ಅದಮಾರು ಮಠದ ಉಭಯ ಶ್ರೀಗಳು, ಪಲಿಮಾರು ಮಠದ ಉಭಯ ಯತಿಗಳು, ಕಾಣಿಯೂರು ಮತ್ತು ಸುಬ್ರಹ್ಮಣ್ಯ ಮಠದ ಯತಿಗಳು ಸೇರಿ ಒಟ್ಟು ಆರು ಯತಿಗಳು ದೀಪ ಬೆಳಗಿ ಉದ್ಘಾಟಿಸಿದರು.

ಮಠದ ಯೋಗದೀಪಿಕಾ ಗುರುಕುಲದಲ್ಲಿ ಎಂಟು ವರ್ಷ ನಿರಂತರ ಅಧ್ಯಯನ ಮಾಡಿದ ಎಂಟು ವಿದ್ಯಾರ್ಥಿಗಳಿಗೆ ವೇದಮಂಗಳ - ಘಟಿಕೋತ್ಸವ ನಡೆಯಿತು. ಗುರುಕುಲದ ವಿದ್ಯಾರ್ಥಿಗಳು ವೇದ ಪಾರಾಯಣ ಮಾಡಿದರು. ಭಕ್ತರು, ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ರಮಣ ಕಲ್ಕೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-28-920047855

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.