ಪಾವಗಡ: ಅಹಿಂಸೆ, ಶಾಂತಿ, ಸತ್ಯದಿಂದ ಜೀವನ ಮಾಡಬೇಕು. ಬದುಕು-ಬದುಕಲು ಬಿಡು ಎಂಬ ಸಂದೇಶದ ಮೂಲಕ ವಿಶ್ವಕ್ಕೆ ಶಾಂತಿ ಸಾರಿದ ಮಹಾನ್ ಪುರುಷ ಮಹಾವೀರ ಎಂದು ಶೈಲೇಶ್ ಜೈನ್ ತಿಳಿಸಿದರು.

ಪಟ್ಟಣದ ಶಿರಾರಸ್ತೆಯಲ್ಲಿ ಜೈನಸಮುದಾಯದಿಂದ ನಡೆದ ಮಹಾವೀರ ಜಯಂತಿಯಲ್ಲಿ ಅವರು ಮಾತನಾಡಿದರು.

ಮಹಾವೀರರ ಶಾಂತಿ ಮತ್ತು ಅಹಿಂಸೆಯ ಸಂದೇಶಗಳು ಇಂದಿನ ಸಂಘರ್ಷಮಯ ಜಗತ್ತಿಗೆ ಅತ್ಯಂತ ಪ್ರಸ್ತುತ. ವಿಶ್ವದಲ್ಲೆಡೆ ಮಹಾವೀರರ ಶಾಂತಿ ಸಂದೇಶವನ್ನು ಪಾಲಿಸಿದ್ದರೆ ಇರಾನ್–ಇಸ್ರೇಲ್, ಅಮೇರಿಕಾ ನಡುವೆ ಯುದ್ಧ ಸಂಭವಿಸುತ್ತಿರಲಿಲ್ಲ ಎಂದರು.

ಅಜಿತ್ ರಾಜಯ್ಯ ಮಾತನಾಡಿ, ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಅಹಿಂಸಾ ಪರಮೋ ಧರ್ಮಃ ಎಂಬ ತತ್ವದಡಿ, ಸರ್ವ ಜೀವಿಗಳ ಮೇಲೆ ದಯೆ ತೋರಲು ಕರೆ ನೀಡಿದ ಇವರು, ತಪಸ್ಸು ಮತ್ತು ತ್ಯಾಗದ ಮೂಲಕ ಮಾರ್ಗದರ್ಶನ ನೀಡಿದರು ಎಂದರು.

ಮಹಾವೀರ ಚಿತ್ರಕ್ಕೆ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಹೆಸರುಬೇಳೆ, ಪಾನಕ ವಿತರಿಸಲಾಯಿತು.

ಜೈನ ಸಮುದಾಯದ ಸುಂದರ್ ರಾಜಯ್ಯ, ವೃಷಭರಾಜ್, ಹರಿಹಂತ್ ಜೈನ್, ತರುಣ್ ಜೈನ್, ಅನಂತ ದರ್ಶನ್ ಜೈನ್, ಅಮಿತ್, ಪ್ರಫುಲ್, ಸಮ್ಮೇದ್, ಜ್ವಾಲಾ ಸುಂದರ್, ಪುನೀತಾ ಶೈಲೇಶ್, ಸವಿತಾ, ಪ್ರಫುಲ್, ರಂಜಿತ, ದರ್ಶಿತ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-17-278508782

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.