ಕಾಸರಗೋಡು: ಬದಿಯಡ್ಕದ ಪೆರಡಾಲ ಉದನೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವ ಏ.17ರಿಂದ 28ವರೆಗೆ ನಡೆಯಲಿದೆ.

ಪ್ರತಿದಿನ ಧಾರ್ಮಿಕ ಸಭೆಗಳು ಜರುಗಲಿದ್ದು, ಯತಿಗಳು, ಧಾರ್ಮಿಕ ಮುಂದಾಳುಗಳು, ಗಣ್ಯರು ಭಾಗವಹಿಸುವರು. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಕುಂಟಾರು ರವೀಶ ತಂತ್ರಿ ಅವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ತಿಳಿಸಿದರು.

17ರಂದು ಬೆಳಿಗ್ಗೆ 9.30ಕ್ಕೆ ಹಸುರುಕಾಣಿಕೆ ಮೆರವಣಿಗೆ, ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ.

18ರಂದು ನವೀಕೃತ ರಾಜಗೋಪುರ, ರಾಜಾಂಗಣ ಮೇಲ್ಚಾವಣಿ ಮತ್ತು ನೂತನ ಭೋಜನ ಶಾಲೆಗಳ ಉದ್ಘಾಟನೆ ನಡೆಯಲಿದೆ. 26ರಂದು ಸಹಸ್ರ ಕಲಶಾಭಿಷೇಕ ಮತ್ತು ಬ್ರಹ್ಮಕಲಶಾಭಿಷೇಕ ಜರುಗಲಿದೆ. 28ರಂದು ಮಧ್ಯಾಹ್ನ 12.30ಕ್ಕೆ ಪಿಲಿಚಾಮುಂಡಿ ದೈವಕೋಲ ಜರುಗಲಿದೆ ಎಂದು ಹೇಳಿದರು.

ವೆಂಕಟ್ರಮಣ ಭಟ್ ಚಂಬಲ್ತಿ ಮಾರು, ಜಗನ್ನಾಥ ರೈ ಪೆರಡಾಲ ಗುತ್ತು, ಡಾ.ಶ್ರೀಶ ಕುಮಾರ್ ಪಂಜಿತ್ತಡ್ಕ, ಸೂರ್ಯ ನಾರಾಯಣ ಬಿ., ಸೀತಾರಾಮ ನವಕಾನ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-29-1487980531

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.