ಪುತ್ತೂರು: ಬದುಕಿನ ಪಾಠದ ಕೊರತೆಯಿರುವ ಇಂದಿನ ಕಾಲಘಟ್ಟದಲ್ಲಿ ಪೂಜಾ ಕಾರ್ಯಕ್ರಮದ ಮೂಲಕ ಧರ್ಮ, ಸಂಸ್ಕಾರದ ಜತೆಗೆ ಬದುಕಿನ ಪಾಠ ಹೇಳಿ ಕೊಡಬೇಕಾದ ಅಗತ್ಯವಿದೆ. ಧರ್ಮ ಭದ್ರವಾಗಿಸಲು ಶನಿಯ ಪಾಠ ಅನುಭವಿಸುವುದು ಮುಖ್ಯ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಉಪ್ಪಳಿಗೆಯ ಭಗತ್ಸಿಂಗ್ ಸೇವಾ ಯುವಶಕ್ತಿ ಸಂಘಟನೆಯ ಆಶ್ರಯದಲ್ಲಿ ಬೈಲಾಡಿಯ ವಿಷ್ಣುಮೂರ್ತಿ ದೇವಳದ ದ್ವಾರದ ಬಳಿಯ ಮೈದಾನದಲ್ಲಿ ನಡೆದ ಮೂರನೇ ವರ್ಷದ ಸಾಮೂಹಿಕ ಶನೈಶ್ಚರ ಕಲ್ಪೋಕ್ತ ಪೂಜೆ, ಎಳ್ಳುಗಂಟು ದೀಪ ಸೇವೆ ಹಾಗೂ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಕಷ್ಟ ಬಂದಾಗ ಜಗ್ಗದೆ, ಸುಖ ಬಂದಾಗ ಹಿಗ್ಗದೆ ಕರ್ಮವನ್ನು ಅನುಭವಿಸಬೇಕು. ಸಮಾಜ, ರಾಷ್ಟ್ರಕ್ಕೆ ಉತ್ತಮವಾದುದನ್ನೇ ಬಯಸಬೇಕು. ರಾಷ್ಟ್ರೀಯ ಉನ್ನತಿಯ ಗುರಿ-ಚಿಂತನೆ ನಮ್ಮಲ್ಲಿರಬೇಕು ಎಂದರು.

ಬೌದ್ಧಿಕ್ ನಡೆಸಿಕೊಟ್ಟ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಕರ್ನಾಟಕ ಪ್ರಾಂತ ಸಹಕಾರ್ಯವಾಹ ಪ್ರಕಾಶ್ ಪಿ.ಎಸ್., ಧರ್ಮವೆಂದರೆ ಪೂಜಾ ಪದ್ಧತಿಯಲ್ಲ. ಅದು ಜೀವನ ಪದ್ಧತಿ. ಧರ್ಮ ಎನ್ನುವುದು ಭಾರತದ ಸಂಸ್ಕೃತಿ. ಜಗತ್ತಿಗೆ ಮಾರ್ಗದರ್ಶನ ಮಾಡುವ ವಿಚಾರ ಭಾರತದಲ್ಲಿದ್ದು, ಅದೇ ಧರ್ಮ ಎಂದರು.

ಭಗತ್ಸಿಂಗ್ ಸೇವಾ ಯುವಶಕ್ತಿಯ ಗೌರವಾಧ್ಯಕ್ಷ, ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷತೆ ವಹಿಸಿದ್ದರು.

ಜಾರಿ ನಿರ್ದೇಶನಾಲಯದ ವಕೀಲ ರಾಜಾರಾಮ ಸೂರ್ಯಂಬೈಲು ಮಾತನಾಡಿ, ದೇಶದ ಮತ್ತು ದೇವಸ್ಥಾನಗಳ ಮೇಲೆ ಸ್ವಾತಂತ್ರ್ಯಾ ಪೂರ್ವದಲ್ಲಿ ಆರಂಭಗೊಂಡಿದ್ದ ತೀವ್ರ ದಾಳಿ, ಷಡ್ಯಂತ್ರ ಇಂದಿಗೂ ಮುಂದುವರಿದಿದ್ದು, ಶಬರಿಮಲೆ, ಧರ್ಮಸ್ಥಳ ಕ್ಷೇತ್ರಗಳ ಮೇಲೆ ನಡೆಯುತ್ತಿದೆ. ಶಬರಿಮಲೆಗೆ ಪ್ರವೇಶ ನೀಡುವಂತೆ ಮಹಿಳೆಯರು ಸುಪ್ರೀಂ ಕೋರ್ಟ್ಗೆ ಹೋಗಿರುವುದು ಬೇಸರದ ಸಂಗತಿ. ಮಹಿಳೆಯರಿಗೆ ಹೋಗಬೇಕಾದರೆ ಬೇಕಾದಷ್ಟು ದೇವಸ್ಥಾನಗಳಿವೆ. ಶಬರಿಮಲೆಯ ಅಯ್ಯಪ್ಪನ ಮಹಿಮೆ, ಯಾಕೆ ಪ್ರವೇಶಿಸಬಾರದು ಎಂಬ ಹಿನ್ನೆಲೆ ಅರಿತುಕೊಳ್ಳಬೇಕು ಎಂದು ರಾಜಾರಾಮ ಸೂರ್ಯಂಬೈಲು ಹೇಳಿದರು.

ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಬೆಂಗಳೂರಿನ ತಹಶೀಲ್ದಾರ್ ಅಜಿತ್ ರೈ ಸೊರಕೆ ಮಾತನಾಡಿದರು.

ಎಸ್.ಆರ್. ಸತೀಶ್ಚಂದ್ರ, ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ಆರ್.ಬಿ.ಸುವರ್ಣ, ರಾಷ್ಟ್ರಮಟ್ಟದ ಕ್ರೀಡಾ ಸಾಧಕಿ ಕೀರ್ತಿ ಗೌಡ ಗುಮ್ಮಟೆಗದ್ದೆ, ಸುಗಮ ಸಂಗೀತ ಕ್ಷೇತ್ರದ ಸಾಧಕಿ ವಿಷ್ಮ ಏಕತ್ತಡ್ಕ, ಕಲಾ ಸಾಧಕಿ ಲಿಖಿತಾ ಅವರನ್ನು ಗೌರವಿಸಲಾಯಿತು. ಯುವಶಕ್ತಿಯ ಸ್ಥಾಪಕಾಧ್ಯಕ್ಷ ಚೇತನ್ ಉಪ್ಪಳಿಗೆ ಸ್ವಾಗತಿಸಿದರು. ಶಿಕ್ಷಕಿ ಭಾಗ್ಯಶ್ರೀ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-29-241461796

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.