ರಾಯಚೂರು: ‘ಬಸವಣ್ಣನವರ ಬದುಕು, ಕೊಡುಗೆ ಹಾಗೂ ವಚನಗಳು ಅತ್ಯಂತ ಮೌಲ್ಯಯುತ ವೈಚಾರಿಕ ಚಿಂತನೆಗಳಿಂದ ಕೂಡಿವೆ. ಶರಣರು ಬದುಕನ್ನು ಕಲಾತ್ಮಕಗೊಳಿಸಲು ಹೋರಾಡಿದ ಸಂತರು. ಅವರ ಈ ಉತ್ಕಟ ಹೋರಾಟದ ಫಲವಾಗಿಯೇ ವಿಶ್ವಶ್ರೇಷ್ಠ ವಚನ ಸಾಹಿತ್ಯ ನಿರ್ಮಾಣವಾಯಿತು’ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕಿ ಶಿವಲೀಲಾ ಬಸನಗೌಡ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಸೋಮವಾರ ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕಿ ಇಂದಿರಾ ಆರ್. ಮಾತನಾಡಿದರು. ಸಾಹಿತಿ ವೀರಹನುಮಾನ ಅಧ್ಯಕ್ಷತೆ ವಹಿಸಿದ್ದರು.

ಸಾಹಿತಿಗಳಾದ ಭಗತರಾಜ ನಿಜಾಮಕಾರಿ, ಬಾಬು ಭಂಡಾರಿಗಲ್, ಆಂಜನೇಯ ಜಾಲಿಬೆಂಚಿ, ವಿ.ಎನ್. ಅಕ್ಕಿ, ಡಾ. ಸರ್ವಮಂಗಳ ಸಕ್ರಿ, ಶಾಂತಾ ಕುಲಕರ್ಣಿ, ಬಸವರಾಜ ಬೋರೆಡ್ಡಿ, ಬಸಪ್ಪ ಗದ್ದಿ, ಮಂಜುನಾಥ್ ಪಾಟೀಲ, ಕೆ.ವೀರೇಶ ಬಾಬು, ಮಲ್ಲಿಕಾರ್ಜುನ ಸ್ವಾಮಿ, ರೇವಣಸಿದ್ದಣ್ಣ, ಕ್ಷೀರಲಿಂಗಪ್ಪ, ನಭೀ ಚಾಂದ್, ಮಹಾಂತೇಶ ಬಿರಾದಾರ, ರಾಜು, ಸಾಯಿ ಸಾಗರ ಉಪಸ್ಥಿತರಿದ್ದರು.

ಪ್ರತಿಭಾ ಗೋನಾಳ ಪ್ರಾರ್ಥಿಸಿದರು, ದಂಡಪ್ಪ ಬಿರಾದಾರ ಸ್ವಾಗತಿಸಿದರು, ವೈಶಾಲಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ರಾವುತರಾವ್ ಬರೂರ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-32-1546995855

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.