ರಾಯಚೂರು: ‘ಜುಲೈ 27ರಂದು ಶ್ರೀಕೃಷ್ಣದೇವರಾಯರ ಪಟ್ಟಾಭಿಷೇಕದ ದಿನ, ನಗರದಲ್ಲಿ ದಕ್ಷಿಣ ಭಾರತದ ಪಂಚ ರಾಜ್ಯ ಬಲಿಜ, ಕಾಪು ಹಾಗೂ ಮುನ್ನೂರು ಕಾಪು ಸಮಾಜದ ಬೃಹತ್ ಸಮಾವೇಶ ನಡೆಸಲು ತೀರ್ಮಾನ ಮಾಡಲಾಗಿದೆ’ ಎಂದು ಮುನ್ನೂರು ಕಾಪು ಸಮಾಜದ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಎ.ಪಾಪಾರೆಡ್ಡಿ ತಿಳಿಸಿದರು.

ನಗರದ ವೀರಾಂಜನೇಯ ಕಲ್ಯಾಣ ಮಂಟಪದಲ್ಲಿ ಮುನ್ನೂರು ಕಾಪು ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ ದಕ್ಷಿಣ ಭಾರತ ಪಂಚ ರಾಜ್ಯ ಬಲಿಜ, ಕಾಪು, ಮುನ್ನೂರು ಕಾಪು ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

‘ದಕ್ಷಿಣ ಭಾರತದ ಪಂಚ ರಾಜ್ಯಗಳ ಸಮಾವೇಶದ ಮೂಲಕ ಬಲಿಜ, ಕಾಪು ಹಾಗೂ ಮುನ್ನೂರು ಕಾಪು ಸಮಾಜದ ಜನರನ್ನು ಒಗ್ಗೂಡಿಸಲಾಗುವುದು. ಸಮಾಜದ ಸಮಗ್ರ ಅಭಿವೃದ್ಧಿಗೆ ಶಕ್ತಿ ಪ್ರದರ್ಶನ ಅಗತ್ಯ. ಈ ಹಿನ್ನೆಲೆಯಲ್ಲಿ ಸಮಾವೇಶ ಆಯೋಜಿಸಲಾಗಿದೆ’ ಎಂದು ಹೇಳಿದರು.

‘ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಮೂಲಕ ಸಮಾವೇಶ ಯಶಸ್ವಿಗೊಳಿಸಬೇಕು. ರಾಯಚೂರು ತಾಲ್ಲೂಕಿನ ಒಂದು ಸಾವಿರ ಜನರನ್ನು ಸೇರಿಸಲು ಪ್ರಯತ್ನ ಮಾಡಲಾಗುವುದು. ತೆಲಂಗಾಣ, ಆಂಧ್ರಪ್ರದೇಶ, ಕೇರಳದಲ್ಲಿರುವ ಸಮುದಾಯದ ಜನರಿಗೂ ಆಹ್ವಾನ ನೀಡಲಾಗುವುದು. ಈ ಸಮಾವೇಶದ ಸಂಪೂರ್ಣ ವೆಚ್ಚ ಭರಿಸಲಾಗುವುದು’ ಎಂದರು.

‘ಸಾಮಾಜಿಕ ನ್ಯಾಯ ಮತ್ತು ರಾಜಕೀಯ ಸ್ಥಾನಮಾನದ ಕುರಿತು ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ದಕ್ಷಿಣ ಭಾರತ ಪಂಚ ರಾಜ್ಯಗಳ ಸಮಾವೇಶ ಮಹತ್ವದ್ದಾಗಿದೆ. ಕಾಪು ಸಮಾಜದ ಪ್ರತಿಯೊಬ್ಬರೂ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಬೇಕು’ ಎಂದು ಮನವಿ ಮಾಡಿದರು.

ಸಮಾವೇಶದ ಗೌರವಾಧ್ಯಕ್ಷರನ್ನಾಗಿ ಪಾಪಾರೆಡ್ಡಿ ಅವರನ್ನು ನೇಮಕ ಮಾಡಲಾಯಿತು.

ದೇಶದ ಪಂಚ ರಾಜ್ಯಗಳಿಂದ ಆಗಮಿಸಿದ ಬಲಿಜ, ಕಾಪು, ಮುನ್ನೂರು ಕಾಪು ಸಮಾಜದ ಮುಖಂಡರು ಸಮಾಜದ ಅಭಿವೃದ್ಧಿ ಹಾಗೂ ಸಾಧಕ ಬಾಧಕಗಳ ಕುರಿತು ಚರ್ಚಿಸಲಾಯಿತು.

ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಎಪಿಆರ್ ಬಳ್ಳಾರಿ, ಕಾಳಿದಾಸ ವಿಜಯನಗರ, ರಮೇಶ ಬುಜ್ಜು ಬಳ್ಳಾರಿ, ಅನಿಲ್ ನಾಯ್ಡು, ರಂಗಸ್ವಾಮಿ ಬಳ್ಳಾರಿ, ಯು.ಕೃಷ್ಣಮೂರ್ತಿ, ಶ್ಯಾಮ್ ಶಿವರಾಮ, ಕೊಂಡ ದೇವಯ್ಯ, ವೆಂಕಣ್ಣ, ಕೊತ್ತ ಲಕ್ಷ್ಮಣ, ಜಯಪಾಲರೆಡ್ಡಿ, ಬಂಗಿ ನರಸರೆಡ್ಡಿ, ಜಿ.ಶೇಖರ್ ರೆಡ್ಡಿ, ಎನ್.ಕೇಶವ ರೆಡ್ಡಿ, ಎನ್.ಶ್ರೀನಿವಾಸ್ ರೆಡ್ಡಿ, ಬಿ.ರಾಘವೇಂದ್ರ ರೆಡ್ಡಿ, ಪುಂಡ್ಲ ರಾಜೇಂದ್ರ ರೆಡ್ಡಿ, ಬಯಕಟ್ ಶೇಖರ್ ರೆಡ್ಡಿ, ಎಸ್.ಜನಾರ್ದನ ರೆಡ್ಡಿ, ನಿಂಬೆಕಾಯಿ ಭೀಮರೆಡ್ಡಿ, ಗೋವಿಂದ, ಗಣೇಶ, ವಿನಯ್ ಕುಕ್ಕಲ, ಲಕ್ಷ್ಮಣ, ಸಾಯಿ, ಅಮರನಾಥ ಗದ್ವಾಲ್, ಪ್ರಕಾಶ ಗಜೇಂದ್ರಗಡಂ, ಪಾಂಡುರಂಗ ಹೊಸಪೇಟೆ, ಬಿ.ನಾಗರಾಜ್ ಕಮಲಪೂರು, ಡಿ.ಶಿವರಾಜು ರೆಡ್ಡಿ, ಕೆ.ಅಮರೇಶರೆಡ್ಡಿ ಹಾಗೂ ಯು.ಗಣೇಶ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-32-2036642683

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.