ಪಜಾವಾಣಿ ವಾರ್ತೆ

ರಾಯಚೂರು: ಶ್ರೀ ಮಾಧ್ವ ರಾದ್ಧಾಂತ ಸಂವರ್ಧಕ ಸಭಾ, ಶ್ರೀ ಭಾಗವತಾಶ್ರಮ ಪ್ರತಿಷ್ಠಾನ ಮತ್ತು ಲೋಕ ಸಂಸ್ಕೃತಿ ಕಲಾ ವಿದ್ಯಾ ವಿಕಾಸ ಪ್ರತಿಷ್ಠಾನದ ಆಶ್ರಯದಲ್ಲಿ ವೇದವ್ಯಾಸ ಜಯಂತಿ, ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 84ನೇ ಅಧಿವೇಶನ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 26ನೇ ಆರಾಧನೋತ್ಸವ ನಗರದ ಮುಂಗ್ಲಿ ಮುಖ್ಯಪ್ರಾಣ ದೇವರ ಗುಡಿ ಸಭಾಂಗಣದಲ್ಲಿ ನಡೆಯಿತು.

1963ರಲ್ಲಿ ಕಂಚಿ ಶ್ರೀ ಚಂದ್ರಶೇಖರ ಸರಸ್ವತೀ ಶ್ರೀಗಳಿಂದ ಸ್ಥಾಪನೆಗೊಂಡು ಭಾರತೀಯ ಶಾಸ್ತ್ರ ವಿದ್ಯೆ, ಸಂಸ್ಕೃತಿ, ಮತ್ತು ವೇದದ ಮೌಖಿಕ ಪರಂಪರೆ ಪಾಲನೆ ಮಾಡುತ್ತಿರುವ ಚೆನ್ನೈನ ವೇದ ರಕ್ಷಣ ನಿಧಿ ಟ್ರಸ್ಟ್ಗೆ ವೇದಪೀಠ ಪ್ರಶಸ್ತಿ ಹಾಗೂ ₹ 1 ಲಕ್ಷ ನಗದು, ಸನ್ಮಾನಪತ್ರ ಪ್ರದಾನ ಮಾಡಲಾಯಿತು.

ಮುಂಬೈನ ಶ್ರೀ ಸತ್ಯಧ್ಯಾನ ವಿದ್ಯಾಪೀಠದಲ್ಲಿ ಸಮಗ್ರ ವೇದಾಧ್ಯಯನ ಮಾಡಿ ಹೈದರಾಬಾದ್ನಲ್ಲಿ 30 ವರ್ಷಗಳಿಂದ ವೇದವ್ಯಾಸ ವಿದ್ಯಾಪೀಠ ಮುನ್ನಡೆಸುತ್ತ ನೂರಾರು ವಿದ್ಯಾರ್ಥಿಗಳನ್ನು ವೇದ ಪಂಡಿತರನ್ನಾಗಿಸಿದ ಪಂಡಿತ ಚಿಟಗುಪ್ಪ ಪದ್ಮನಾಭ ಆಚಾರ್ಯರಿಗೆ ಶ್ರೀ ಸತ್ಯತೀರ್ಥ ಪ್ರಶಸ್ತಿ, ₹ 1 ಲಕ್ಷ ನಗದು, ಸನ್ಮಾನಪತ್ರ ನೀಡಲಾಯಿತು.

ಶ್ರೀ ರಾಜವಿದ್ಯಾಮಾನ್ಯ ಪ್ರಶಸ್ತಿ: ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಪೇಜಾವರ ವಿಶ್ವೇಶತೀರ್ಥರ ಬಳಿ ಅಧ್ಯಯನ ನಡೆಸಿ ಸಂಶೋಧನಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ ಪ್ರವಚನಕಾರ ಬೆಮ್ಮತ್ತಿ ವಿಜಯೀಂದ್ರಾಚಾರ್ಯರು ಮೈಸೂರಿನಲ್ಲಿ ಸ್ತ್ರೀ ಧರ್ಮ- ಸಂಸ್ಕೃತಿ ಪಾಲನೆಗಾಗಿ 30 ಜನ ಹೆಣ್ಣುಮಕ್ಕಳಿಗೆ ಅಭೃಂಣೀ ಗುರುಕುಲ ನಡೆಸುತ್ತಿದ್ದಾರೆ. ಅವರಿಗೆ ಶ್ರೀಮಠವು ‘ಶ್ರೀ ರಾಜವಿದ್ಯಾಮಾನ್ಯ’ ಪ್ರಶಸ್ತಿ, ₹ 50 ಸಾವಿರ ನಗದು ಮತ್ತು ಸನ್ಮಾನಪತ್ರ ಪ್ರದಾನ ಮಾಡಲಾಯಿತು.

ರಾಜಹಂಸ ಪ್ರಶಸ್ತಿ: ಬಾಗಲಕೋಟೆಯಲ್ಲಿ ಅಖಿಲ ಭಾರತ ಮಾಧ್ವ ಮಹಾ ಮಂಡಲದ ಮಾರ್ಗದರ್ಶಕ, ವಿಶ್ವ ಮಾಧ್ವ ಮಹಾಪರಿಷತ್ತಿನ ಸಂಚಾಲಕ, ಐತರೇಯ ಸಂಶೋಧನಾ ಪ್ರಕಾಶನದ ನಿರ್ದೇಶಕ, ಮಾಧ್ವ ಸಾಹಿತ್ಯ ಕ್ಷೇತ್ರಕ್ಕೆ 30 ವರ್ಷಗಳಿಂದ ವಿಶೇಷ ಕೊಡುಗೆ ನೀಡುತ್ತಿರುವ ವಿದ್ವಾನ್ ನಾಗಸಂಪಿಗೆ ರಘೋತ್ತಮ ಆಚಾರ್ಯರಿಗೆ ರಾಜಹಂಸ ಪ್ರಶಸ್ತಿ, ₹ 50 ಸಾವಿರ ನಗದು ಮತ್ತು ಸನ್ಮಾನಪತ್ರ ಕೊಡಲಾಯಿತು.

ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಗಣ್ಯರು ಹಾಗೂ ಮಠದ ಗಣ್ಯರು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ನಗರದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಶೋಭಾಯಾತ್ರೆ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-32-992483382

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.