ರಾಯಚೂರು: ‘ಬದುಕಿನ ಬೆಳಕಿಗೆ ವಚನಗಳು ದಾರಿ ತೋರುತ್ತವೆ. ಶರಣರು ಕ್ಷಣಿಕ ಸುಖಕ್ಕಿಂತ ಪರಮ ಸುಖದ ಕಡೆಗೆ ಸಾಗಿದ್ದರು. ಬಸವಣ್ಣವರು ತಮ್ಮ ವಚನಗಳಲ್ಲಿ ಇದನ್ನು ಸಾರಿ ಹೇಳಿದ್ದಾರೆ’ ಎಂದು ವಾಲ್ಮೀಕಿ ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯದ ಡಿನ್ ಪ್ರೊ.ಪಾರ್ವತಿ ಸಿ.ಎಸ್. ಅಭಿಪ್ರಾಯಪಟ್ಟರು.

ತಾಲ್ಲೂಕಿನ ಯರಗೇರಾ ಸಮೀಪದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಸವಣ್ಣ ನವರಿದ್ದ ಅಲ್ಪಕಾಲಾವಧಿಯಲ್ಲಿ ಆರ್ಥಿಕ, ಸಾಮಾಜಿಕ, ಧಾರ್ಮಿಕವಾಗಿ ಜನಜೀವನದ ವಿವಿಧ ಸ್ತರಗಳಲ್ಲಿ ಹೊಸತನ ಮೂಡಿತು. ತಮ್ಮ ಬದುಕಿನ ಸರ್ವಸ್ವವನ್ನೆಲ್ಲ ವಚನಗಳ ಮೂಲಕ ಕನ್ನಡ ಕುಲಕೋಟಿಗೆ ಧಾರೆ ಎರೆದರು’ ಎಂದು ಹೇಳಿದರು.

ವಾಣಿಜ್ಯ ನಿಕಾಯದ ಡಿನ್ ಪ್ರೂ.ಪಿ.ಭಾಸ್ಕರ್, ಸಮಾಜ ಕಾರ್ಯ ವಿಭಾಗದ ಉಪನ್ಯಾಸಕ ಸುನೀಲ ಕುಮಾರ, ಬೋಧಕೇತರ ಸಿಬ್ಬಂದಿ ಮೋಹನ, ರವಿ, ಪ್ರದೀಪ್, ಕಿರಣ ಉಪಸ್ಥಿತರಿದ್ದರು.

ಮಲ್ಲಿಕಾರ್ಜುನ ವಚನ ಗೀತೆ ಹಾಡಿದರು. ಇಂಗ್ಲಿಷ್ ಉಪನ್ಯಾಸಕ ಅನಿಲ ಅಪ್ರಾಳ್ ಸ್ವಾಗತಿಸಿ, ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-32-206477245

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.