ರಂಭಾಪುರಿ ಪೀಠ (ಬಾಳೆಹೊನ್ನೂರು): ಬದುಕಿನಲ್ಲಿ ಸಾಧಿಸುವ ಗುರಿಯತ್ತ ಎಷ್ಟು ದೊಡ್ಡ ಹೆಜ್ಜೆ ಇಟ್ಟಿದ್ದೇವೆ ಎಂಬುದು ಮುಖ್ಯವಲ್ಲ. ಆತ್ಮ ವಿಶ್ವಾಸದಿಂದ ಮೊದಲ ಹೆಜ್ಜೆ ಇಡುವುದು ಬಹಳ ಮುಖ್ಯ. ಬಡತನ ಬಂದಿದೆ ಎಂದು ಕುಗ್ಗುವುದು ಸಿರಿತನ ಬಂದಿದೆ ಎಂದು ಉಬ್ಬುವುದು ಬೇಡ. ಕತ್ತಲೆ ಸರಿದ ಮೇಲೆ ಬೆಳಕು ಬಂದೇ ಬರುತ್ತದೆ ಎಂಬ ನಂಬಿಕೆಯಿರಲಿ ಎಂದು ರಂಭಾಪುರಿ ಪೀಠದ ವೀರ ಸೋಮೇಶ್ವರ ಸ್ವಾಮೀಜಿ ಹೇಳಿದರು.

ರಂಭಾಪುರಿ ಪೀಠದಲ್ಲಿ ಗುರುವಾರ ನಡೆದ ದವನದ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಭಗವಂತನ ಸೃಷ್ಟಿಯನ್ನು ಕೆಡಿಸುವವರ ಸಂಖ್ಯೆ ಹೆಚ್ಚಿದೆ. ಕೆಟ್ಟು ಹೋದುದನ್ನು ಸರಿಪಡಿಸುವವರ ಸಂಖ್ಯೆ ಬಹಳ ಕಡಿಮೆಯಿದೆ. ಸರಿಪಡಿಸುವ ಪ್ರಜ್ಞಾವಂತರ ಸಂಖ್ಯೆಯನ್ನು ಹೆಚ್ಚಿಸುವ ಕೆಲಸ ಆಗಬೇಕಾಗಿದೆ. ಸತ್ಯ ಹೇಳು, ಧರ್ಮದಂತೆ ನಡೆ ಎಂದು ಶಾಸ್ತ್ರ ಹೇಳುತ್ತದೆ. ಆದರೆ ಇಂದು ಸುಳ್ಳು, ಮೋಸ, ಕಪಟತನ ತುಂಬಿ ತುಳುಕುತ್ತಿದೆ. ಸುಳ್ಳುಗೆ ವೇಗವಿರುವುದು ಎಷ್ಟು ನಿಜವೋ, ಸತ್ಯಕ್ಕೆ ಶಕ್ತಿ ಇರುವುದು ಅಷ್ಟೇ ಸತ್ಯ ಎಂದರು.

ಸೋಲ್ಲಾಪುರ ದಕ್ಷಿಣ ತಾಲ್ಲೂಕಿನ ಶ್ರೀಮದ್ ರಂಭಾಪುರಿ ಶಾಖಾ ಹಿರೇಮಠದ ನೂತನ ಪಟ್ಟಾಧ್ಯಕ್ಷ ಅಭಿನವ ಶಿವಾನಂದ ಶಿವಾಚಾರ್ಯ ಸ್ವಾಮಿಗೆ ಪೀಠದಿಂದ ಗುರು ಪಟ್ಟಾಧಿಕಾರದ ಸಂಪುಟ ಪತ್ರ ಪ್ರದಾನ ಮಾಡಿದರು. 10 ಜನ ವೀರಮಾಹೇಶ್ವರ ವಟುಗಳಿಗೆ ಶಾಸ್ತ್ರೋಕ್ತವಾಗಿ ಶಿವದೀಕ್ಷಾ ಅಯ್ಯಾಚಾರ ಜರುಗಿತು.

ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯ, ಮಾಜಿ ಶಾಸಕರಾದ ಕೆ.ಪಿ.ಪ್ರಭುಕುಮಾರ್, ಜಿ.ಎಸ್.ಪರಮೇಶ್ವರಪ್ಪ, ಪ್ರಮುಖರಾದ ಮುರುಂಡಿ ಶಿವಯ್ಯ, ಕೆ.ಪಿ.ಚಂದ್ರಶೇಖರ, ಬೆಂಗಳೂರಿನ ಸಿದ್ಧಲಿಂಗೇಶ್ವರ ಗುಂಡಗಟ್ಟಿ, ಶಿವಮೊಗ್ಗದ ಗಂಗಾಧರ ಗುಂಡಗಟ್ಟಿ, ಶಿರಸಿಯ ಎ.ರವೀಂದ್ರ ನಾಯ್ಕ, ಪ್ರಭುದೇವ ಕಲ್ಮಠ, ಜಗದ್ಗುರು ರೇಣುಕಾಚಾರ್ಯ ಗುರುಕುಲದ ಕುಲಪತಿ ಬೆಳಗಾಲಪೇಟೆ ಹಿರೇಮಠ ಸಿದ್ಧಲಿಂಗ ಶಾಸ್ತ್ರಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-126-1506060245

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.