ರಾಣೆಬೆನ್ನೂರು: ‘ಶಿವದೀಕ್ಷೆಯು ಆತ್ಮಶುದ್ಧಿ ಮತ್ತು ಶಿವಸಾಕ್ಷಾತ್ಕಾರದ ಮಾರ್ಗವಾಗಿದೆ. ಪಂಚಾಚಾರ ಮತ್ತು ಅಷ್ಟಾವರಣಗಳನ್ನು ನಿಷ್ಠೆಯಿಂದ ಪಾಲಿಸುವ ಮೂಲಕ ಜೀವನದಲ್ಲಿ ಶುದ್ಧತೆ ಹಾಗೂ ಶಾಂತಿ ಸಾಧಿಸಬಹುದು. ಇಷ್ಟಲಿಂಗ ಪೂಜೆ, ಜಪ ಮತ್ತು ಧ್ಯಾನದ ಮೂಲಕ ಭಕ್ತರು ತಮ್ಮೊಳಗಿನ ದೈವಿಕತೆಯನ್ನು ಅರಿಯಬೇಕು’ ಎಂದು ಶಿಕಾರಿಪುರದ ದಿಂಡದಹಳ್ಳಿ ಮಠದ ಅಧ್ಯಕ್ಷ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಮೇಡ್ಲೇರಿ ರಸ್ತೆಯ ಶಿವಾನಂದ ತಪೋಮಂದಿರದಲ್ಲಿ ಬಸವೇಶ್ವರ ಜಯಂತಿ ಅಂಗವಾಗಿ ಸೋಮವಾರ ಜಂಗಮ ಹಾಗೂ ಶಿವಭಕ್ತರಿಗೆ ಅಖಂಡ 28ನೇ ವರ್ಷದ ಶಿವದೀಕ್ಷೆ ಹಾಗೂ ಧರ್ಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬೆಳಿಗ್ಗೆ ಮರುಳ ಸಿದ್ಧೇಶ್ವರ, ಅಮ್ಮ ನಾಗದೇವತೆ ಮತ್ತು ನವದುರ್ಗೆಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಶಿವಾನಂದ ತಪೋ ಮಂದಿರದ ಆವರಣದಲ್ಲಿ ಲೋಕಕಲ್ಯಾಣ, ವಿಶ್ವಶಾಂತಿ, ರೈತರ ಸಮೃದ್ಧಿ ಹಾಗೂ ದೇಶದ ಸುಸ್ಥಿರತೆಗೆ ವೀರಭದ್ರೇಶ್ವರ ಹೋಮ, ಜಪ, ಧ್ಯಾನ ಹಾಗೂ ಪೂಜಾ ವಿಧಿಗಳು ಕಾರ್ಯಕ್ರಮಗಳು ಜರುಗಿದವು.

ಸೇವಾ ಸಮಿತಿ ಶಿವಪ್ರಸಾದಿ ಮಠದ ಅಧ್ಯಕ್ಷೆ ಗಿರಿಜಾದೇವಿ ರುದ್ರಯ್ಯ ಪ್ರಸಾದಿಮಠ, ರಾಜಣ್ಣ ಖಂಡೆಬಾಗೂರ, ಹೇಮಣ್ಣ ಗಡ್ಡಿಬಸಾಪುರ ಮಠ, ಅರ್ಚಕ ಬಸಯ್ಯ, ನಗರಸಭೆ ಮಾಜಿ ಸದಸ್ಯ ಪ್ರಭುಸ್ವಾಮಿ ಕರ್ಜಗಿಮಠ, ಕಿರಣ್ ಹಿರೇಮಠ, ಪ್ರೇಮ ಸಾಗರ ಹಿರೇಮಠ, ಗಂಗಾಧರ ಕರ್ಜಗಿಮಠ, ಅರ್ಪಣಾ ಕೆ. ಹಿರೇಮಠ, ಅಕ್ಷತಾ ಕರ್ಜಗಿಮಠ ಹಾಗೂ ಅರ್ಚನಾ ಪ್ರಸಾದಿಮಠ, ಜಗದೀಶ ಮಳಿಮಠ, ವಿ.ಎಸ್. ಹಿರೇಮಠ, ಪಂಚಾಕ್ಷರಿ ಮುದಗಲ್ಮಠ ವೀರನಗೌಡ ಪಾಟೀಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-22-2061967167

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.