ರಟ್ಟೀಹಳ್ಳಿ: ಧಾರ್ಮಿಕ ಆಚರಣೆಗಳು ಮನುಷ್ಯನ ಜೀವನ ಪಾವನಗೊಳಿಸುವುದರೊಂದಿಗೆ ಸನ್ನಡತೆ ಹೊಂದಲು ದಾರಿದೀಪವಾಗುತ್ತದೆ. ಶಿಕ್ಷಣದಿಂದ ಜ್ಞಾನ ಪ್ರಾಪ್ತಿ ಹೇಗೆ ಸಾಧ್ಯವೋ ಹಾಗೇ ಧರ್ಮಚರಣೆಗಳಿಂದ ಸನ್ನಡತೆ ಪ್ರಾಪ್ತಿಯಾಗುತ್ತದೆ ಎಂದು ರಟ್ಟೀಹಳ್ಳಿ ಸದಾನಂದಯ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಭಂಟೇಶ್ವರ ದೇವಸ್ಥಾನ ದಲ್ಲಿ ಆರ್ಯವೈಶ್ಯ ಸಮಾಜದಿಂದ ಭಾನುವಾರ ಜರುಗಿದ ವಾಸವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗುರು-ಹಿರಿಯರು, ತಂದೆ-ತಾಯಿಗಳ ಮೇಲೆ ಮಕ್ಕಳು ಭಯಭಕ್ತಿಹೊಂದಲು ಪಾಲಕರು ಕಾರಣೀಭೂತರಾಗುತ್ತಾರೆ. ಮಕ್ಕಳಲ್ಲಿ ಸಂಸ್ಕೃತಿ ಬೆಳೆಸುವಲ್ಲಿ ಪಾಲಕರು ವಿಶೇಷ ಗಮನಹರಿಸಬೇಕು. ವೀರ ಮಹಿಳೆ ವಾಸವಿ ಮಾತಾ. ಅಂತಹ ದೇವಿಯ ಆರಾಧನೆಯಿಂದ ಸಮಸ್ತ ಮನುಜುಕುಲ ಮೋಕ್ಷ ಪಡೆ ಯಲು ದಾರಿದೀಪವಾಗಲಿದೆ ಎಂದರು.

ಸದಾನಂದಯ್ಯ ಸ್ವಾಮೀಜಯನ್ನು ಆರ್ಯವೈಶ್ಯ ಸಮಾಜದವರು ಸನ್ಮಾನಿಸಿ ದರು. ಕಳಸ ಪೂಜೆ, ರುದ್ರಾಭಿಷೇಕ, ಅಲಂಕಾರ, ವಾಸವಿ ಪಲ್ಲಕ್ಕಿ ಉತ್ಸವ ಪಟ್ಟ ಣದ ಪ್ರಮುಖ ಬೀದಿಗಳಲ್ಲಿ ನೆರವೇರಿತು.

ಶಂಕರಾಚಾರ್ಯರ ಜನ್ಮಸ್ಥಳವಾದ ಕೇರಳದ ಕಾಲಟಿಯಲ್ಲಿ ತಯಾರಿಸಲಾದ ಶಿವಲಿಂಗವನ್ನು ಶೃಂಗೇರಿ ವಿಜಯಕುಮಾರ ಗುಪ್ತಾ ದೇವಸ್ಥಾನಕ್ಕೆ ಸಮರ್ಪಣೆ ಮಾಡಲಾಯಿತು.

ಆರ್ಯವೈಶ್ಯ ಸಮಾಜದ ಅಧ್ಯಕ್ಷ ಪ್ರದೀಪ ಭೀಮಪ್ಪನವರ, ಉಪಾಧ್ಯಕ್ಷ ಉದಯ ಕೋಟಿಹಾಳ, ರಮೇಶ ಭೀಮಪ್ಪನವರ, ವಾಸವಿ ಮಹಿಳಾ ಸಮಾಜದ ಅಧ್ಯಕ್ಷೆ ಶೈಲಜಾ ಭೀಮಪ್ಪನವರ, ರವೀಂದ್ರ ಕೋಟಿಹಾಳ, ಗಿರೀಶ ಭೀಮಪ್ಪನವರ, ಅರುಣ ಕೋಟಿಹಾಳ, ಕೃಷ್ಣಮೂರ್ತಿ ಶೆಟ್ಟರ, ಸತೀಶ ಶೆಟ್ಟರ, ಶಿವರಾಜ ಮಾನಪ್ಪನವರ, ಕೃಷ್ಣಮೂರ್ತಿ ಚಿನ್ನಾನವರ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-22-1623458333

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.