ರಟ್ಟೀಹಳ್ಳಿ: ‘ಸನ್ಮಾರ್ಗದಿಂದ ಜೀವನ ಕಟ್ಟಿಕೊಂಡ ಮನುಷ್ಯನಿಗೆ ಸಮಾಜದಲ್ಲಿ ಗೌರವ ಲಭಿಸುತ್ತದೆ. ಪರರ ಹಿತಬಯಸಿ ಸಮಾಜಮುಖಿ ಕಾರ್ಯಗಳೊಂದಿಗೆ ಮನುಷ್ಯ ಜೀವನ ಸಾಗಿಸಬೇಕು ಎಂದು ಹೊಸದುರ್ಗದ ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದರು.

ಪಟ್ಟಣದ ಕೋಟೆಯಲ್ಲಿ ನೂತನವಾಗಿ ನಿರ್ಮಿಸಲಾದ ರಾಜರ್ಷಿ ಭಗೀರಥ, ದುರ್ಗಾದೇವಿ, ನಾಗದೇವತೆ ಹಾಗೂ ಪಾದಗಟ್ಟಿ ದೇವತಾ ವಿಗ್ರಹಗಳ ಪ್ರತಿಷ್ಠಾಪನೆ ನಿಮಿತ್ತ ಮಂಗಳವಾರ ನಡೆದ ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಮಾಜದ ಸಣ್ಣ ಸಮುದಾಯವಾದ ಉಪ್ಪಾರ ಸಮುದಾಯದವರು ಸಂಘಟಿತರಾಗಿ ಧರ್ಮಕಾರ್ಯದಲ್ಲಿ ತೊಡಗಿಕೊಂಡಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಉಪ್ಪಾರ ಸಮಾಜಕ್ಕೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಲು ಸರ್ಕಾರ ಹಂತದಲ್ಲಿ ಪ್ರಯತ್ನಿಸಲಾಗುತ್ತಿದೆ’ ಎಂದರು.

ರಟ್ಟೀಹಳ್ಳಿ ಕಬ್ಬಿಣಕಂಥಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಉಪ್ಪಾರ ಸಮಾಜ ಬಹಳಷ್ಟು ಪರಿಶ್ರಮ ಜೀವಿಗಳು, ಕಾಯಕ ಪ್ರಜ್ಞೆಯಿಂದ ಜೀವನ ಕಟ್ಟಿಕೊಂಡವರು’ ಎಂದರು.

ತಿಪ್ಪಾಯಿಕೊಪ್ಪ ಗುರುಮೂಕಪ್ಪ ಶಿವಯೋಗಿಗಳ ಮಠದ ಮಹಾಂತ ಸ್ವಾಮೀಜಿ ಹಾಗೂ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಶಿವಕುಮಾರ ಉಪ್ಪಾರ ಮಾತನಾಡಿದರು. ತಿಪ್ಪಾಯಿಕೊಪ್ಪ ಗುರುಮೂಕಪ್ಪ ಶಿವಯೋಗಿಗಳ ಮಠದ ಮಹಾಂತ ಸ್ವಾಮೀಜಿ, ಮಾವಿನತೋಪ ಗ್ರಾಮದ ಸತ್ಯಪ್ರವೋದೇಂದ್ರ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಈ ವೇಳೆ ಜೋಡಿ ನವದಂಪತಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದೇವಸ್ಥಾನ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು. ಮುಖಂಡರಾದ ಡಿ.ಎಂ. ಸಾಲಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ, ಪುನೀತ ಬಿ.ಆರ್. ವೆಂಕಟೇಶ ಉಪ್ಪಾರ, ಮಂಜುಳಾ ಅಗಡಿ, ರಾಜು ಉಪ್ಪಾರ, ಸುಧಾಮ ಉಪ್ಪಾರ, ಎಂ.ಜಿ. ಘೋರ್ಪಡೆ, ಮಂಜುನಾಥ ಉಪ್ಪಾರ, ಶಂಭಣ್ಣ ಗೂಳಪ್ಪನವರ, ಸುರೇಶ ಮಲ್ಲಾಡದ, ಹನುಮಂತಪ್ಪ ಗಾಜೇರ, ವಿಶ್ವನಾಥ ಅಧ್ಯಾಪಕ, ರವಿ ಹದಡೇರ, ದೇವರಾಜ ನಾಗಣ್ಣನವರ, ಕೆ.ಎಲ್. ಉಪ್ಪಾರ, ಇದ್ದರು. ಶಿಕ್ಷಕ ಚನ್ನವೀರ ಚಕ್ರಸಾಲಿ, ರಾಜು ಹರವಿಶೆಟ್ಟರ ನಿರೂಪಿಸಿದರು. ಭಕ್ತರಿಗೆ ಅನ್ನಸಂತರ್ಪಣೆ ಜರುಗಿತು. ಸ್ನೇಹಾ ಮೆಲೋಡಿಸ್ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-22-1307838255

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.