ಸಾಗರ: ‘ಧರ್ಮಾಚರಣೆಯೇ ಮುಕ್ತಿ ಮಾರ್ಗಕ್ಕೆ ಇರುವ ಹೆದ್ದಾರಿ’ ಎಂದು ಚರ್ಯಾಶಿರೋಮಣಿ ಶ್ರೀ 108 ವಿಧಿತ ಸಾಗರ ಮುನಿ ಮಹಾರಾಜ ಹೇಳಿದರು.

ಇಲ್ಲಿನ ವಿನೋಬ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿಗಂಬರ ಜೈನ ಸಮಾಜ ಸೇವಾ ಟ್ರಸ್ಟ್ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು.

‘ಜೈನ ಧರ್ಮದಲ್ಲಿ ಶ್ರಮಣ ಮತ್ತು ಶ್ರಾವಕ ಎಂಬ ಎರಡು ರೀತಿಯ ಧರ್ಮಾಚರಣೆಗಳಿವೆ. ಮುನಿಧರ್ಮ ವರ್ಗಕ್ಕೆ ಸೇರಿದ ತ್ಯಾಗಿಗಳು ಅತ್ಯಂತ ಕಠಿಣವಾದ ಶ್ರಮಣ ಆಚರಣೆಯನ್ನು ಅನುಸರಿಸುತ್ತಾರೆ. ಲೌಕಿಕ ಬದುಕಿನಲ್ಲಿರುವ ಶ್ರಾವಕರು ದುಶ್ಚಟಗಳಿಂದ ದೂರವಿದ್ದು ಧರ್ಮ ಪಾಲಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಜೈನ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ಅಗತ್ಯಯುಳ್ಳ ವರ್ಗಕ್ಕೆ ಅಗತ್ಯ ವಸ್ತುಗಳನ್ನು ದಾನ ಮಾಡುವುದು ಧಾರ್ಮಿಕ ಆಚರಣೆಯ ಒಂದು ಭಾಗ. ಸದಭಿರುಚಿಯ ಮಾರ್ಗವನ್ನು ಅನುಸರಿಸುವುದೂ ಧರ್ಮಕ್ಕೆ ಬೆಲೆ ನೀಡಿದಂತೆ’ ಎಂದರು.

ಪ್ರಮುಖರಾದ ಎಸ್.ವಿ.ಹಿತಕರ ಜೈನ್, ವಿ.ಟಿ.ಸ್ವಾಮಿ, ಜಿನದತ್ತ ಜೈನ್, ರತಿ ಹೊಯ್ಸಳ, ಸುನಿಲ್ ಕುಮಾರ್, ನೀಲೇಂದ್ರ ಜೈನ್, ಪುಟ್ಟಸ್ವಾಮಿ ಜೈನ್, ಮೇಘರಾಜ್, ಲೋಕರಾಜ್, ಪಾರ್ಶ್ವನಾಥ, ಓಂಕಾರ್ ಜೈನ್, ಜೀವನ್, ಹೇಮಾವತಿ, ಸುಷ್ಮಾ, ಗೀತಾ, ಯಶೋಧರ, ಸುಧಾ ಕಾನೂರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-42-1839256247

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.