ಕೆಂಭಾವಿ: ‘ಆದಿ ಶಂಕರಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಸದೃಢವಾಗಿರುವುದರಿಂದ ಸನಾತನ ಧರ್ಮವು ಯಾರೂ ಅಲ್ಲಾಡಿಸದಷ್ಟು ಗಟ್ಟಿಯಾಗಿದೆ’ ಎಂದು ಜೋಶಿ ಸಾಹಿತ್ಯ ವೇದಿಕೆ ಅಧ್ಯಕ್ಷ ಶ್ರೀಪಾದ ಭಟ್ ಜೋಶಿ ಹೇಳಿದರು.

‘ವೇದ ಮತ್ತು ಉಪನಿಷತ್ತಿನಲ್ಲಿ ಸನಾತನ ಧರ್ಮಕ್ಕೆ ಸ್ಪಷ್ಟ ಮತ್ತು ನಿಖರವಾದ ವ್ಯಾಖ್ಯಾನ ನೀಡಿದ್ದಾರೆ.

ವಿನಾಶದ ಅಂಚಿನಲ್ಲಿದ್ದ ಸನಾತನ ಧರ್ಮ ರಕ್ಷಿಸಿದ್ದು ಶಂಕರಾಚಾರ್ಯರು, ಸನಾತನ ಧರ್ಮದ ವೇದ ಮತ್ತು ಇತಿಹಾಸ ಸಂರಕ್ಷಣೆ ಮಾಡಿ ತನ್ಮೂಲಕ ಧರ್ಮ ಸಂರಕ್ಷಣೆ ಮಾಡದೆ ಹೋಗಿದ್ದರೆ ನಾವು ನಮ್ಮ ಸಂಸ್ಕೃತಿ ಉಳಿಸಿಕೊಳ್ಳುವುದು ಕಷ್ಟವಾಗಿತ್ತು. ಅಂತಹ ಮಹತ್ಕಾರ್ಯ ಮಾಡಿರುವ ಶಂಕರಾಚಾರ್ಯರು ಸದಾ ಸ್ಮರಣೀಯರು’ ಎಂದು ಹೇಳಿದರು.

‘ಆದಿ ಶಂಕರಾಚಾರ್ಯರು 32 ವರ್ಷದವರಿದ್ದಾಗ ಅವರು ಮೂರು ಬಾರಿ ಭಾರತದಲ್ಲೆಡೆ ಕಾಲ್ನಡಿಗೆಯಲ್ಲಿ ಸಂಚರಿಸಿ ದೇಶವನ್ನು ಏಕೀಕರಿಸುವ ಮಹತ್ತರ ಕಾರ್ಯವನ್ನು ನೆರವೇರಿಸಿದರು ಸನಾತನ ವೈದಿಕ ಧರ್ಮ ಮತ್ತು ಅದ್ವೈತ ಸಿದ್ದಾಂತವನ್ನು ನಿರಂತರವಾಗಿ ಪ್ರಚಾರ ಮಾಡುವ ಉದ್ದೇಶದಿಂದ ಭಾರತದ ಪುರಿ, ಶೃಂಗೇರಿ, ದ್ವಾರಕ ಮತ್ತು ಬದರಿಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿ ನಿರಂತರವಾಗಿ ಧರ್ಮ ಜಾಗೃತಿ ಉಳಿವಂತೆ ಮಾಡಿದರು’ ಎಂದರು.

ಜಯಸತ್ಯ ಪ್ರಮೋದ ಸೇವಾ ಸಂಘದ ಅಧ್ಯಕ್ಷ ವಾಮನ್ ರಾವ್ ದೇಶಪಾಂಡೆ, ಗಜಾನನ ಮಹಾರಾಜ್ ನರಸಿಂಹರಾವ್ ಕುಲಕರ್ಣಿ, ಕೃಷ್ಣಾಜಿ ಕುಲಕರ್ಣಿ ಬೊಮ್ಮನಹಳ್ಳಿ, ಹಳ್ಳೆರಾವ್ ಚನ್ನೂರ, ವೆಂಕಟೇಶ್ ನಾಡಿಗೇರ್, ಪ್ರಮೋದ ಸರಡಗಿ, ಹಳ್ಳೆರಾವ್ ಕುಲಕರ್ಣಿ, ಶಿವ ಭಟ್ಟ ಜೋಶಿ, ಗುಂಡು ಭಟ್ ಜೋಶಿ, ಆಶಿಶ್ ದೇಶಪಾಂಡೆ, ಗಿರೀಶ್ ಭಟ್ ಜೋಶಿ ಸೇರದಂತೆ ಕೆಂಭಾವಿ ಪಟ್ಟಣದ ಎಲ್ಲಾ ವಿಪ್ರ ಸಮಾಜದವರು ಪಾಲ್ಗೊಂಡಿದ್ದರು.

ಶಂಕರಾಚಾರ್ಯರ ಭಾವಚಿತ್ರದ ಮೆರವಣಿಗೆ ಶ್ರೀಪಾದ ಭಟ್ ಜೋಶಿಯವರ ಮನೆ ಶಾಂತನಿಕೇತನದಿಂದ ಉತ್ತರದಿ ಮಠದವರೆಗೆ ನಡೆಯಿತು. ನಂತರ ಶಂಕರ ಭಗವತ್ಪಾದರ ಮೂರ್ತಿಗೆ ರುದ್ರಾಭಿಷೇಕ ಪಂಚಾಮೃತ ಅಭಿಷೇಕ ಹಾಗೂ ಶಂಕರ ಭಗವತ್ ಪಾದಾಚಾರ್ಯರ ಅಷ್ಟೋತ್ತರ ಶತನಾಮಾವಳಿ ತೀರ್ಥ ಪ್ರಸಾದ ಜರುಗುತು ಶ್ರೀಪಾದ ಭಟ್ ಜೋಶಿ ಅವರಿಂದ ಅನ್ನ ಸಂತರ್ಪಣೆ ಜರುಗಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-30-418416401

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.