ಸತ್ತಿಗೇರಿ: ‘ಇಂದು ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿ ಬದುಕಿನಲ್ಲಿ ಶಾಂತಿ, ನೆಮ್ಮದಿ ಕಂಡುಕೊಳ್ಳಬೇಕು’ ಎಂದು ಶಿರಹಟ್ಟಿಯ ಫಕ್ಕೀರೇಶ್ವರ ಸಂಸ್ಥಾನಮಠದ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ಆಲದಕಟ್ಟಿ ಕೆ.ಎಂ. ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಿವಯೋಗೀಶ್ವರ ಜಾತ್ರೆ, ಹೊಸ ರಥದ ಲೋಕಾರ್ಪಣೆ, ಆಧ್ಯಾತ್ಮಿಕ ಪ್ರವಚನ, ಮುತ್ತೈದೆಯರಿಗೆ ಉಡಿ ತುಂಬುವುದು ಹಾಗೂ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಅಧ್ಯಾತ್ಮದ ರುಚಿ ಅಮೃತಕ್ಕೆ ಸಮಾನ. ಯಾರು ಅಧ್ಯಾತ್ಮದ ದಾರಿಯಲ್ಲಿ ನಡೆಯುತ್ತಾರೆಯೋ, ಅವರು ಸದ್ಗುರುವಿನ ಆಶೀರ್ವಾದ ಪಡೆದುಕೊಳ್ಳುತ್ತಾರೆ’ ಎಂದರು.

ಮುರಗೋಡದ ಮಹಾಂತ ದುರದುಂಡೀಶ್ವರ ಮಠದ ನೀಲಕಂಠ ಸ್ವಾಮೀಜಿ, ‘ಮಹಾತ್ಮರ ಚಿಂತನೆ ಹಾಗೂ ಅಮೃತವಾಣಿಯಿಂದ ಕಷ್ಟಗಳು ದೂರವಾಗಿ ಸಮೃದ್ಧ ಬದುಕು ಪ್ರಾಪ್ತವಾಗುತ್ತದೆ’ ಎಂದು ಹೇಳಿದರು.

ಮುನವಳ್ಳಿಯ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ, ಬೈಲಹೊಂಗಲದ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಆಶೀರ್ವಚನ ನೀಡಿದರು.

ವೇದಮೂರ್ತಿ ಸದಾನಂದ ಶಾಸ್ತ್ರಿ, ನಿಂಗಯ್ಯ ಸ್ವಾಮೀಜಿ, ಚಂದ್ರಯ್ಯ ಹಿರೆಮಠ, ಬಸಲಿಂಗಯ್ಯ ಹಿರೇಮಠ, ವಿಶಾಲ ಹಿರೇಮಠ, ಸಿದ್ದೇಶಕುಮಾರ ಹೊಳಲ, ಎಸ್.ಎಸ್.ಮುಗಳಿ, ಸಂಗ್ರಾಮ ಗೌಡರ, ನಾಗಪ್ಪ ಚವಡಪ್ಪನವರ, ಸಿದ್ದು ಕಡಕೋಳ, ಸೋಮಲಿಂಗಪ್ಪ ಚವಡಪ್ಪನವರ, ಬಸವರಾಜ ಯರಗಟ್ಟಿ, ರಾಯಪ್ಪ ರಾಯಣ್ಣವರ, ಗೌಡಪ್ಪ ಕಡಕೋಳ, ಅರ್ಜುನ ಸವದತ್ತಿ, ರಾಜು ಅಂದಾನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-21-2085618315

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.