ಶಹಾಪುರ: ‘12ನೇ ಶತಮಾನದಲ್ಲಿ ಸಾಮಾಜಿಕ ನ್ಯಾಯವನ್ನು ಬಸವಣ್ಣ ಪ್ರತಿಪಾದಿಸುತ್ತಾ ಬಂದಿದ್ದಾರೆ. ನಮ್ಮ ಬದುಕು ಬಸವ ಮಾರ್ಗವಾಗಬೇಕು. ಬಸವಣ್ಣನವರ ತತ್ವ ಕೇವಲ ಹೇಳುವಂತೆ ಆಗಬಾರದು’ ಎಂದು ಕಡಕೋಳ ಮಠದ ರುದ್ರಮುನಿ ಶಿವಾಚಾರ್ಯರು ತಿಳಿಸಿದರು.

ನಗರದ ಬಸವ ಮಾರ್ಗ ಪ್ರತಿಷ್ಠಾನದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಬಸವ ಬೆಳಕು - 133’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ಅಮಾಯಕರ ಮೇಲೆ ನಡೆಯುವ ಶೋಷಣೆಯನ್ನು ಖಂಡಿಸಿ ಹಾಡು ಬರೆದವರು ಮಡಿವಾಳಪ್ಪ. ಜಾತಿ ಎಂಬ ಬೇಲಿಯನ್ನು ಕಿತ್ತೆಸೆದು ಮುಟ್ಟು, ಮೈಲಿಗೆ ಎನ್ನುವವರಿಗೆ ಚಾಟಿ ಬೀಸುವ ಹಾಡು ಬರೆದರು. ಸಾಮಾನ್ಯ ಜನರ ಮನಸ್ಥಿತಿಯನ್ನು ಅರಿತುಕೊಂಡು ಅವರೊಳಗಿನ ಅಜ್ಞಾನವನ್ನು ಹೊರ ತೆಗೆದರು’ ಎಂದರು.

ಈ ಸಂದರ್ಭದಲ್ಲಿ ಬಸವ ಮಾರ್ಗ ಪ್ರತಿಷ್ಠಾನದ ಸಂಚಾಲಕ ವಿಶ್ವಾರಾಧ್ಯ ಸತ್ಯಂಪೇಟೆ, ರೈತ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ, ರಾಜಶೇಖರ ಗೂಗಲ್, ಲಕ್ಷ್ಮಣ ಲಾಳಸೇರಿ, ಸಾಹಿತಿ ಸಿದ್ದರಾಮ ಹೊನ್ಕಲ್, ನಾಗರಾಜ ಗುಡಗುಂಟಿ, ಭೀಮಣ್ಣ ಮೇಟಿ, ಹಣಮಂತ ಕೊಂಗಂಡಿ, ಖಾಜಾ ಪಟೇಲ್, ದೇವಿಂದ್ರಪ್ಪ ಬಡಿಗೇರ, ಪ್ರಮೋದ ಶಬಾದಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-30-1988141450

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.