ಶುಕ್ರವಾರ, ಅಕ್ಟೋಬರ್ 22, 2021
25 °C

ದೇವಿಯ ಆರಾಧನೆಯೇ ಶರನ್ನವರಾತ್ರಿ

ಮಾತಾ ಕೈವಲ್ಯಮಯಿ Updated:

ಅಕ್ಷರ ಗಾತ್ರ : | |

Prajavani

ಶರನ್ನವರಾತ್ರಿ ಎಂದರೆ ದೇವಿಯ ಆರಾಧನೆ. ಸೃಷ್ಟಿ, ಸ್ಥಿತಿ, ಲಯಗಳಿಗೆ ಇವಳೇ ಕಾರಣಳು. ಮಹಾವಿದ್ಯೆಯೂ, ಮಹಾ ಮೋಹಳೂ ಆಗಿರುತ್ತಾಳೆ. ಇವಳೇ ಸರ್ವಕ್ಕೂ ಕಾರಣಳಾಗಿ ಗುಣತ್ರಯವನ್ನು ಕಾರ್ಯ ರೂಪಕ್ಕೆ ತಂದಿರುತ್ತಾಳೆ. ಬುದ್ಧಿಯ ವೃತ್ತಿಗಳೆಲ್ಲ ದೇವಿಯ ರೂಪಗಳೇ. ನಾನಾ ಆಯುಧಗಳನ್ನು ಧರಿಸಿ ಭಯಂಕರಳಾಗಿ ಕಂಡುಬಂದರೂ ಜಗನ್ಮಾತೆಯು ಸೌಮ್ಯರೂಪಳು, ಅತಿ ಸುಂದರಿಯು ಆಗಿದ್ದಾಳೆ. ದುರ್ಗಮವಾದ ಭವಸಾಗರವನ್ನು ದಾಟಿಸುವ ನೌಕೆಯು ಈ ದುರ್ಗಾದೇವಿ.

ದೇವಿಯು ಭಕ್ತ ಜನರಲ್ಲಿ ಪ್ರಸನ್ನಳಾದರೆ ಅವರು ಯಶಸ್ಸಿಗೆ ಭಾಗಿಗಳಾಗುತ್ತಾರೆ. ಪುರುಷಾರ್ಥಗಳು ಬರುತ್ತವೆ. ವಿನಯವಂತರಾದ ಪತ್ನಿ, ಪುತ್ರ ಮತ್ತು ಸೇವಕರಿಂದ ಧನ್ಯರಾಗುವರು. ಕಷ್ಟದಲ್ಲಿ ಅವಳನ್ನು ಸ್ಮರಿಸಿಕೊಂಡರೆ ಭೀತಿಯನ್ನು ನಿವಾರಿಸುತ್ತಾಳೆ. ಸುಖದಲ್ಲಿರುವಾಗ ಸ್ಮರಿಸಿಕೊಂಡರೆ ಶುಭ ಬುದ್ಧಿಯನ್ನು ಕೊಡುತ್ತಾಳೆ. ಇವಳಿಗಿಂತ ದಯಾ ಹೃದಯವುಳ್ಳವರು ಮತ್ತಾರೂ ಇಲ್ಲ. ಹೃದಯದಲ್ಲಿ ಅನುಕಂಪ, ಸಮರದಲ್ಲಿ ನಿಷ್ಠುರತೆ ಇವೆರಡರ ಸಂಗಮ ದೇವಿಯಲ್ಲಿ ಹೊರತು ಇನ್ನೆಲ್ಲಿಯೂ ಕಂಡು ಬರುವುದಿಲ್ಲ. ಜಗದಂಬಿಕೆಯನ್ನು ಯಾರು ಭಕ್ತಿಯಿಂದ ಸ್ತುತಿಸುತ್ತಾರೆಯೋ ಅವರ ಸಮೃದ್ಧಿಗೆ ಅವಳು ಕಾರಣಳಾಗುತ್ತಾಳೆ.

ಅವಳ ಮಾಯಾ ರೂಪದಿಂದ ವಿಶ್ವವು ಮೋಹವನ್ನು ಹೊಂದಿದ್ದರೂ ಅವಳು ಪ್ರಸನ್ನಳಾದರೆ ಭಕ್ತಿ-ಮುಕ್ತಿಯನ್ನೂ ಅನುಗ್ರಹಿಸುತ್ತಾಳೆ. ಅವಳನ್ನು ಆಶ್ರಯಿಸಿದವರಿಗೆ ವಿಪತ್ತಿಲ್ಲ. ಅಷ್ಟೇ ಅಲ್ಲ, ಅವರೂ ಕೂಡ ಇತರರಿಗೆ ಆಶ್ರಯದಾತರಾಗುತ್ತಾರೆ. ಶರನ್ನವರಾತ್ರಿಯ ಈ ವಿಶೇಷ ಪರ್ವಕಾಲದಲ್ಲಿ  ನಾವೆಲ್ಲರೂ ದೇವಿಯ ಕೃಪೆಗೆ ಪಾತ್ರರಾಗೋಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು