ಶಿರಹಟ್ಟಿ: ಆತ್ಮಜ್ಞಾನ ಮತ್ತು ಭಗವಂತನ ದರ್ಶನ ಪಡೆಯಲು ಗುರುವಿನ ಅನುಗ್ರಹ ಅನಿವಾರ್ಯ. ಗುರುವಿನ ಮೇಲಿನ ನಂಬಿಕೆಯು ಶಿಷ್ಯನನ್ನು ಜೀವನದ ಸಂಕಷ್ಟಗಳಿಂದ ರಕ್ಷಿಸುತ್ತದೆ. ಗುರು ಇದ್ದರೆ ಮಾತ್ರ ದೀಕ್ಷೆ ಹಾಗೂ ಪರಮಾತ್ಮನ ಕೃಪೆ ಪಡೆಯಲು ಸಾಧ್ಯ ಎಂದು ಮಣಕವಾಡದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಸ್ಥಳೀಯ ಉತ್ಸವ ಗಾರ್ಡನ್ನಲ್ಲಿ ಭಾನುವಾರ ಆಯೋಜಿಸಲಾಗಿದ್ದ 2004-05ನೇ ಸಾಲಿನ ಎಫ್.ಎಂ. ಡಬಾಲಿ ಹಾಗೂ ಎಂ.ಎಫ್. ಡಬಾಲಿ ಪ್ರೌಢಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಕಲ ವಿದ್ಯಾಪಾರಂಗತರಾಗಲು ಗುರುವಿನ ಮಾರ್ಗದರ್ಶನ ಬೇಕೆ ಬೇಕು’ ಎಂದು ಹೇಳಿದರು.

ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಮೆಲುಕು ಹಾಕಿದ ಶ್ರೀಗಳು, ನಾನು ಸಹ ಇದೇ ಶಾಲೆಯ ಹಳೆಯ ವಿದ್ಯಾರ್ಥಿ ಎಂಬ ಹೆಮ್ಮೆ ನನಗಿದೆ. ನಮ್ಮ ಶಿಕ್ಷಕರು ಕೇವಲ ಪಠ್ಯವನ್ನು ಬೋಧಿಸಲಿಲ್ಲ; ಬದಲಾಗಿ ಜೀವನದಲ್ಲಿ ಕಷ್ಟಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ಕಲಿಸಿಕೊಟ್ಟರು. ನಮ್ಮ ಬದುಕನ್ನು ಮಾದರಿಯಾಗಿ ರೂಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ನುಡಿದರು.

ಗುರುಗಳಾದ ನಾರಾಯಣ ಮಹೇಂದ್ರಕರ, ಎಂ. ಕೆ. ಲಮಾಣಿ, ಗಂಗಮ್ಮ ಕರಕೆಣ್ಣವರ, ಜಯತೀರ್ಥ ಕುಲಕರ್ಣಿ, ಚನ್ನಪ್ಪ ಸಂಕದಾಳ, ಪದಮರಾಜ ಬಸ್ತಿ, ಶಶಿಕಲಾ ಹೊಸಮನಿ, ಶಂಕರ್ ಕುಂದಿ, ಎಸ್. ಎಸ್. ಪಾಟೀಲ, ಎಂ. ಎಂ. ಹುಡ್ಡೆಮನಿ, ಲಾಲಪ್ಪ ನಾಯಕ್, ಬಸವರಾಜ ಚಿಂಚಲಿ, ಬಿ. ಬಿ. ಬಾಬು ಖಾನರ, ರಮೇಶ್ ಬಟಗುರ್ಕಿ, ಶಿವಯೋಗಿ ಶೆಟ್ಟಿರ್ ಮತ್ತು ನಿಂಗಪ್ಪ ಉಡಚಗೊಂಡ ಅವರನ್ನು ಸನ್ಮಾನಿಸಲಾಯಿತು.

ಹಳೆಯ ವಿದ್ಯಾರ್ಥಿಗಳಾದ ಫಕ್ಕಿರೇಶ ರಟ್ಟಿಹಳ್ಳಿ, ಚಂದ್ರ ಸ್ವಾಮಿ, ಗೂಳಪ್ಪ ಕರಿಗಾರ, ಮಂಜುನಾಥ್ ರಿತ್ತಿ, ಶ್ರೀನಿವಾಸ ಕಪಟಕರ, ವಿಠ್ಠಲ ಬಿಡವೆ, ಮುತ್ತು ತೆಗ್ಗಿನಹಳ್ಳಿ, ಸಂತೋಷ ಕೋಳಿ, ಪರಶುರಾಮ ಗಾಡಿ, ಪ್ರವೀಣ ಮೂರೇಕರ, ಸಿದ್ದಪ್ಪ ಪೂಜಾರ, ಪಕ್ಕಿರೇಶ ನಿಟ್ಟಳೆ, ಇಬ್ರಾಹಿಂ ಮನಿಯಾರ, ವೀರೇಶ ಬೊರಶೆಟ್ಟರ್, ಮೆಹಬೂಬಸಾಬ ತಹಶಿಲ್ದಾರ, ಸವಿತಾ ಬಸ್ತಿ, ವಿಜಯಲಕ್ಷ್ಮಿ ಮಜ್ಜಗಿ, ಮಂಗಳಗೌರಿ ಹೂಗಾರ, ಶಬಾನಾ ಕಾರಬೂದಿ, ರೂಪ ಜಾಧವ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-23-1570146847

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.