ಶಿರಸಿ: ತಾಲ್ಲೂಕಿನ ಸ್ವರ್ಣವಲ್ಲಿ ಮಹಾಸಂಸ್ಥಾನದ ಆಶ್ರಯದಲ್ಲಿ ಆಯೋಜಿಸಲಾಗಿರುವ ಐದು ದಿನಗಳ ಶಾಸ್ತ್ರಾಧ್ಯಯನ ಗೋಷ್ಠಿ ಕಾರ್ಯಕ್ರಮವು ಸಂಸ್ಕೃತ ಹಾಗೂ ಶಾಸ್ತ್ರಾಭ್ಯಾಸಿಗಳ ಗಮನ ಸೆಳೆಯುತ್ತಿದ್ದು, ನಾಡಿನ ವಿವಿಧ ಭಾಗಗಳಿಂದ ಆಗಮಿಸಿರುವ ವಿದ್ವಾಂಸರ ಸಾನ್ನಿಧ್ಯದಲ್ಲಿ ಗಂಭೀರ ಶಾಸ್ತ್ರ ಚರ್ಚೆಗಳು ಆರಂಭಗೊಂಡಿವೆ.

ಮಠದ ರಾಜರಾಜೇಶ್ವರಿ ಸಂಸ್ಕೃತ ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆಯುತ್ತಿರುವ ಗೋಷ್ಠಿಗೆ ಮಠದ ಕಿರಿಯ ಯತಿಗಳಾದ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಈಚೆಗೆ ಚಾಲನೆ ನೀಡಿದರು. ಗಂಗಾಧರೇಂದ್ರ ಸರಸ್ವತೀ ಶ್ರೀ ಹಾಗೂ ಕಿರಿಯ ಯತಿಗಳ ಸಾನ್ನಿಧ್ಯದಲ್ಲಿ ಚಿಂತನಾ ಗೋಷ್ಠಿಗಳು ನಡೆಯುತ್ತಿವೆ.

ಪ್ರಾಚೀನ ಶಾಸ್ತ್ರಾಧ್ಯಯನ ಪರಂಪರೆಯನ್ನು ಪುನರುಜ್ಜೀವನಗೊಳಿಸುವುದು, ಶಾಸ್ತ್ರಾಭ್ಯಾಸಿಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಹಾಗೂ ವಿದ್ವಾಂಸರ ಮಧ್ಯೆ ಜ್ಞಾನ ವಿನಿಮಯಕ್ಕೆ ಅವಕಾಶ ಒದಗಿಸುವುದು ಗೋಷ್ಠಿಯ ಪ್ರಮುಖ ಉದ್ದೇಶವಾಗಿದೆ. ಗೋಷ್ಠಿಯಲ್ಲಿ ವ್ಯಾಕರಣ, ನ್ಯಾಯ, ಧರ್ಮಶಾಸ್ತ್ರ, ಯೋಗದರ್ಶನ, ಪೂರ್ವಮೀಮಾಂಸಾ, ಅಲಂಕಾರ, ಶ್ರೌತ, ಜ್ಯೋತಿಷ್ಯ ಹಾಗೂ ವೇದಾಂತ ಸೇರಿದಂತೆ 9 ಶಾಸ್ತ್ರಗಳ ಕುರಿತಾಗಿ ಆಳವಾದ ಚರ್ಚೆಗಳು ಮತ್ತು ಪ್ರಬಂಧ ಮಂಡನೆಗಳು ನಡೆಯುತ್ತಿವೆ.

ವಿದ್ವಾನ್ ಸೂರ್ಯನಾರಾಯಣ ಭಟ್ ಹಿತ್ಲಳ್ಳಿ ಅವರ ಅಧ್ಯಕ್ಷತೆಯಲ್ಲಿ ಗೋಷ್ಠಿ ನಡೆಯುತ್ತಿದ್ದು, ವಿದ್ವಾನ್ ಉಮಾಕಾಂತ ಭಟ್ ಕೆರೆಕೈ, ಮಹಾಬಲೇಶ್ವರ ಭಟ್, ಮಹೇಶ ಭಟ್ ಇಡಗುಂದಿ, ಚಂದ್ರಶೇಖರ ಭಟ್ ಶೃಂಗೇರಿ ಪಾಲ್ಗೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-20-1123010305

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.