ತ್ಯಾಗರ್ತಿ: ‘ನಮ್ಮ ನಡೆ-ನುಡಿ ಹೇಗಿರಬೇಕು ಎಂದು ವಚನಗಳ ಮೂಲಕ ಸಂದೇಶ ನೀಡಿದ ಬಸವಣ್ಣನವರು ವಿಶ್ವ ಕಂಡ ಶ್ರೇಷ್ಠ ವ್ಯಕ್ತಿ’ ಎಂದು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಆರ್.ಸಿ.ಜಗದೀಶ್ ಹೇಳಿದರು.

ಆನಂದಪುರ ಸಮೀಪದಲ್ಲಿನ ವಿಶ್ವವಿದ್ಯಾಲಯದ ಆವರಣದಲ್ಲಿ ಸೋಮವಾರ ನಡೆದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ನಮ್ಮ ನಡೆಯಂತೆ ನುಡಿ ಇರಬೇಕು. ಕಾಯಕದ ಮೂಲಕ ಕೈಲಾಸ ಕಾಣಬೇಕು ಎಂಬ ಬಸವಣ್ಣನವರ ಸಂದೇಶ ಇಂದಿಗೂ ಪ್ರಸ್ತುತ’ ಎಂದರು.

‘ಬಸವಣ್ಣನವರು ಕೇವಲ ಧಾರ್ಮಿಕ ನಾಯಕರಲ್ಲ, ಕ್ರಾಂತಿಕಾರಿ ಚಿಂತಕರಾಗಿದ್ದರು. ಅವರ ಸಂದೇಶದಂತೆ ಸತ್ಯವನ್ನು ಪಾಲಿಸೋಣ. ಶ್ರಮವನ್ನು ಗೌರವಿಸೋಣ. ಎಲ್ಲರನ್ನೂ ಸಮಾನರಾಗಿ ಕಾಣೋಣ’ ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ನಿಧಿಯ ಡೀನ್ ಎಸ್.ನಾರಾಯಣ ಮಾವರಕರ್ ತಿಳಿಸಿದರು.

ಕುಲಸಚಿವ ಶಾಮರಾವ್ ಜಹಾಗೀರದಾರ್, ಸಂಶೋಧನಾ ನಿರ್ದೇಶಕ ಎಸ್.ಶ್ರೀಧರ, ಸಹ ಸಂಶೋಧನಾ ನಿರ್ದೇಶಕ ಎಸ್.ಪ್ರದೀಪ್, ಉಪನ್ಯಾಸಕರಾದ ಎಂ.ರವಿಕುಮಾರ್, ಎ.ಎಂ.ಅವಿನಾಶ್, ಬೋಧಕ– ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-42-1436093882

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.