ಶಿವಮೊಗ್ಗ: ನಿವೃತ್ತಿಯ ಬಳಿಕವಷ್ಟೇ ಧಾರ್ಮಿಕ ಪ್ರಜ್ಞೆ ಬೆಳೆಸಿಕೊಂಡರೆ ಸಾಕು ಎಂಬ ಭಾವನೆ ಅನೇಕರಲ್ಲಿದೆ. ಅದು ಸರಿಯಲ್ಲ. ಮೂಲ ಸಂಸ್ಕಾರ, ಧಾರ್ಮಿಕ ಭಾವನೆ ಮನೆಯಿಂದಲೇ ಆರಂಭವಾಗಬೇಕು ಎಂದು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಎಂ.ಎಚ್.ವಿದ್ಯಾಶಂಕರ ಹೇಳಿದರು.

ಕಾರಕೋಡ್ಲು ಸದ್ವಿದ್ವಾ ವೇದ ಪಾಠಶಾಲೆಯ 7ನೇ ವಾರ್ಷಿಕೋತ್ಸವದ ಅಂಗವಾಗಿ ಹರಕೆರೆ ರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಭಾರತದಲ್ಲಿ ಋಷಿ ಮುನಿಗಳಿಂದ ಗುರುಕುಲ ಮಾದರಿಯಲ್ಲಿ ಜನ್ಮ ತಾಳಿದ್ದೇ ವೇದ ಪಾಠಶಾಲೆ ಎಂದರು.

ಪ್ರಸ್ತುತ ಸನ್ನಿವೇಶದಲ್ಲಿ ಉಚಿತವಾಗಿ ನೀಡುವ ಯಾವುದೇ ವಸ್ತುವಿಗೆ ಹೆಚ್ಚು ಮೌಲ್ಯ ಇರುವುದಿಲ್ಲ. ಆದರೆ ಪ್ರಾಚೀನ ಗುರುಕುಲಗಳಲ್ಲಿ ಉಚಿತವಾಗಿ ದೊರೆಯುತ್ತಿದ್ದ ವಿದ್ಯೆಗೆ ಹೆಚ್ಚಿನ ಗೌರವವಿತ್ತು. ವೇದದ ಜತೆಗೆ ನಿತ್ಯದ ಅನೇಕ ಸಂಗತಿಗಳನ್ನು ಅಲ್ಲಿ ಕಲಿಸಲಾಗುತ್ತಿತ್ತು. ಹೀಗಾಗಿ ಅಂದಿನ ಮಕ್ಕಳು ದೃಢವಾಗಿ ನಿಲ್ಲುತ್ತಿದ್ದರು ಎಂದು ವಿವರಿಸಿದರು.

ಸಂಸ್ಕಾರವಿಲ್ಲದ ವಿದ್ಯಾರ್ಥಿಗಳು ಎಲ್ಲಿಯೂ ನಿಲ್ಲುವುದಿಲ್ಲ. ಮಕ್ಕಳು ಚೆನ್ನಾಗಿ ಓದಬೇಕು, ಅಂಕ ಗಳಿಸಬೇಕು. ಗೆಲುವು ಸಾಧಿಸಬೇಕು ಎಂಬುದನ್ನು ಪಾಲಕರು ಮಕ್ಕಳಿಗೆ ಹೇಳಿಕೊಡುತ್ತಿದ್ದಾರೆ. ಆದರೆ ಸೋತಾಗ ಏನು ಮಾಡಬೇಕು ಎಂಬುದನ್ನು ಕಲಿಸುವುದೇ ಇಲ್ಲ. ಹೀಗಾಗಿ ಬದುಕಿನಲ್ಲಿ ವಿಫಲವಾದ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಮೂಲದಲ್ಲೇ ಬೇರುಗಳನ್ನು ಗಟ್ಟಿಗೊಳಿಸಬೇಕಿದೆ ಎಂದರು.

ಲೋಕಕಲ್ಯಾಣಾರ್ಥವಾಗಿ ಅರುಣ ಪಾರಾಯಣ, ವೇದ ಪಾರಾಯಣ, ಶ್ರೀಸೂಕ್ತ ಹೋಮ, ರುದ್ರಹೋಮ ಹಮ್ಮಿಕೊಳ್ಳಲಾಗಿತ್ತು. ವೇದ ಪಾಠಶಾಲೆಯ ಶ್ರೀಧರ, ಸತ್ಯ ಉಪಸ್ಥಿತದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-42-8821624

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.