ಶಿವಮೊಗ್ಗ: ‘ಸಾಮರಸ್ಯ, ಸಹಬಾಳ್ವೆಯೊಂದಿಗೆ ಹಿತಕರ ಬದುಕು ರೂಪುಗೊಳ್ಳಲು ನಮ್ಮ ಧರ್ಮ ಹಾಗೂ ಪರಂಪರೆಯೇ ಕಾರಣ. ಆ ನಿಟ್ಟಿನಲ್ಲಿ ನಮ್ಮ ಧರ್ಮದ ಜೊತೆ ಇತರೆ ಧರ್ಮಗಳನ್ನೂ ಪ್ರೀತಿಸುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ದೇಶಕ್ಕೆ ಮಾದರಿ ಆಗಿದೆ’ ಎಂದು ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಶರಾವತಿ ನಗರದ ಆದಿಚುಂಚನರಿ ಶಾಖಾಮಠದಲ್ಲಿ ಬುಧವಾರ ನಡೆದ, ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ, 27ನೇ ವರ್ಷದ ಸಾಮೂಹಿಕ ವಿವಾಹ ಹಾಗೂ ಹಿರಿಯ ದಂಪತಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶ್ರೀ ಮಠ ನಿಜಕ್ಕೂ ದೇಶದಲ್ಲಿ ಸಮ ಸಮಾಜ ಕಟ್ಟುವ ಕೆಲಸ ಮಾಡಿದೆ. ಬಾಲಗಂಗಾಧರನಾಥ ಸ್ವಾಮೀಜಿ ಅವರು ಸರ್ವಧರ್ಮ ಸಮಾನತೆ ಸಾರಿದ್ದರು. ಈಗ ನಿರ್ಮಲಾನಂದ ಶ್ರೀಗಳು ಮಹಾಸಂಸ್ಥಾನವನ್ನು ಇಡೀ ವಿಶ್ವದಲ್ಲೇ ಪವಿತ್ರ ಕ್ಷೇತ್ರವನ್ನಾಗಿ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.

ಹಸಿವು ಎಂಬುದು ಹೇಳಿದಾಗ ಮಾತ್ರ ಗೊತ್ತಾಗುತ್ತದೆ. ಅದನ್ನು ನೋಡಿದಾಗ ತಿಳಿಯಲು ಸಾಧ್ಯವಿಲ್ಲ ಹಾಗೆಯೇ ನಮ್ಮ ಜ್ಞಾನದ ಹಸಿವು, ಧರ್ಮ ಹಾಗೂ ತತ್ವದ ಹಸಿವು ಹೆಚ್ಚಾಗಬೇಕು ಎಂದರು.

ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಆಶೀರ್ವಚನ ನೀಡಿ, ‘ಜಾಗತಿಕವಾಗಿ ನಮ್ಮ ಧರ್ಮ, ಸಂಸ್ಕೃತಿಗೆ ಪವಿತ್ರ ಸ್ಥಾನವಿದೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದಲ್ಲಿ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರ ಎಲ್ಲರಿಗೂ ಮಾರ್ಗದರ್ಶನ ಆಗಲಿದೆ ಎಂದರು.

’ನವದಂಪತಿಗಳು 50 ವರ್ಷ ದಾಂಪತ್ಯ ಬದುಕು ಕಟ್ಟಿಕೊಂಡವರ ಆಶೀರ್ವಾದ ಪಡೆಯಬೇಕು. ಅವರ ಯಶಸ್ವಿಯಾಗಿ ದಾಂಪತ್ಯ ಬದುಕು ರೂಪಿಸಿಕೊಂಡ ಬಗೆ ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದಸರಿ ಘಟ್ಟ ಶಾಖಾ ಮಠದ ಚಂದ್ರಶೇಖರನಾಥ ಸ್ವಾಮೀಜಿ, ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ನಾದಮಯಾನಂದನಾಥ ಸ್ವಾಮೀಜಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ರೇಷ್ಮೆ ಮತ್ತು ವಿದ್ಯುತ್ ಕೈಮಗ್ಗ ನಿಗಮದ ಅಧ್ಯಕ್ಷ ಚೇತನ್ ಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಮೇಶ ಹೆಗ್ಡೆ, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಧರ್ಮೇಶ್ ಸಿರಿಬೈಲು, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಕೆ.ಈ. ಕಾಂತೇಶ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-42-1294107268

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.