ಸಾಗರ: ‘ಧರ್ಮಶಾಸ್ತ್ರಗಳಲ್ಲಿ ಉಲ್ಲೇಖವಾಗಿರುವ ಹಲವು ಸಂಗತಿಗಳಿಗೂ ವಿಜ್ಞಾನಕ್ಕೂ ನಿಕಟ ಸಂಬಂಧವಿದೆ. ಹೀಗಾಗಿ ಧರ್ಮ ಮತ್ತು ವಿಜ್ಞಾನವನ್ನು ಬೇರೆ ಬೇರೆ ಎಂದು ಪರಿಗಣಿಸುವುದು ಸರಿಯಲ್ಲ’ ಎಂದು ಹುಂಚ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ನೆಹರೂ ಮೈದಾನದಲ್ಲಿರುವ ಆದಿನಾಥ ಜಿನಮಂದಿರದಲ್ಲಿ ದಿಗಂಬರ ಜೈನ ಸಮಾಜ ಸೇವಾ ಟ್ರಸ್ಟ್ ಬುಧವಾರ ಏರ್ಪಡಿಸಿದ್ದ ಪೂಜಾ ಮಹೋತ್ಸವ, ಪ್ರತಿಭಾ ಪುರಸ್ಕಾರ, ಸನ್ಮಾನ, ಧರ್ಮಸಭೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

‘ಸಾಧು ಸಂತರಲ್ಲಿನ ಜ್ಞಾನ ಪರಂಪರೆಯ ಮೂಲಕ ಧರ್ಮಶಾಸ್ತ್ರಗಳಲ್ಲಿ ಉಲ್ಲೇಖವಾಗಿರುವ ಅನೇಕ ಸಂಗತಿಗಳಿಗೆ ವೈಜ್ಞಾನಿಕ ಆಧಾರಗಳಿವೆ. ಈ ಜ್ಞಾನ ಪರಂಪರೆಯ ಹಿಂದೆ ದೈವ ಪ್ರೇರಣೆ ಕೂಡ ಇತ್ತು ಎಂಬ ಸಂಗತಿಯನ್ನು ಅಲ್ಲಗಳೆಯಲಾಗದು’ ಎಂದು ಹೇಳಿದರು.

‘ವಿಜ್ಞಾನ, ತಂತ್ರಜ್ಞಾನ ಕ್ಷೇತ್ರ ಅಗಾಧವಾದ ಬೆಳವಣಿಗೆ ಕಂಡಿರುವ ಈ ಕಾಲದಲ್ಲಿ ನಿರ್ಮಾಣಗೊಂಡಿರುವ ಕಟ್ಟಡಗಳಿಗಿಂತ ಅವುಗಳು ಇಲ್ಲದೆ ಇದ್ದ ಕಾಲದಲ್ಲಿ ನಿರ್ಮಾಣಗೊಂಡಿರುವ ದೇಗುಲಗಳು, ಕೆರೆ– ಕಟ್ಟೆಗಳು ಇಂದಿಗೂ ತಮ್ಮ ವಿಶೇಷತೆಯನ್ನು ಉಳಿಸಿಕೊಂಡಿರುವುದನ್ನು ಗಮನಿಸಬೇಕಿದೆ. ಹಳೆಯದ್ದು ಎನ್ನುವ ಕಾರಣಕ್ಕೆ ಎಲ್ಲವನ್ನೂ ತಿರಸ್ಕರಿಸುವ ಮನೋಭಾವ ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.

‘ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಮಾನಸಿಕ ನೆಮ್ಮದಿ ಪ್ರಾಪ್ತವಾಗುತ್ತದೆ. ಈ ಮೂಲಕ ಸೇವಾ ಕಾರ್ಯಗಳಲ್ಲಿ ತೊಡಗಲು, ಸನ್ಮಾರ್ಗದಲ್ಲಿ ನಡೆಯಲು ಅದು ಪ್ರೇರಣೆ ನೀಡುತ್ತದೆ’ ಎಂದು ತಿಳಿಸಿದರು.

ದಿಗಂಬರ ಜೈನ ಸಮಾಜ ಸೇವಾ ಟ್ರಸ್ಟ್ನ ಅಧ್ಯಕ್ಷ ಎಸ್.ವಿ.ಹಿತಕರ ಜೈನ್ ಮಾತನಾಡಿದರು. ಜೈನ ಸಮಾಜದ ಸಾಧಕರಾದ ಹೊಯ್ಸಳ, ರತಿ, ರಾಜಕುಮಾರ್, ಚಂದ್ರಕಲಾ, ಎಸ್.ಆರ್.ನಾಗರಾಜ್, ಶಾಂತಾ, ಗಜೇಂದ್ರ, ರೇವತಿ, ಅಶೋಕ್ ಕುಮಾರ್ ಇಂದ್ರ, ಅನಿತಾ ಅಶೋಕ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

‘ಜೈನ ಧರ್ಮ ಮತ್ತು ವಿಜ್ಞಾನ’ ಕುರಿತು ಎಂ.ಸುಂದರ ಪ್ರಭು ಉಪನ್ಯಾಸ ನೀಡಿದರು. ಪ್ರಮುಖರಾದ ಎಂ.ಪಿ.ಲೋಕರಾಜ್, ಕೆ.ಜೆ.ಪದ್ಮರಾಜ್, ಸರೋಜ ಧರಣೇಂದ್ರ, ಲತಾ ದೇವರಾಜ್, ಕೆ.ಟಿ.ನ್ಯಾಮಯ್ಯ, ಪ್ರಭಾಕರ್ ಜೈನ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-42-1378943076

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.