ತುಮರಿ: ‘ಬಡವರ ಶಿಕ್ಷಣ ಹಾಗೂ ಸಮಾಜದಲ್ಲಿ ಸಾಮಾಜಿಕ ಬದಲಾವಣೆ ತರುವ ಕಾರ್ಯದಲ್ಲಿ ಸಿಗಂದೂರು ಕ್ಷೇತ್ರದ ಕಾರ್ಯ ಅಭಿನಂದನೀಯ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ತುಮರಿ ಸಮೀಪದ ಸಿಗಂದೂರಿನಲ್ಲಿ ಬುಧವಾರ ಸಿಗಂದೂರು ಚೌಡಮ್ಮ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ ಧರ್ಮಾಧಿಕಾರಿ ಎಸ್.ರಾಮಪ್ಪ ಜನ್ಮದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜನಪರ ಕಾಳಜಿ ಇರುವ ವ್ಯಕ್ತಿಗಳು ಯಾವಾಗಲೂ ಜನರ ಜೊತೆಗೆ ಇರುತ್ತಾರೆ ಎಂಬುದಕ್ಕೆ ಸಿಗಂದೂರು ಧರ್ಮಾಧಿಕಾರಿ ಎಸ್. ರಾಮಪ್ಪ ಸಾಕ್ಷಿ. ಅವರ ಸ್ವಾರ್ಥ ರಹಿತ ಸಮಾಜ ಸೇವೆ ಮೆಚ್ಚುವಂತಹದ್ದು. ರಾಜ್ಯದ ದೇವಸ್ಥಾನ, ವಿದ್ಯಾರ್ಥಿ ನಿಲಯ, ಕಲ್ಯಾಣ ಮಂಟಪ, ಶಾಲೆ– ಕಾಲೇಜಿಗೆ ಸುಣ್ಣ– ಬಣ್ಣ ಕಾರ್ಯಕ್ಕೆ ಉದಾರ ನೆರವು ನೀಡಿರುವುದು ಶ್ಲಾಘನೀಯ ಕಾರ್ಯ’ ಎಂದು ಹೇಳಿದರು.

ಆನಂದಪುರ ಮುರುಘಾ ಮಠದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಮಾತನಾಡಿದರು. ಜನ್ಮದಿನದ ಪ್ರಯುಕ್ತ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಿಂದ ಹೃದಯ ತಪಾಸಣೆ, ರೆಡ್ಕ್ರಾಸ್ ಸಂಸ್ಥೆಯಿಂದ ರಕ್ತದಾನ ಶಿಬಿರ ನಡೆಯಿತು.

ಸಿಗಂದೂರು ದೇವಸ್ಥಾನದ ಕಾರ್ಯದರ್ಶಿ ಎಚ್.ಆರ್. ರವಿಕುಮಾರ್, ಪ್ರಮುಖರಾದ ರಾಜನಂದಿನಿ ಕಾಗೋಡು, ಶ್ರೀಧರ್ ಹುಲ್ತಿಕೊಪ್ಪ, ಚಂದ್ರಪ್ಪ ಕಲಸೆ, ಗಣಪತಿ ಮಂಡಗಳಲೆ, ಕೆ.ಜಿ. ಪ್ರಶಾಂತ್, ಇಂದೂಧರ ಗೌಡ, ದಿನೇಶ್ ಕುಮಾರ್, ಕಿಶೋರ್, ಸತ್ಯನಾರಾಯಣ ಜಿ.ಟಿ, ಚಂದ್ರಪ್ಪ ಅಳೂರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-42-780828102

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.