ಶ್ರವಣಬೆಳಗೊಳ: ನೇಮಿನಾಥ ತೀರ್ಥಂಕರರ ವಾರ್ಷಿಕ ಪಂಚಕಲ್ಯಾಣ ಮಹಾರಥೋತ್ಸವದ ಪ್ರಯುಕ್ತ ಭಂಡಾರ ಬಸದಿಯ ಚವ್ವೀಸ ತೀರ್ಥಂಕರರ ಸನ್ನಿಧಿಯಲ್ಲಿ ವಟುಗಳಿಗೆ ವ್ರತೋಪದೇಶವು ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಬುಧವಾರ ವಿಜೃಂಭಣೆಯಿಂದ ನೆರವೇರಿತು.

ಹುಳ್ಳ ಸಭಾಮಂಟಪದಲ್ಲಿ 25 ಬಾಲಕರು, 11 ಬಾಲಕಿಯರು ಸೇರಿದಂತೆ ಶ್ವೇತ ಮತ್ತು ಕೇಸರಿ ವಸ್ತ್ರ ಧರಿಸಿದ 36 ವಟುಗಳು ಆಸೀನರಾಗಿದ್ದರು. ಪ್ರತಿಯೊಬ್ಬ ವಟುವಿನ ಮುಂಭಾಗ ಪ್ರತ್ಯೇಕ ಮಂಗಲ ಕಲಶ, ಅರ್ಚನೆಯ ಸಾಮಗ್ರಿ ಇರಿಸಲಾಗಿತ್ತು. ವಟುಗಳು ಅರಹಂತರು ಸಿದ್ಧರು, ಆಚಾರ್ಯರು, ಉಪಾಧ್ಯಾಯರು, ಸರ್ವಸಾಧುಗಳು, ಜಿನ ಧರ್ಮ, ಜಿನಾಗಮ, ಜಿನಚೈತ್ಯ, ಜಿನ ಚೈತ್ಯಾಲಯದ ನವದೇವತೆಗಳಿಗೆ ಅರ್ಘ್ಯ ಸಮರ್ಪಿಸಿದರು.

ಅರಂಹತ ಪರಮೇಷ್ಠಿಗಳಿಗೆ ಜಲ, ಗಂಧ, ಅಕ್ಷತೆ, ಪುಷ್ಪ, ಚರು, ದೀಪ, ಧೂಪ, ಫಲಗಳ ಅರ್ಘ್ಯಗಳನ್ನು ಸಮರ್ಪಿಸಿದರು. ಶ್ರುತದ ಪೂಜೆಯಲ್ಲಿ ಜಿನವಾಣಿ ಸರಸ್ವತಿ ಮಾತೆಗೂ ಪ್ರತ್ಯೇಕ ಅಷ್ಟವಿಧಾರ್ಚನೆ ಮಾಡಿ ಅರ್ಘ್ಯಗಳನ್ನು ಅರ್ಪಿಸಲಾಯಿತು. ರತ್ನತ್ರಯ ಪ್ರತೀಕದ ಜನಿವಾರ ಧಾರಣೆ, ಆಚಾರ್ಯರ ಶ್ರೀಗಳ ಸಮ್ಮುಖದಲ್ಲಿ ನಡೆಯಿತು. ಶಾಂತಿಧಾರಾ ಮಾಡಿ ಕಲಶ ವಿಸರ್ಜಿಸಿ ಮಹಾಮಂಗಳಾರತಿ ಮಾಡಲಾಯಿತು.

ವಟುಗಳಿಗೆ ವಸತಿ, ಊಟ, ವಸ್ತ್ರಗಳನ್ನು ಕ್ಷೇತ್ರದಿಂದ ಒದಗಿಸಲಾಗಿತ್ತು ಎಂದು ಮೇಲ್ವಿಚಾರಕ ರಾಜೇಶ್ ಶಾಸ್ತ್ರಿ ತಿಳಿಸಿದರು.

ಸಾನಿಧ್ಯ ವಹಿಸಿದ್ದ ಚಾರುಕೀರ್ತಿ ಶ್ರೀಗಳು ಮಾತನಾಡಿ, ‘ಉಪನಯನದ ವ್ರತ ಸ್ವೀಕಾರ, ಸಂಸ್ಕಾರ ಪಡೆಯುವು ದರಿಂದ ದೇವಶಾಸ್ತ್ರ, ಗುರು ಪೂಜೆಗೆ ಅರ್ಹತೆ ಗಳಿಸುತ್ತಾರೆ. ರತ್ನತ್ರಯಗಳಾದ ಸಮ್ಯಗ್ದರ್ಶನ, ಸಮ್ಯಜ್ಞಾನ, ಸಮ್ಯಕ್ ಚಾರಿತ್ರವನ್ನು ಪಾಲನೆ ಸೂಕ್ತ’ ಎಂದರು.

ಸಾನಿಧ್ಯ ವಹಿಸಿದ್ದ ಆಚಾರ್ಯ ಅನೇಕಾಂತಸಾಗರ ಮಹಾರಾಜರು, ಸಂಘಸ್ಥ ತ್ಯಾಗಿಗಳು ಆಶೀರ್ವಚನ ನೀಡಿದರು. ಪೂಜೆಯ ನೇತೃತ್ವವನ್ನು ನಂದಕುಮಾರ್ ಶಾಸ್ತ್ರಿ, ಪ್ರೇಮ್ಕುಮಾರ್, ಎಸ್.ಪಿ. ಜಿನೇಶ್ ಕುಮಾರ್, ಜ್ವಾಲಕುಮಾರ್, ನಾಗೇಂದ್ರ, ನವೀನ್, ವಿಹಾರ್ ವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-36-822315733

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.