ಶ್ರವಣಬೆಳಗೊಳ: ಭಗವಾನ್ ನೇಮಿನಾಥ ತೀರ್ಥಂಕರರ ವಾರ್ಷಿಕ ಪಂಚಕಲ್ಯಾಣ ಮಹಾರಥೋತ್ಸವದ ಪ್ರಯುಕ್ತ ಭಂಡಾರ ಬಸದಿಯಲ್ಲಿ ತೀರ್ಥಂಕರರಿಗೆ ಮೋಕ್ಷ ಕಲ್ಯಾಣದ ವಿಧಿ, ಸಿದ್ಧಚಕ್ರ, ಕರ್ಮದಹನದ ವಿಧಾನಗಳು ಮತ್ತು ತೀರ್ಥಂಕರರಿಗೆ ಅಭಿಷೇಕದ ಸಕಲ ಧಾರ್ಮಿಕ ವಿಧಿ ವಿಧಾನಗಳು ಅಭಿನವ ಚಾರುಕೀರ್ತಿ ಭಟ್ಟಾರಕರ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯಿಂದ ಶುಕ್ರವಾರ ನೆರವೇರಿದವು.

ಹರಿಪೀಠದ ಖಡ್ಗಾಸನದಲ್ಲಿ ವಿರಾಜಮಾನರಾಗಿರುವ ಚವ್ವೀಸ ತೀರ್ಥಂಕರರ ಸನ್ನಿಧಿಯಲ್ಲಿ ಮಂಗಲ ಶಾಂತಿಧಾರ ಕಲಶವನ್ನು ಪ್ರತಿಷ್ಠಾಪಿಸಲಾಗಿತ್ತು. ಪುರೋಹಿತರಿಂದ ಮಂಗಲಾಷ್ಟಕ ಪಂಚಣಮೋಕಾರ ಮಹಾಮಂತ್ರಗಳು ಪ್ರಾರಂಭವಾಗುತ್ತಿದ್ದಂತೆ 24 ತೀರ್ಥಂಕರರಿಗೆ ಕೇಸರಿ ವಸ್ತ್ರ ಕಿರೀಟ ಧರಿಸಿದ 24 ಜನ ಶ್ರಾವಕರು ರಜತದ ಕಲಶದಲ್ಲಿ ಜಲ, ಎಳನೀರು, ಈಕ್ಷುರಸ, ಕಲ್ಕಚೂರ್ಣ, ಅರಿಶಿಣದ ಹುಡಿ, ಅರಿಶಿಣ, ಕ್ಷೀರ, ಗಂಧ, ಕೇಸರಿ, ಕಷಾಯ, ಅಷ್ಟಗಂಧಗಳಿಂದ ಏಕಕಾಲದಲ್ಲಿ ಅಭಿಷೇಕಗಳು ಜರುಗುತ್ತಿದ್ದಂತೆ ಜಯಘೋಷಗಳು ಮೊಳಗಿದವು. ಪುಷ್ಪಾರ್ಚನೆಯಾದ ನಂತರ 24 ತೀರ್ಥಂಕರರಿಗೆ ಪ್ರತ್ಯೇಕವಾಗಿ ಅರ್ಘ್ಯ ಶ್ರೀಫಲಗಳನ್ನು ಅರ್ಪಿಸಲಾಯಿತು. ಶಾಂತಿ ಮಂತ್ರಗಳೊಂದಿಗೆ ಶಾಂತಿಧಾರಾ ನಡೆಸಿ ಮಹಾಮಂಗಳಾರತಿ ಮಾಡಲಾಯಿತು. ಭಕ್ತರಿಗೆ ಗಂಧೋದಕ ವಿತರಿಸಲಾಯಿತು.

ಪೂಜೆಯ ನೇತೃತ್ವವನ್ನು ನಂದ ಕುಮಾರ್ ಶಾಸ್ತ್ರಿ, ಜಿನೇಶ್ ಕುಮಾರ್, ವಿಮಲ್ ತಂಡದವರು ವಹಿಸಿದ್ದರು.

ಸೇವಾಕರ್ತರಾದ ಚಾಮರಾಜನಗರದ ಪ್ರೇಂ ಕುಮಾರಿ, ಬಿ.ಎನ್. ವರ್ಧಮಾನಯ್ಯ ಕುಟುಂಬದವರನ್ನು ಶ್ರೀಗಳು ಆಶೀರ್ವದಿಸಿದರು. ಆಚಾರ್ಯ ಅನೇಕಾಂತಸಾಗರ ಮಹಾರಾಜರು ಮತ್ತು ಸಂಘಸ್ಥ ತ್ಯಾಗಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಚವ್ವೀಸ ತೀರ್ಥಂಕರರ ಅಭಿಷೇಕಕ್ಕೂ ಮುನ್ನ ನೇಮಿನಾಥ ತೀರ್ಥಂಕರರ ಮೋಕ್ಷ ಕಲ್ಯಾಣದ ವಿಧಿಗಳನ್ನು ನೆರವೇರಿಸಿದ ನಂತರ ಸಿದ್ಧಚಕ್ರ ಕರ್ಮದಹನ ವಿಧಾನಗಳಲ್ಲಿ ಭಾಗವಹಿಸಿದ್ದ ಚಾರುಕೀರ್ತಿ ಶ್ರೀಗಳು ಅರ್ಘ್ಯ ಶ್ರೀಫಲಗಳನ್ನು ಅರ್ಪಿಸಿದರು.

ವಾರ್ಷಿಕ ಜಾತ್ರೆಯ ನಿಮಿತ್ತ ವಿಂಧ್ಯಗಿರಿಯ ಬಾಹುಬಲಿ ಸ್ವಾಮಿಗೆ ವಿಶೇಷ ಪಂಚಾಮೃತ ಪೂಜೆಗಳನ್ನು ನೆರವೇರಿಸಿ ಮಹಾಶಾಂತಿಧಾರಾ ಮಾಡಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯರಾದ ಶಾಕಿನಿ ದೇವೇಂದ್ರಕುಮಾರ್, ಎಸ್.ಬಿ.ಯಶಸ್, ಜೈನ ಸಮಾಜದ ಅಧ್ಯಕ್ಷ ಪದ್ಮಕುಮಾರ್, ಕಾರ್ಯದರ್ಶಿ ಎಸ್.ಪಿ. ಬಾನುಕುಮಾರ್, ಮಹಿಳಾ ಸಮಾಜದ ಅಧ್ಯಕ್ಷೆ ಮಹಾಲಕ್ಷ್ಮಿ ಪ್ರಮೋದ್ ಕುಮಾರ್, ಪದಾಧಿಕಾರಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-36-1740517128

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.