ಶ್ರವಣಬೆಳಗೊಳ: ವಿಶ್ವದ ಅನೇಕ ಪ್ರಾಚೀನ ಸಂಸ್ಕೃತಿ, ಪರಂಪರೆ, ಆಚಾರ- ವಿಚಾರ, ವಿಭಿನ್ನ ಭಾಷೆಗಳ, ಧರ್ಮಗಳ ಈ ದೇಶದಲ್ಲಿ ಅನಾದಿ ಕಾಲದಿಂದಲೂ ಜೈನ ಧರ್ಮವೂ ಒಂದಾಗಿದ್ದು, 24 ತೀರ್ಥಂಕರರಲ್ಲಿ ವರ್ಧಮಾನ ಮಹಾವೀರ ತೀರ್ಥಂಕರ ಕೊನೆಯವರು.

ಬಿಹಾರದ ವೈಶಾಲಿ ನಗರದ ಕುಂಡಲಪುರದಲ್ಲಿ ರಾಜ ಸಿದ್ಧಾರ್ಥ, ತ್ರಿಶಲರ ಕುವರನಾಗಿ ಕ್ರಿ.ಪೂ.599ರಲ್ಲಿ ಜನಿಸಿದ ಮಹಾವೀರರಿಗೆ ಸನ್ಮತಿ, ವರ್ಧಮಾನ, ವೀರ, ಅತಿವೀರ ಎಂಬ 5 ಹೆಸರುಗಳಿವೆ. ಇವರು ಸಕಲ ಸಂಪತ್ತು, ಐಶ್ವರ್ಯಗಳಿಂದ ಕೂಡಿದ ಮನೆತನದಲ್ಲಿ ಬೆಳೆದು ರಾಜಪುತ್ರನಾಗಿ ಹುಟ್ಟಿದರೂ ಸರ್ವ ಜನರ ಕಲ್ಯಾಣಕ್ಕಾಗಿ ರಾಜತ್ವವನ್ನು ಸಂಸಾರವನ್ನು ಸಂಪೂರ್ಣ ತ್ಯಾಗ ಮಾಡಿ, ಕಠಿಣ ಹಾದಿಯ ಮಾರ್ಗವನ್ನು ತಮ್ಮ ಬದುಕಿನ್ನುದ್ದಕ್ಕೂ ಆಯ್ದುಕೊಂಡರು.

ತಮ್ಮ ಕಠೋರ ಸಂಯಮದಿಂದ ಧ್ಯಾನ, ತಪಸ್ಸು ಮಾಡಿದರು. ತಪಸ್ಸಿನ ಮಧ್ಯೆ ಬಂದ ಅನೇಕ ಸಂಕಷ್ಟ, ನೋವು, ಹಿಂಸೆಗಳನ್ನು ತಾಳ್ಮೆಯಿಂದ ಸಹಿಸಿಕೊಂಡರು. ತಮ್ಮ ಮನಸ್ಸಿನಲ್ಲಿ ಮೂಡಿದ ಅನೇಕ ರೀತಿಯ ದ್ವಂದ್ವಗಳನ್ನು ಸಂಯಮದಿಂದ ನಿಗ್ರಹಿಸುತ್ತಾ ತಮ್ಮಲ್ಲಿನ ಗೊಂದಲಗಳ ನಿವಾರಣೆಗೆ ತಾವೇ ಉತ್ತರವನ್ನು ಕಂಡುಕೊಂಡ ವೀರರು.

ತೀರ್ಥಂಕರರ ಜನನದಿಂದ ಜನಸಾಮಾನ್ಯರಲ್ಲಿ ಸುಖ, ಶಾಂತಿ, ಸಮೃದ್ಧಿಗಳು ರಾಜಮನೆತನದಲ್ಲಿಯೂ ವೃದ್ಧಿಸಿದವು. ಹಾಗಾಗಿಯೇ ಇವರನ್ನು ವರ್ಧಮಾನ ಎಂದು ಕರೆದರು. ಇಬ್ಬರು ಚಾರಣ ವೃದ್ಧಿದಾರಿ ಮುನಿಗಳಿಗೆ ಬಂದ ಸಂಶಯಗಳು, ಈ ಮಗುವಿನ ದರ್ಶನ ಮಾಡುತ್ತಲೇ ನಿವಾರಣೆ ಆಗಿದ್ದರಿಂದ ಮಗುವಿಗೆ ಸನ್ಮತಿ ಎಂದು ಕರೆದರು. ಬಾಲ್ಯದಿಂದಲೂ ವೈರಾಗ್ಯದ ಕಡೆಗೆ ಗಮನ ಇದ್ದಿದ್ದರರಿಂದ 30ನೇ ವರ್ಷದಲ್ಲಿ ದೀಕ್ಷೆ ಪಡೆದು ಭಾರತದ ಉದ್ದಗಲಕ್ಕೂ ಕಾಲ್ನಡಿಗೆಯಲ್ಲಿ ವಿಹಾರ ಮಾಡುತ್ತಾ ಜಗತ್ತಿಗೆ ಅಹಿಂಸೆ, ಸತ್ಯ ಅಚೌರ್ಯ, ಬ್ರಹ್ಮಚರ್ಯ, ಅನೇಕಾಂತ, ಅಪರೀಗ್ರಹಗಳ ಬಗ್ಗೆ ಬೋಧನೆ ಮಾಡಿದರು.

ಬೆಟ್ಟ, ಗುಡ್ಡ, ದಟ್ಟಕಾಡುಗಳಲ್ಲಿ ಸಂಚಾರ ಮಾಡುತ್ತ ಘೋರ ತಪಸ್ಸು ಮಾಡಿ ಕೇವಲಜ್ಞಾನ ಪಡೆದು, ಜನರ ಆಡುಭಾಷೆ ಪ್ರಾಕೃತದ ಅರ್ಧಮಾಗಧೀ ಬಾಷೆಯಲ್ಲಿ ಸರಳವಾಗಿ ಧರ್ಮೋಪದೇಶ ನೀಡುತ್ತಿದ್ದರು. ಇವರ ಧರ್ಮ ಸಭೆಗಳ ಪ್ರವಚನಕ್ಕೆ ಕಿಕ್ಕಿರಿದು ಜನರು ಭಾಗವಹಿಸುತ್ತಿದ್ದರು. ನೀನು ಬದುಕು ಇತರರನ್ನು ಬದುಕಲು ಬಿಡು ಎಂಬುದು ಅವರ ಸಂದೇಶವಾಗಿದ್ದು, ಅಹಿಂಸೆಯೇ ಪರಮ ಧರ್ಮ ಎಂಬುದು ಅವರ ಧ್ಯೇಯವಾಕ್ಯವಾಗಿತ್ತು.ಮನುಷ್ಯ ಮತ್ತೊಬ್ಬರನ್ನು ಗೆಲ್ಲುವುದಕ್ಕಿಂತ ತನ್ನ ಆತ್ಮನ ವೈರಿಗಳಾದ ಕಷಾಯ ಹಾಗೂ ಇಂದ್ರಿಯಗಳ ಮೇಲೆ ಜಯ ಸಾಧಿಸುವುದು ಸರ್ವ ಶ್ರೇಷ್ಠ ಎನ್ನುತ್ತಿದ್ದರು. ಸ್ವಾರ್ಥ, ಆಸೆ, ಆಮಿಷಗಳಿಗೆ ಬಲಿಯಾಗಿ ಮನುಷ್ಯನಿಂದಾಗುವ ಅನ್ಯಾಯ, ಅನೀತಿಯನ್ನು ತಡೆಯಬೇಕು ಎಂದು ಧರ್ಮಸಭೆಗಳಲ್ಲಿ ಜನತೆಗೆ ಉಪದೇಶಿಸುತ್ತಿದ್ದರು. ಸಮ್ಯಗ್ದರ್ಶನ, ಸಮ್ಯಜ್ಞಾನ, ಸಮ್ಯಕ್ ಚಾರಿತ್ರ ಇವುಗಳನ್ನು ರತ್ನತ್ರಯ ಎಂದು ಕರೆದಿದ್ದಾರೆ. ಇವು ಮೋಕ್ಷ ಮಾರ್ಗಕ್ಕೆ ಸಾಧನಗಳೆಂದು ಸಾರಿದರು.

ಋಜುಕೂಲ ನದಿ ತಟದಲ್ಲಿ ಕೇವಲ ಜ್ಞಾನ

‘ಭಗವಾನ್ ಮಹಾವೀರರನ್ನು ಸಿಂಹ ಲಾಂಛನದಿಂದ ಗುರುತಿಸಲಾಗುತ್ತದೆ. ಬಿಹಾರದ ಜೃಂಬಿಕಾ ಗ್ರಾಮದ ಋಜುಕೂಲ ನದಿಯ ದಡದಲ್ಲಿ ಕೇವಲಜ್ಞಾನ ಪಡೆದು, ರಾಜಗೃಹದ ವಿಪುಲಾಚಲದಲ್ಲಿ ಮಹಾವೀರರ ಪ್ರಥಮ ಸಮವಸರಣ (ಧರ್ಮಸಭೆ) ನಡೆಯಿತು. ಪಾವಾಪುರಿಯ ಪದ್ಮಸರೋವರದಲ್ಲಿ 72ನೇ ವಯಸ್ಸಿನಲ್ಲಿ ದೇಹತ್ಯಾಗ ಮಾಡಿ ಮುಕ್ತಿ (ಮೋಕ್ಷ) ಹೊಂದಿದರು’ ಎಂದು ಪ್ರೊ.ಜೀವಂಧರ್ ಕುಮಾರ್ ಹೊತಪೇಟೆ ಹೇಳಿದರು.

‘ಅಹಿಂಸೆಯನ್ನು ಪ್ರಮುಖವಾಗಿ ಬೋಧಿಸಿದ ಧರ್ಮವೇ ಜೈನಧರ್ಮ. ಮಹಾವೀರನಿಂದಾಗಿ ಹೆಚ್ಚು ಜನಪ್ರಿಯವಾದದ್ದು’ ಎಂದು ಸಾಹಿತಿ ಬೇಗೂರು ವೀರೇಂದ್ರ ಕುಮಾರ್ ಹೇಳಿದರು.

2625ನೇ ಜಯಂತಿ ಆಚರಣೆ

ಶ್ರವಣಬೆಳಗೊಳ ಕ್ಷೇತ್ರದಲ್ಲಿ ಮಾರ್ಚ್ 31ರಂದು ಆಚಾರ್ಯ ಅನೇಕಾಂತ ಸಾಗರ ಮಹಾರಾಜರು ಮತ್ತು ಸಂಘಸ್ಥ ತ್ಯಾಗಿಗಳ ಸಾನ್ನಿಧ್ಯ ಹಾಗೂ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಶ್ರೀಗಳ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಭಗವಾನ್ ಮಹಾವೀರರ 2625ನೇ ಜಯಂತಿಯನ್ನು ಆಚರಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.