ಶ್ರವಣಬೆಳಗೊಳ: ಭಗವಾನ್ ನೇಮಿನಾಥ ತೀರ್ಥಂಕರರ ವಾರ್ಷಿಕ ಪಂಚಕಲ್ಯಾಣ ಮಹಾರಥೋತ್ಸವದ ಪ್ರಯುಕ್ತ ಬಾಲ ನೇಮಿನಾಥರ ಬಾಲಲೀಲಾ ಮಹೋತ್ಸವದ ಮೆರವಣಿಗೆಯು ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಸೋಮವಾರ ರಾತ್ರಿ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಬಾಲನೇಮಿನಾಥರ ಮೂರ್ತಿಯನ್ನು ಹೂಗಳಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಜಿನಬಾಲಕನ ಉತ್ಸವಕ್ಕೆ ಜೈನಮಠದ ಮುಂಭಾಗ ಈಡುಗಾಯಿ ಹಾಕುವ ಮೂಲಕ ಚಾಲನೆ ನೀಡಲಾಯಿತು. ಮೆರವಣಿಗೆಯು ಭಂಡಾರ ಬಸದಿಯ ಸುತ್ತ ಸಾಗಿ ಜೈನಮಠದ ರಸ್ತೆಯಲ್ಲಿ ಸಾಗುತ್ತಿದ್ದಾಗ ಸೇವಾಕರ್ತರಾದ ಎ.ಎಸ್. ಮುನಿರಾಜಯ್ಯ ಕುಟುಂಬಸ್ಥರು ವಿಶೇಷವಾಗಿ ಸಿದ್ಧಪಡಿಸಿ ಅಲಂಕರಿಸಿದ್ದ ಗೊಂಬೆಯ ಮೂಲಕ ಪಲ್ಲಕ್ಕಿಯಲ್ಲಿರುವ ಜಿನಬಾಲಕನಿಗೆ ಮಾಲಾರ್ಪಣೆ ಮಾಡುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಜಯಘೋಷ ಹಾಕಿದರು.

ಮೆರವಣಿಗೆಯು ವಿಂಧ್ಯಗಿರಿಯ ಮಹಾದ್ವಾರದ ಬಳಿ ಅಲಂಕರಿಸಿದ ಉಯ್ಯಾಲೆ ಕಟ್ಟೆಯಲ್ಲಿ ಸಿದ್ಧವಾಗಿದ್ದ ಉಯ್ಯಾಲೆಯಲ್ಲಿ ಜಿನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಮಂಗಲಾಷ್ಟಕದೊಂದಿಗೆ ಜಿನ ಬಾಲಕನಿಗೆ ಅಷ್ಟವಿಧಾರ್ಚನೆಯು ನಡೆಯಿತು. ಬೆಂಗಳೂರಿನ ವಿಮಲ್, ಸುಶ್ರಾವ್ಯವಾಗಿ ಹಾಡಿ ಗಮನ ಸೆಳೆದರು. ಸುಷ್ಮಾ ಮತ್ತು ರೇಷ್ಮಾ ಜೋಗುಳದ ಹಾಡನ್ನು ಹಾಡಿದರು. ಸ್ಥಳೀಯ ಗುರುಮೂರ್ತಿ ತಂಡದವರಿಂದ ವಾದ್ಯಸೇವೆ, ಸುಬ್ರಹ್ಮಣ್ಯದ ಚೆಂಡೆ ಸೇವೆಗೆ ಯುವಕ ಯುವತಿಯರು ನೃತ್ಯ ಮಾಡಿದರು. ಜಯಮಾಲಾರ್ಘ್ಯದೊಂದಿಗೆ ಮಹಾಮಂಗಳಾರತಿ ನಡೆಯಿತು. ಸೇವಾಕರ್ತರಾದ ಎ.ಎಸ್.ಮುನಿರಾಜಯ್ಯ ಕುಟುಂಬಸ್ಥರು ಭಕ್ತಾದಿಗಳಿಗೆ ಸಿಹಿ ವಿತರಿಸಿ ಸೇವೆ ಸಲ್ಲಿಸಿದವರನ್ನು ಗೌರವಿಸಿದರು.

ನಂತರ ಉತ್ಸವವು ಕಲ್ಯಾಣಿ ರಸ್ತೆ, ಹಳೆಯ ಅಂಚೆಕಚೇರಿ ರಸ್ತೆ, ಬೆಂಗಳೂರು ರಸ್ತೆಯ ಮೂಲಕ ಜೈನಮಠಕ್ಕೆ ಸಾಗಿದಾಗ ಭಕ್ತರು ಹಣ್ಣು, ಕಾಯಿ, ಹೂ, ಆರತಿ ಅರ್ಪಿಸಿದರು. ಪೂಜಾ ನೇತೃತ್ವವನ್ನು ನಂದಕುಮಾರ್ ಶಾಸ್ತ್ರಿ ವಹಿಸಿದ್ದರು. ಸಾನಿಧ್ಯವನ್ನು ಆಚಾರ್ಯ ಅನೇಕಾಂತಸಾಗರ ಮಹಾರಾಜರು ಮತ್ತು ಸಂಘಸ್ಥ ತ್ಯಾಗಿಗಳು ವಹಿಸಿದ್ದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಶಾಲಿನಿ ದೇವೇಂದ್ರಕುಮಾರ್, ಎಸ್.ಬಿ.ಯಶಸ್, ಕ್ಷೇತ್ರದ ಸದಸ್ಯರಾದ ಭರತೇಶ್, ಹೇಮಂತ್, ಸಂಜು, ಕಿರಣ್, ಶ್ರೇಯಸ್, ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-36-1523741005

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.