ಸಿದ್ದಾಪುರ: ಶಂಕರಾಚಾರ್ಯ ಜಯಂತಿಯ ಸಂದರ್ಭದಲ್ಲಿ ಸಮಾಜಕ್ಕೆ ಒಳಿತನ್ನು ಉಂಟುಮಾಡುವ ಕಾರ್ಯ ಮಾಡಬೇಕು. ಧರ್ಮವು ಡೊಂಕು ಹಾದಿಯಲ್ಲಿ ಸಾಗುತ್ತಿರುವುದನ್ನು ತಪ್ಪಿಸಿ ಸರಿಯಾದ ದಾರಿಯಲ್ಲಿ ಸಾಗುವಂತೆ ಮಾಡಿ ಅದ್ವೈತದ ಊಟವನ್ನು ಉಣಬಡಿಸಿದವರು ಶಂಕರಾಚಾರ್ಯರು ಎಂದು ರಾಮಚಂದ್ರಾಪುರಮಠ ರಾಘವೇಶ್ವರಭಾರತಿ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಭಾನ್ಕುಳಿ ರಾಮ ದೇವಮಠ ಗೋಸ್ವರ್ಗದಲ್ಲಿ ಹಮ್ಮಿ ಕೊಂಡ ಶಂಕರಪಂಚಮೀ ಉತ್ಸವದಲ್ಲಿ "ಆವಹಂತೀ ಹವನ” ಮತ್ತು ’ಗೋಪಾಲ ಗೌರವ‘ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಶಂಕರರ ಎಲ್ಲಾ ಕೃತಿಗಳು ನಮಗೆ ಲಭ್ಯವಾಗಿಲ್ಲ. ಭಾಷ್ಯ ಸಾಹಿತ್ಯ ಹಾಗೂ ಸ್ತೋತ್ರ ಸಾಹಿತ್ಯಗಳೆರಡೂ ಶಂಕರರ ಸಾಹಿತ್ಯ ಕೃತಿಗಳಲ್ಲಿವೆ. ಶಂಕರರ ಸ್ತೋತ್ರಕ್ಕೆ ಬ್ರಹ್ಮಾಂಡದ ತೂಕವಿದೆ. ಹೀಗಾಗಿ ಕಲುಷಿತವಾಗುತ್ತಿರುವ, ದಾರಿತಪ್ಪಿ ನಡೆಯುತ್ತಿರುವ ಸಮಾಜವನ್ನು ಮತ್ತೆ ಧರ್ಮದ ಕಡೆಗೆ ಹೋಗುವಂತೆ ಮಾಡಲು ಶಂಕರರ ಸ್ತೋತ್ರಗಳ ಪಠಣ ಮಾಡಬೇಕು ಎಂದರು.

ಗೋವಿನ ಕುರಿತಾಗಿ ಕಾರ್ಯ ಮಾಡುತ್ತಿರುವ ರವಿ ಪಾಂಡವಪುರ ಮಂಡ್ಯ, ದತ್ತಾತ್ರೇಯ ಭಟ್ಟ ಕಡತೋಕಾ ಹುಬ್ಬಳ್ಳಿ, ಈರಶೆಟ್ಟಿ ಖ್ಯಾಮಾ ಮಮದಾಪುರ ಬೀದರ, ಅಭಿಷೇಕ ಎಂ.ಕೆ.ಮಂಚಾಲೆ ಅವರುಗಳಿಗೆ ದಿನೇಶ ಶಹರಾ ಫೌಂಡೇಶನ್ ಸಹಯೋಗದಲ್ಲಿ ’ಗೋಪಾಲ ಗೌರವ" ಪ್ರಶಸ್ತಿ ಪ್ರದಾನ ಮಾಡಿದರು.

ಶಂಕರಪಂಚಮಿ ಉತ್ಸವ ಸಮಿತಿಯ ಜಿ.ಕೆ.ಹೆಗಡೆ ಗೋಳಗೋಡ ಪ್ರಾಸ್ತಾವಿಕ ಮಾತನಾಡಿದರು. ಗಣಪತಿ ಹೆಗಡೆ ಗುಂಜಗೋಡ ನಿರ್ವಹಿಸಿದರು. ಕಾಮದುಘಾ ಯೋಜನೆಯ ಅಧ್ಯಕ್ಷ ವೈ.ವಿ.ಕೃಷ್ಣಮೂರ್ತಿ, ವಿವಿಧ ಸಮಿತಿಗಳ ಆರ್.ಎಸ್.ಹೆಗಡೆ ಹರಗಿ, ಎಂ.ಎಂ.ಹೆಗಡೆ ಮಗೇಗಾರ, ಮಹೇಶ ಭಟ್ಟ ಚಟ್ನಳ್ಳಿ, ಈಶ್ವರೀ ಅಕ್ಕ ಬೇರ್ಕಡವು, ವೀಣಾ ಭಟ್ಟ ಶಿರಸಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-20-580935890

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.