ಅಕಟಕಟಾ! ಶಿವ, ನಿನಗಿನಿತು ಕರುಣವಿಲ್ಲಾ;

ಅಕಟಕಟಾ! ಶಿವ ನಿನಗಿನಿತು ಕೃಪೆಯಿಲ್ಲಾ.

ಏಕೆ ಹುಟ್ಟಿಸಿದೆ ಇಹಲೋಕದುಃಖಿಯ ಪರಲೋಕ ದೂರನ?

ಏಕೆ ಹುಟ್ಟಿಸಿದೆ?

ಕೂಡಲ ಸಂಗಮದೇವಾ ಕೇಳಯ್ಯಾ,

ಎನಗಾಗಿ ಮತ್ತೊಂದು ತರುಮರನಿಲ್ಲವೇ?

ಸಂಸಾರ ಹೆಯ ಸ್ಥಳದ ವಚನದಲ್ಲಿ

ಈ ಲೋಕಜೀವನದ ದುಃಖ ಪರಿತಾಪಗಳಿಗೆ ನೊಂದ ಜೀವದ ಅಂತರ್ಭಾವ ಈ ವಚನದಲ್ಲಿದೆ.

ಆಂತರಿಕ ಅರಿವಿನ ಸಾಧನೆಯ ಮಾರ್ಗದಲ್ಲಿ ನಡೆಯುತ್ತಿರುವ ಜೀವಿಗೆ, ಈ ಲೋಕದ ಪ್ರತಿಕೂಲ ಪರಿಸರ ಇಂತಹ ಭಾವನೆಯನ್ನು ಒಮ್ಮೊಮ್ಮೆ ಮೂಡಿಸುತ್ತದೆ. ಶಿವನ ಕೃಪೆಯಿಂದ ವಂಚಿತವಾದಂತೆ ಅನಿಸುತ್ತದೆ. ಶಿವನಿಗೆ ಇನಿತಾದರೂ ಕರುಣೆಯಿಲ್ಲ, ಇನಿತಾ ದರೂ ಕೃಪೆಯಿಲ್ಲ ಎಂದು ವೇದನೆಯಿಂದ ಜೀವ ಕಳವಳಗೊಳ್ಳುತ್ತಾನೆ. ಜೀವನದ ಸಾರ್ಥಕತೆ ಮುಕ್ತಿಯ ಲಿಂಗೈಕ್ಯದಲ್ಲಿದೆ. ಅಂಥಹ ಸಾಧನೆ ಕೈಗೂಡದಾಗ ಜೀವನು ಶಿವನನ್ನು ಹೀಗೆ ಪ್ರಶ್ನಿಸುತ್ತಾನೆ.

"ಏಕೆ ಹುಟ್ಟಿಸಿದೆ ಇಹಲೋಕ ದುಃಖಯ ? ಪರಲೋಕದೂರನ?"

'ಇಹಲೋಕದಲ್ಲಿಯೂ ನಾನು ಪ್ರಾಪಂಚಿಕ ಅಥವಾ ಅಧ್ಯಾತ್ಮಿಕ ಸುಖವನ್ನು ಪಡೆಯಲಿಲ್ಲ.

ಪರಲೋಕದಿಂದಲೂ ದೂರವಾಗಿದ್ದೇನೆ ಭವದ ಬಾದೆಯಲ್ಲಿದ್ದೇನೆ . ಇಲ್ಲಿ ಪರಲೋಕ ಎಂದರೆ ಅದು ಆಂತರಿಕ ಪ್ರಜ್ಞೆಯ ಒಂದು ಸ್ತರ.

ಶಿವಭಾವ ನನ್ನ ಮನಸ್ಸಿನಲ್ಲಿ ಮೂಡಲಿಲ್ಲ;

ಶಿವಪ್ರಜ್ಞೆಯ ಸುಖ ಸಿಕ್ಕಲಿಲ್ಲ.

ಅತೃಪ್ತಿಗೆ ಅದು ಕಾರಣವಾಗುತ್ತದೆ.

ಇಂತಹ ವಿಫಲಜೀವಿಯನ್ನಾಗಿ ನನ್ನನ್ನು ಮಾಡುವುದಕ್ಕೆ ಬದಲು, ತರುಮರಾದಿಗಳನ್ನಾಗಿಯಾದರೂ ನನ್ನನ್ನು ಮಾಡಬಾರದಾಗಿತ್ತೆ ? ನಾಲ್ಕು ಜನರಿಗೆ ನೆರಳನ್ನೋ ಹೂವನ್ನೋ ಹಣ್ಣನ್ನೋ ಕೊಡುವ ಸಾರ್ಥಕತೆಯಾದರೂ ಲಭಿಸುತ್ತಿತ್ತು. ನನ್ನ ಈ ಜೀವನ ಅದಕ್ಕಿಂತಲೂ ಕಡೆಯಾಯಿತಲ್ಲಾ - ಎಂಬ ಉದ್ಧಾರದಲ್ಲಿ ಆರ್ತಭಾವದ ಜೊತೆಗೆ ಆತ್ಮಜಾಗೃತಿಯ ಎಚ್ಚರಿಕೆಯೂ ಕಾಣುತ್ತದೆ.

ಆದ್ದರಿಂದ ಮೂಢನಂಬಿಕೆಗೆ ಗುರಿಯಾಗಿ ಜನ್ಮವನ್ನು ವೃಥಾ ಮಾಡಬಾರದೆಂಬ ಭಾವ ಬಸವಣ್ಣನವರ ವಚನದಲ್ಲಿ ಆತ್ಮ ನೈವೇದ್ಯದ ಭಾವ ಅರಿಯಬಹುದು.

ಅಕಟಕಟಾ! ಬೆಡಗು ಬಿನ್ನಾಣವೆಂಬುದೇನೊ?

'ಓಂ ನಮಃ ಶಿವಾಯ' ಎಂಬುದೇ ಮಂತ್ರ;

'ಓಂ ನಮಃ ಶಿವಾಯ' ಎಂಬುದೇ ತಂತ್ರ;

ನಮ್ಮ ಕೂಡಲ ಸಂಗಮದೇವರ ನೆನೆವುದೇ ಮಂತ್ರ.

ಪಂಚಾಕ್ಷರಿ ಮಂತ್ರದ ನೆನೆಹೆ ಭವವನ್ನು ಗೆಲ್ಲುವ ಮಹಾ ಮಾರ್ಗವಾಗಿದೆ.

ಬೆಡಗು ಬಿನ್ನಾಣಗಳು ಅಂದರೆ ಹೊರಗೆ ತೋರುವ ಆಡಂಬರಾದಿಗಳು ಸಾಧನೆಯಲ್ಲಿ ಸಲ್ಲವೆಂಬುದನ್ನು ಇಲ್ಲಿ ಕಾಣಬಹುದು.

ಮಂತ್ರೋಚ್ಚಾರಣೆಯ ಸಂದರ್ಭದಲ್ಲಿ ದೇಹನ್ಯಾಸ, ಕರನ್ಯಾಸ, ಅಂಗನ್ಯಾಸ ಮೊದಲಾದ ಕ್ರಿಯೆಗಳು ಬೆಳೆದು ಬಂದುವು. 'ನ್ಯಾಸ' ಎಂದರೆ ಸ್ಥಾಪಿಸುವುದು, ಇಡುವುದು. ಶಕ್ತಿ ಸಂಯೋಜನಾ ವಿಧಾನವೇ ತಂತ್ರ. ಇದರಿಂದ ಕಾಯಸ್ಥಲದಲ್ಲಿ ಇಷ್ಟಲಿಂಗ, ಮನಸ್ಥಲದಲ್ಲಿ ಪ್ರಾಣಲಿಂಗ, ಭಾವಸ್ಥಲದಲ್ಲಿ ಭಾವಲಿಂಗ - ಹೀಗೆ ಶಕ್ತಿ ವಿಶಿಷ್ಟವಾಗುತ್ತಾ ಬರುತ್ತದೆ. ದೇಹ ಮನ ಭಾವಗಳಲ್ಲಿ ಕ್ರಿಯಾ ಇಚ್ಛಾ ಜ್ಞಾನಶಕ್ತಿಗಳು ಅಳವಡುತ್ತವೆ. ಈ ಸಾಧನೆಯಲ್ಲಿ ಕೆಲವು ಬಹಿರಂಗದ ಆಡಂಬರ ಕ್ರಿಯೆಗಳು ಬೆಳೆದುಬಂದುವು. ಈ ಆಡಂಬರ ಕ್ರಿಯೆಗಳ ಅಗತ್ಯವಿಲ್ಲವೆಂದು ಹೇಳುತ್ತಾರೆ ಬಸವಣ್ಣನವರು. 'ಓಂ ನಮಃ ಶಿವಾಯ' ಎಂಬುದೇ ಮಂತ್ರ. ಇಲ್ಲಿ 'ಮಂತ್ರ' ಎಂದರೆ ತಾರಿಸು ಅಥವಾ ದಾಟಿಸುವ ಭವವನ್ನು ಗೆಲ್ಲುವ ಮಾರ್ಗದ ಮಹಾವಾಕ್ಯ .

ಓಂ, ಅ ಉ ಮ ಕಾರಗಳ ಸಂಗಮ ಬ್ರಹ್ಮಾಂಡ ಸೃಷ್ಟಿಯ ಮೂಲ ನಾದ ಬಿಂದು ಕಳೆಯ ಪ್ರತೀಕ

ಬ ಸ ವ ಭವ ಸಾಗರ ದಾಟಿಸುವ,ಸಲುವಾಗಿ ಆತ್ಮ ವಸ್ತುವಿನ ಅನಂತ ಜ್ಞಾನವನಿತ್ತು ಸರ್ವಜ್ಞನಾಗಿಸಿ, ಸಮಸ್ತ ವಸ್ತು ಚಿತನ್ಯಾತ್ಮಕ ಸ್ಥಿತಿಯನ್ನು ಸ್ವಯಂ ಅರಿವನ್ನು ನೀಡುವ ಅಕ್ಷರಗಳಾಗಿವೆ.

ನಮಃ,ಗೌರವ ಶಿವ ಶರಣಾಗತಿಯ ನಮಗಳನ್ನು ಸೂಚಿಸುತ್ತದೆ.

ಶಿವಾಯ, ಸಚ್ಚಿದಾನಂದ ನಿತ್ಯ ಪರಿಪೂರ್ಣ ನಿರಂಜನ ಸೃಷ್ಟಿ ಕರ್ತನಾದ ಮೂಲ ಪರಮಾತ್ಮನ {ಆತ್ಮ} ವಸ್ತು ಲಿಂಗಯ್ಯನ ಸ್ಮರಣೆ.

ಇದು ತಾರಕಶಕ್ತಿ. 'ಓಂ ನಮಃ ಶಿವಾಯ' ಎಂಬುದೇ ತಂತ್ರ. ಇಲ್ಲಿ ತಂತ್ರವೆಂದರೆ ಮೇಲೆ ಹೇಳಿದ ಶಕ್ತಿ ಸಂಯೋಜನ ಕ್ರಿಯೆಗಳು. ಇವೆಲ್ಲಾ ಕೂಡಲಸಂಗಮದೇವನನ್ನು ನೆನೆಯುವ ಮಂತ್ರದಲ್ಲಿ ಅಡಗಿ ಹೋಗುತ್ತವೆ. ತನ್ನೊಳಗಿನ ಚಿದ್ದಬೆಳಕನ್ನು ಬೆರೆಸಲು ಸಾಧನಾವಾಗಿದೆ ಅದರ ಹೊರತಾಗಿ ಬೇರೆ ಯಾವ ಆಡಂಬರದ ಕರ್ಮಗಳೂ ಅಗತ್ಯವಿಲ್ಲವೆನ್ನುತ್ತಾರೆ ಬಸವಣ್ಣನವರು. ಭಕ್ತಿಯ ಮೂಲಕ ಐಕ್ಯ ಸ್ಥಳವನ್ನು ಸಾಧಿಸುವ ಸಾಧಕನಿಗೆ ಅಷ್ಟಾವರಣದ ಮಂತ್ರ ಅದರಲ್ಲಿಯೂ ಪರಮ ಪವಿತ್ರವಾದ ಪ್ರಣವ ಪಂಚಕ್ಷರಿಯನ್ನು ತನ್ನ ಮೂಲ ಅರಿವಿಗೆ ಭವ ದಾಟುವ ಮಹಾ ಸಾಧನವಾದ ಅಂತಿಮ ಸತ್ಯ ನಮಃಶಿವಾಯ ಎಂಬುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.