ಸಿಂಧನೂರು: ‘ಶಾಂತಿ, ಸೌಹಾರ್ದ, ಕರುಣೆ ಮತ್ತು ಮಾನವೀಯತೆ ಮನು ಷ್ಯತ್ವದ ಸಿದ್ಧಾಂತವಾಗಿದ್ದು, ಇದನ್ನು ಎಲ್ಲ ಧರ್ಮದವರೂ ಅರಿತುಕೊಂಡು ಸಾಮರಸ್ಯದಿಂದ ಬಾಳಬೇಕು. ಆಗ ಮಾತ್ರ ವಿವಿಧತೆಯಲ್ಲಿ ಏಕತೆ ಹೊಂದಿದ ಭಾರತ ದೇಶದ ಆಶಯ ಸಫಲವಾಗಲಿದೆ’ ಎಂದು ಜೈನ ಆಚಾರ್ಯ ವಿಮಲ್ ಸಾಗರ್ ಸುರೇಶ್ವರ ಅಭಿಪ್ರಾಯಪಟ್ಟರು.

ಇಲ್ಲಿನ ಜೈನ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಧಾರ್ಮಿಕ ಸಭೆ ಮತ್ತು ವಿಶೇಷ ಪ್ರವಚನ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ನಾನು ಕರ್ನಾಟಕ ರಾಜ್ಯದ ಹಿರಿಯೂರಿನಲ್ಲಿ ಜನಿಸಿದ್ದು, 1982ರಲ್ಲಿ 13 ವರ್ಷದವನಿದ್ದಾಗ ಜೈನ ದೀಕ್ಷೆ ಪಡೆದಿದ್ದೇನೆ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ ಸೇರಿ ವಿವಿಧ ರಾಜ್ಯಗಳಲ್ಲಿ ಇಲ್ಲಿಯವರೆಗೆ ಒಂದು ಲಕ್ಷ ಕಿ.ಮೀ ಪಾದಯಾತ್ರೆ ನಡೆಸಿದ್ದೇನೆ. ರಾಯಚೂರು ಮೂಲಕ ತೆಲಂಗಾಣ ರಾಜ್ಯಕ್ಕೆ ತೆರಳಿ 9 ತಿಂಗಳು ಪಾದಯಾತ್ರೆ ನಡೆಸಲಾಗುವುದು’ ಎಂದು ಹೇಳಿದರು.

‘ಪಾಶ್ಚಿಮಾತ್ಯ ಸಂಸ್ಕೃತಿ, ಅತಿಯಾಗಿ ಮೊಬೈಲ್ ಬಳಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿ-ಯುವಜನರು ಮುಳುಗಿ ದಾರಿ ತಪ್ಪುತ್ತಿರುವುದು ದುರಂತದ ಸಂಗತಿ. ಮಾದಕ ವಸ್ತುಗಳ ಸೇವನೆ ಹಾಗೂ ಬೆಟ್ಟಿಂಗ್ ಆಟಗಳಿಗೆ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ತಾವು ಪಾದಯಾತ್ರೆಯ ಸಂದರ್ಭದಲ್ಲಿ ಶಾಲಾ-ಕಾಲೇಜು, ಮಠಗಳಲ್ಲಿ ವಾಸ್ತವ್ಯ ಹೂಡಿ ಅಲ್ಲಿನ ಮಕ್ಕಳಿಗೆ ದೇಶಭಕ್ತಿ, ದೇಶಾಭಿಮಾನ, ಸಾಮಾಜಿಕ ಸೇವೆ, ಮಾನವೀಯ ಮೌಲ್ಯಗಳ ಕುರಿತು ಜಾಗೃತಿ ಮೂಡಿಸಿ, ಸರಿದಾರಿಗೆ ತರುವ ಪ್ರಯತ್ನವನ್ನು ಮಾಡುತ್ತಿದ್ದೇನೆ’ ಎಂದರು.

‘ಮನುಷ್ಯನ ಮನಸ್ಸು ಪರಿವರ್ತನೆ ಆಗಬೇಕು. ಸಾಮರಸ್ಯದಿಂದ ಬದುಕುವುದನ್ನು ಕಲಿಯಬೇಕು. ದ್ವೇಷ, ಅಸೂಯೆ, ಅನುಮಾನ ಪಡುವುದು ಬಿಡಬೇಕು. ಸಂಸ್ಕಾರಯುತ ಮತ್ತು ಮೌಲ್ಯಯುತ ಶಿಕ್ಷಣ ಮರೆಯಾಗಿ, ಶಿಕ್ಷಣ ಎಂಬುದು ವ್ಯಾಪಾರವಾಗಿರುವುದು ದುರ್ದೈವದ ಸಂಗತಿ. ಬಹುಮುಖ್ಯವಾಗಿ ಶಿಕ್ಷಣ ವ್ಯವಸ್ಥೆ ಬದಲಾವಣೆಯಾದರೆ ಜೀವನವೂ ಪರಿವರ್ತನೆ ಆಗುತ್ತದೆ’ ಎಂದು ಹೇಳಿದರು.

ಜೈನ ಮುನಿ ಆಚಾರ್ಯ ಭಗವಂತ, ಕುಂತುನಾಥ ಜೈನ ಶ್ವೇತಾಂಬರ ಮೂರ್ತಿ ಪೂಜಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಲಾಲಚಂದ್ ಜೈನ್, ಜೈನ ಸಮಾಜದ ಮುಖಂಡರಾದ ಶ್ರೇಣಿಕರಾಜ್ ಚಾಜೆಡ್, ಸಂಜಯ್ ನಹಾರ್, ಸುಜಿತ್ಕುಮಾರ ಓಸ್ತವಾಲ್, ಗೌತಮ್ ಮೆಹ್ತಾ, ಮಹಾವೀರ ಚಂದ್ ಸಿ.ಎ, ಗೌತಮ್ ಚಾಜೇಡ್, ಮಹಾವೀರ ಶೇಠ್, ಅಶೋಕ ಬೋಹಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-32-1843562340

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.