ಸೊರಬ: ‘12ನೇ ಶತಮಾನದಲ್ಲಿನ ಸಮಸ್ಯೆಗಳಿಗೆ ವಚನಕಾರರು ರಚಿಸಿದ ವಚನಗಳೇ ಪರಿಹಾರವಾಗಿವೆ’ ಎಂದು ಶಿಕಾರಿಪುರ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ ಹೇಳಿದರು.

ಗುರುವಾರ ಪಟ್ಟಣದ ಮುರುಘಾ ಮಠದಲ್ಲಿ ನಡೆದ ಅಕ್ಕಮಹಾದೇವಿ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಗುರುವಿನಿಂದ ಪಡೆಯುವ ಸಂಸ್ಕಾರದಿಂದಲೇ ಮನುಷ್ಯ ಒಳ್ಳೆಯವನಾಗಲು ಸಾಧ್ಯ. ಮನದಲ್ಲಿ ಮನೆಗೊಳ್ಳುವ ಗುರು ಲಿಂಗವಾಗಿ ದರ್ಶನವಾಗುತ್ತಾನೆ. ಸಾಯುವ, ಕೆಡುವ ಗಂಡರನ್ನೊಲೆಯೊಳಗಿಕ್ಕು ಎನ್ನುವ ಮೂಲಕ ಕ್ಷಣಿಕ ಸುಖಕ್ಕೆ ಹೆಣ್ಣನ್ನು ಅಪೇಕ್ಷೆಪಡುವ ಗಂಡಿನ ಮನೋಧರ್ಮವನ್ನು ಟೀಕಿಸಿ ಮಹಿಳೆಯರ ಆತ್ಮ ಸ್ಥೈರ್ಯಕ್ಕೆ ಉದಾಹರಣೆಯಾಗಿದ್ದಾಳೆ’ ಎಂದರು.

‘ದಾರ್ಶನಿಕರನ್ನು ಸ್ಮರಿಸುವುದರಿಂದ ಆರೋಗ್ಯ, ನೆಮ್ಮದಿ ಶಾಂತಿ ಲಭಿಸುತ್ತದೆ ಎಂದು ಪುರಾಣದಲ್ಲಿ ಹೇಳಲಾಗಿದೆ. ಅಕ್ಕಮಹಾದೇವಿ ಸಮಾಧಾನಿಯಾಗಿ ಲೋಕದ ನಿಂದನೆಗಳಿಗೆ ಪ್ರತ್ಯುತ್ತರವಾದಳು’ ಎಂದು ಉಪನ್ಯಾಸಕ ವಿಜಯಕುಮಾರ್ ದಟ್ಟೇರ್ ತಿಳಿಸಿದರು.

ದವನದ ಹುಣ್ಣಿಮೆಯಂದು ಜನಿಸಿದ ವಿರಕ್ತ ಮಹಿಳೆ ಅಕ್ಕಮಹಾದೇವಿ ಜಯಂತ್ಯುತ್ಸವದ ಅಂಗವಾಗಿ ಅಕ್ಕನ ಬಳಗದ ವತಿಯಿಂದ ತೊಟ್ಟಿಲು ತೂಗುವ ಮೂಲಕ ಅಕ್ಕಮಹಾದೇವಿಯ ಜನ್ಮದಿನವನ್ನು ವಿಶೇಷವಾಗಿ ಆಚರಿಸಲಾಯಿತು.

ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮ ಗೌಳಿ ಮಾತನಾಡಿದರು.

ಈ ವೇಳೆ ಡಿ.ಶಿವಯೋಗಿ, ನಾಗರಾಜಗೌಡ ಆಲಹಳ್ಳಿ, ಜಯಮಾಲಾ, ಪೂರ್ಣಿಮಾ ಶಿವಯೋಗಿ, ಮಮತಾ, ಪವಿತ್ರಾ, ಬಸವರಾಜಗೌಡ, ರೂಪಾ, ಪುಷ್ಪಾ, ಶ್ವೇತಾ, ಸುಧಾ, ಮಲ್ಲಿಕಾರ್ಜನಗೌಡ ತ್ಯಾವಗೋಡು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-42-402340140

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.