ಸೊರಬ: ‘ಪೋಷಕರು ತಮ್ಮ ಮಕ್ಕಳಲ್ಲಿ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮೂಡಿಸಲು ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿರಿ, ಇದರಿಂದ ಭವಿಷ್ಯದಲ್ಲಿ ಗುರು-ಹಿರಿಯರಿಗೆ ಗೌರವ ನೀಡುವ ಮನೋಭಾವ ಬೆಳೆಯಲು ಸಹಕಾರಿಯಾಗಲಿದೆ’ ಎಂದು ಜಡೆ ಮಹಾಸಂಸ್ಥಾನ ಮಠದ ಮಹಾಂತ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕಾಸರಗುಪ್ಪೆ ಗ್ರಾಮದಲ್ಲಿ ಶುಕ್ರವಾರ ಲವ– ಕುಶ ನೂತನ ದೇವಾಲಯ ಪ್ರವೇಶೋತ್ಸವ, ಪುನರ್ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

‘ಮಕ್ಕಳನ್ನು ಕೇವಲ ಶಿಕ್ಷಿತರನ್ನಾಗಿಸದೆ ಅವರಲ್ಲಿ ಧಾರ್ಮಿಕ ಪ್ರಜ್ಞೆ ಮತ್ತು ಉತ್ತಮ ಆಚಾರ ವಿಚಾರಗಳನ್ನು ಮೂಡಿಸಿದಾಗ ಸುಸಂಸ್ಕೃತರಾಗಲು ಸಾಧ್ಯ. ಒಳ್ಳೆಯ ಸಂಸ್ಕಾರ ನೀಡುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿಸುವ ಜವಾಬ್ದಾರಿ ಪೋಷಕರದ್ದಾಗಿದೆ’ ಎಂದರು.

‘ನಾವು ಕೈಗೊಳ್ಳುವ ಕಾರ್ಯಗಳು ಭಗವಂತನಿಗೆ ಪ್ರಿಯವಾಗುವಂತಿರಬೇಕು. ದೇವಸ್ಥಾನಗಳ ನಿರ್ಮಾಣದಿಂದ ಗ್ರಾಮದ ಘನತೆ, ಗೌರವ ಮತ್ತು ಶ್ರೇಷ್ಠತೆ ಹೆಚ್ಚಾಗಿ ಪುಣ್ಯ ಕಾರ್ಯ ಮಾಡಲು ಅವಕಾಶವಾಗುತ್ತದೆ. ಜನ್ಮದಾತರನ್ನು ಪ್ರೀತಿ ಹಾಗೂ ಗೌರವದಿಂದ ಕಂಡಾಗ ದೇವಸ್ಥಾನಗಳನ್ನು ನಿರ್ಮಿಸಿದಷ್ಟೇ ಪುಣ್ಯ ಲಭಿಸುತ್ತದೆ’ ಎಂದು ಗೊಗ್ಗೆಹಳ್ಳಿ ಪಂಚಮಠದ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನಿವೃತ್ತ ಪ್ರಾಂಶುಪಾಲ ಎಚ್.ಬಿ. ಪಂಚಾಕ್ಷರಯ್ಯ ಸಾಗರ ಉಪನ್ಯಾಸ ನೀಡಿದರು. ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಕೆ.ಬಿ.ಎಂ. ಪಟೇಲ್ ಕಾಸರಗುಪ್ಪೆ, ರವೀಂದ್ರನಾಥ ಎಚ್.ವಿ. ಸಂಪಗೋಡು, ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ವಿ. ರುದ್ರಮುನಿಗೌಡ ಚಗಟೂರು, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎಚ್.ಸಿ. ವೀರಭದ್ರ ಹಿರಳೆ ಅವರನ್ನು ಸನ್ಮಾನಿಸಲಾಯಿತು. ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಘನಬಸವ ಅಮರೇಶ್ವರ ಸ್ವಾಮೀಜಿ, ಶಾಂತಾಪುರ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಮೂಡಿ ವಿರಕ್ತಮಠದ ಸದಾಶಿವ ಸ್ವಾಮೀಜಿ, ಹಿರೇಮಾಗಡಿ ಮಠದ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, ಉತ್ತರಾಧಿಕಾರಿ ಚನ್ನಬಸವ ಮುರುಘರಾಜೇಂದ್ರ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಲವ-ಕುಶ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ವಿ. ಗೌಡ, ಪ್ರಮುಖರಾದ ವೀರನಗೌಡ, ಬಸವನಗೌಡ, ಕೆ.ಸಿ. ಜಗದೀಶ್, ಕೆ.ಜೆ. ಉಮೇಶ್, ಪ್ರೇಮಕುಮಾರ್ ಪಾಟೀಲ್, ಶಿವಕುಮಾರ್ ಪಾಟೀಲ್, ಕೆ.ವಿ. ಅರುಣಕುಮಾರ್, ಕೆ.ಸಿ. ಚಂದ್ರಶೇಖರ್, ಆರ್.ಕೆ. ಸಚಿನ್, ಬಾಬು ಗೌಡ, ಎಂ.ಬಿ. ಪಾಟೀಲ್, ಕೆ.ಬಿ. ಶಿವಕುಮಾರ್, ಕೆ.ಬಿ. ಸುಧೀರ್, ಕೆ.ಸಿ. ಶಂಕರ್ ಗೌಡ, ಕೆ.ಆರ್. ಅನಿಲ್ ಕುಮಾರ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-42-1460878710

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.