ಮಂಗಳಕರವಾದುದು, ಎಂದರೆ ಎಲ್ಲರ ಒಳಿತನ್ನು ಕಾಪಾಡುವಂಥ ತತ್ತ್ವವೊಂದು ಸೃಷ್ಟಿಯ ಜೊತೆಜೊತೆಯಲ್ಲಿಯೇ ಕೂಡಿಕೊಂಡಿರುತ್ತದೆ. ಇದು ಪುರುಷಾಕಾರದಲ್ಲಿ ತೋರಿಕೊಂಡ ದಿನವೇ ಶ್ರೀರಾಮನವಮಿ; ಆ ಮಂಗಳಕರ ತತ್ತ್ವವೇ ಶ್ರೀರಾಮ. ಕಾಳಿದಾಸನು ರಾಮನನ್ನು ಜಗತ್ತಿನ ‘ಪ್ರಥಮ ಮಂಗಳ’ ಎಂದು ಕರೆದಿದ್ದಾನೆ. ಎಂದರೆ, ಈ ಮಂಗಳತತ್ತ್ವ ಎಂದಿನಿಂದಲೂ ಇದೆ ಎಂದು ಅರ್ಥ. ಅನಾದಿಕಾಲದಿಂದಲೂ ಇದು ಹೇಗಿದೆ ಎಂದು ತಿಳಿಯಬೇಕಾದರೆ ನಾವು ವಾಲ್ಮೀಕಿ ರಾಮಾಯಣವನ್ನು ನೋಡಬೇಕಾಗುತ್ತದೆ. ಶ್ರೀರಾಮನು ಧರ್ಮದ ಮೂರ್ತರೂಪವಾಗಿದ್ದಾನೆ ಎನ್ನುತ್ತಾರೆ, ವಾಲ್ಮೀಕಿ ಮಹರ್ಷಿ. ಮಂಗಳಕರವಾದುದು ಹೇಗಿರುತ್ತದೆ ಎಂದರೆ ಅದು ರಾಮನಂತೆ ಇರುತ್ತದೆ. ಹೀಗಾಗಿ ನಾವು ಧರ್ಮವನ್ನು ತಿಳಿಯಬೇಕಾದರೆ ರಾಮನ ವ್ಯಕ್ತಿತ್ವವನ್ನು ನೋಡಬೇಕಾಗುತ್ತದೆ.

ಶ್ರೀರಾಮನ ಆಚರಿಸಿದ ಧರ್ಮವೆಲ್ಲವೂ ಮಾನುಷಜೀವನದ ರೀತಿ–ನೀತಿಗಳಿಗೆ ಸೇರಿದಂಥವು. ಗುಣವಂತನಾದ ಮನುಷ್ಯನು ಕುಟುಂಬದಲ್ಲಿ ಹೇಗೆ ಬದುಕಬೇಕು, ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದಕ್ಕೆ ಆದರ್ಶವಾದುದು ರಾಮನ ನಡೆ–ನುಡಿಗಳು. ಮೊದಲಿಗೆ ತನ್ನತನದಲ್ಲಿ ಸದ್ಗುಣಗಳನ್ನು ಒಂದಾಗಿಸಿಕೊಳ್ಳಬೇಕು; ಆ ಬಳಿಕ, ಹೀಗೆ ಒಂದಾಗಿಸಿಕೊಂಡಿರುವ ಗುಣಗಳನ್ನು ಸಮಷ್ಟಿಯೊಂದಿಗೆ ಮಿಳಿತವಾಗಿಸಿಕೊಂಡು ಜೀವನವನ್ನು ನಡೆಸಬೇಕು. ಹೀಗೆ ವ್ಯಷ್ಟಿ–ಸಮಷ್ಟಿಗಳಲ್ಲಿ ಸಾಮರಸ್ಯದಿಂದ ಪ್ರಕಟವಾಗುವ ಗುಣಮಾಧುರ್ಯವೇ ‘ಧರ್ಮ’ ಎನಿಸಿಕೊಳ್ಳುವುದು. ಸಿಹಿಯನ್ನು ಚಿತ್ರದಲ್ಲಿ ಬಣ್ಣಿಸಲಾಗದು; ನಾಲಗೆಯ ಅನುಭವವೇ ಅದಕ್ಕೆ ಪ್ರಮಾಣ. ಅಂತೆಯೇ ಧರ್ಮವೂ ಕಣ್ಣಿಗೆ ಕಾಣುವ ಒಂದನೊಂದು ರೂಪವಲ್ಲ; ಅದು ವ್ಯಕ್ತಿಯೊಬ್ಬನ ನಡೆ–ನುಡಿಗಳಲ್ಲಿ ಪ್ರಕಟವಾಗುವ ಭಾವ. ಇಂಥ ಅಮೂರ್ತವಾದ ಧರ್ಮಕ್ಕೆ ಆಕಾರ ಒದಗಿ ಆದ ವಿಗ್ರಹವೇ ಶ್ರೀರಾಮ; ಎಂದರೆ ಅವನನ್ನು ಬಿಟ್ಟು ಧರ್ಮವಿಲ್ಲ, ಧರ್ಮವನ್ನು ಬಿಟ್ಟು ಅವನಿಲ್ಲ – ಎಂಬ ತಾದಾತ್ಮ್ಯ. ಶ್ರೀರಾಮನು ಮನುಷ್ಯರೂಪದಲ್ಲಿ ಇಷ್ಟು ಪರಿಪೂರ್ಣವಾಗಿ ಬಾಳಿದ ಕಾರಣದಿಂದಲೇ ಅವನನ್ನು ನಮ್ಮ ಸಂಸ್ಕೃತಿಯು ದೈವವಾಗಿ ಕಂಡರಿಸಿತು. ಶ್ರೀರಾಮನ ಈ ದೈವತ್ವದ ಬಗ್ಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಆಡಿರುವ ಮಾತುಗಳು ಮನನೀಯವಾಗಿವೆ:

’ರಾಮಚಂದ್ರನಾದರೂ ಹೀಗೆಯೇ ಬಾಳಿನಲ್ಲಿ ಅವರವರ ಸಮ್ಮತಿಗೆ ಅನುಗುಣವಾಗಿ ಒಳ್ಳೆಯದನ್ನು ಸಾಧಿಸುವ ಒಂದು ಆಕಾರವಾಗಿದ್ದಾನೆ. ಆ ಆಕಾರವನ್ನು ಕೆಲವರು ಮನುಷ್ಯನೆನ್ನಬಹುದು; ಇನ್ನು ಕೆಲವರು ದೈವವೆಂದು ಪೂಜಿಸಬಹುದು. ದೈವವೆಂದು ಪೂಜಿಸುವವರು ತಪ್ಪು ಮಾಡುವರೆಂದು ಇತರರು ಭಾವಿಸಬಾರದು. ದೇವರು ಎನ್ನುವ ತತ್ತ್ವವನ್ನು ಒಪ್ಪದವರು, ಬಾಳಿನಲ್ಲಿ ಯಾವುದನ್ನು ಆದರ್ಶವಾಗಿ ಎಣಿಸುವುದು ಸಾಧ್ಯ, ವಿಚಾರಮಾಡಲಿ. ರಾಮನು ಆ ಆದರ್ಶದ ಮಟ್ಟಕ್ಕೆ ಮೀರಿರುವನು ಅಥವಾ ಹತ್ತಿರ ಹತ್ತಿರ ಸಾರುವನು ಎಂದು ಕಾಣುತ್ತದೆ. ದೇವರು ಎನ್ನುವ ತತ್ತ್ವ ಉಂಟು. ಆದರೆ ಅದು ಈ ರಾಮನೆಂಬ ಚಿತ್ರದಿಂದ ಬೇರೆ ಎನ್ನುವವರು, ತಮ್ಮ ಭಾವಕ್ಕೆ ಒಂದು ರೂಪವನ್ನು ಕೊಡಲು ಯತ್ನಮಾಡಲಿ. ಅದು ರಾಮನನ್ನು ಹೋಲುವುದೆಂದು ಕಾಣುತ್ತದೆ.’

ವೈಯಕ್ತಿಕ ಹಿತವನ್ನಷ್ಟೆ ಸಾಧಿಸಿಕೊಡುವುದು ಧರ್ಮವಲ್ಲ; ಋತ, ಎಂದರೆ ಹಲವರ ಹಿತವನ್ನೂ ನೆಲೆಯನ್ನೂ ಎತ್ತಿಹಿಡಿಯುವುದು ಧರ್ಮ – ಎಂಬುದನ್ನು ನಿರೂಪಿಸಿ, ಅದನ್ನು ತನ್ನ ವ್ಯಕ್ತಿತ್ವದ ಬೆಳಕಿನಲ್ಲಿ ಲೋಕಕ್ಕೆ ಕಾಣಿಸಿದವನು ಶ್ರೀರಾಮ. ಋತಕ್ಕೆ ಪೂರಕವಾಗಿರುವ ಧರ್ಮನ ಹೆಜ್ಜೆಗಳು ಬಹಳ ಸಂಕೀರ್ಣವಾಗಿರುತ್ತವೆ. ಕೆಲವೊಮ್ಮೆ ಇವು ಶಕ್ತಿಯ ಲಾಸ್ಯದಂತೆಯೂ ಇರಬಹುದು; ಕೆಲವೊಮ್ಮೆ ಶಿವನ ತಾಂಡವದಂತೆಯೂ ಪ್ರಕಟವಾಗಬಹುದು. ಧರ್ಮದ ಈ ಎರಡೂ ಆಯಾಮಗಳನ್ನೂ ಶ್ರೀರಾಮನ ಚರಿತೆಯು ನಮಗೆ ತೋರಿಸಿಕೊಟ್ಟಿದೆ.

ಶ್ರೀರಾಮ ನಮ್ಮ ಸಂಸ್ಕೃತಿಯ ಲಕ್ಷಣವನ್ನು ರೂಪಿಸಿದ ಧರ್ಮದ ಎರಕ. ನಾವು ಧರ್ಮದ ಮಾರ್ಗದಲ್ಲಿದ್ದೇವೆಯೋ, ಅಧರ್ಮದ ಹಾದಿಯಲ್ಲಿದ್ದೇವೋ – ಎಂಬ ತೀರ್ಮಾನಕ್ಕೆ ಒದಗುವ ಧರ್ಮದಂಡವೇ ಶ್ರೀರಾಮ ಎಂಬ ಮಹಾತತ್ತ್ವ. ಎಲ್ಲಿಯವರೆಗೂ ರಾಮಾಯಣ ಎಂಬ ಜೀವನದಿ ನಮ್ಮ ರಾಷ್ಟ್ರಕಾವ್ಯವಾಗಿರುತ್ತದೆಯೋ, ಎಲ್ಲಿಯವರೆಗೂ ಶ್ರೀರಾಮ ಎಂಬ ಜೀವತತ್ತ್ವ ನಮ್ಮ ಪ್ರತ್ಯಕ್ಷದೈವವಾಗಿರುತ್ತಾನೋ, ಅಲ್ಲಿಯವರೆಗೂ ನಮ್ಮ ನೆಲದಲ್ಲಿ ಧರ್ಮ ಎಂಬ ಸಂಸ್ಕೃತಿಯ ಬೆಳೆಯನ್ನು ಅಧಾರ್ಮಿಕವಾದ ವಿಕೃತ ಕಳೆಗಳು ನಾಶಮಾಡಲಾರವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.