ಸುರಪುರ: ‘ಆದಿ ಶಂಕರಾಚಾರ್ಯರು ಅದ್ವೈತ ತತ್ವದ ಪ್ರತಿಪಾದಕರು. ಭಕ್ತಿ, ಜ್ಞಾನದ ಮೂಲಕ ಸಮನ್ವಯದಿಂದ ಮಾನವ ಜೀವನಕ್ಕೆ ದಾರಿ ದೀಪವಾಗಿದ್ದಾರೆ. ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದು ತಹಶೀಲ್ದಾರ್ ಎಚ್.ಎ. ಸರಕಾವಸ್ ಹೇಳಿದರು.

ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಂಕರಾಚಾರ್ಯರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ‘ಶಂಕರಾಚಾರ್ಯರು ಕ್ರಿ.ಶ. 8ನೇ ಶತಮಾನದಲ್ಲಿ ಜನಿಸಿದರು. ಅವರ ಅದ್ವೈತ ವೇದಾಂತ ತತ್ವವನ್ನು ಪ್ರಚಾರ ಮಾಡಿದರು. ಅವರ ಉಪದೇಶಗಳು ಇಂದಿಗೂ ಜನರ ಜೀವನದಲ್ಲಿ ಪ್ರೇರಣೆಯಾಗಿ ಉಳಿದಿವೆ. ಸಮಾಜದಲ್ಲಿ ಏಕತೆ, ಶಾಂತಿ ಮತ್ತು ಆತ್ಮಜ್ಞಾನವನ್ನು ಬೆಳೆಸುವ ಸಂದೇಶವನ್ನು ಅವರು ನೀಡಿದ್ದಾರೆ’ ಎಂದರು.

ಸಮುದಾಯದ ಅಧ್ಯಕ್ಷ ದೇವಿದಾಸಭಟ್ಟ ಕನಕಗಿರಿ ಮಾತನಾಡಿ, ‘ಆದಿ ಶಂಕರಾಚಾರ್ಯರು ಚಿಕ್ಕ ವಯಸ್ಸಿಯನಲ್ಲಿಯೇ ಅಖಂಡ ಪಾಂಡಿತ್ಯದ ಮೂಲಕ ಜ್ಞಾನ ಸಂಪಾದನೆ ಮಾಡಿದ್ದರು. ಜ್ಞಾನ, ಭಕ್ತಿ, ವೈರಾಗ್ಯ ಜೀವನದ ಸತ್ಯವನ್ನು ಅರಿಯುವ ದಾರಿಗಳೆಂದು ಅವರು ತಿಳಿಸಿದ್ದಾರೆ. ಶೃಂಗೇರಿ, ದ್ವಾರಕಾ, ಪುರಿ, ಜ್ಯೋತಿರ್ಮಠಗಳಲ್ಲಿ ಪೀಠಗಳನ್ನು ಸ್ಥಾಪಿಸಿದರು. ಭಜಗೋವಿಂದಂ, ಉಪನಿಷತ್ ಭಾಷ್ಯಗಳು, ಬ್ರಹ್ಮಸೂತ್ರ ಭಾಷ್ಯ ಅವರ ಕೃತಿಗಳಾಗಿವೆ’ ಎಂದರು.

ಸಮುದಾಯದ ಯಜ್ಞೇಶ್ವರ ಭಟ್ ರಾಜಜೋಶಿ, ಉಪೇಂದ್ರ ಜಹಗೀರದಾರ್, ಶ್ರೀಕರಭಟ್ಟ ಜೋಶಿ, ಕೃಷ್ಣ ಬಳಗನೂರ, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-30-1335543543

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.