ಸುರಪುರ: ‘ಜಗತ್ತಿನಲ್ಲಿ ತಾಯಿ ಪ್ರೀತಿಗೆ ಸಮಾನವಾದ ಪ್ರೀತಿ ಇನ್ನೊಂದಿಲ್ಲ. ಆಕೆ ಕೊಡುವ ನಿಸ್ವಾರ್ಥ ಪ್ರೀತಿ, ಮಮತೆ, ಮಕ್ಕಳಿಗಾಗಿ ಆಕೆ ಮಾಡುವ ತ್ಯಾಗಕ್ಕೆ ಬೆಲೆ ಕಟ್ಟಲಾಗದು’ ಎಂದು ಮೆಥೋಡಿಸ್ಟ್ ಚರ್ಚ್ನ ಜಿಲ್ಲಾ ಮೇಲ್ವಿಚಾರಕ ರೆವರೆಂಡ ದೇವಿದಾಸ್ ಹೇಳಿದರು.

ನಗರದ ಮೆಥೋಡಿಸ್ಟ್ ಚರ್ಚ್ನಲ್ಲಿ ಏರ್ಪಡಿಸಿದ್ದ ವಿಶ್ವ ತಾಯಂದಿರ ದಿನಾಚರಣೆಯಲ್ಲಿ ಮಾತನಾಡಿ, ‘ಕುಟುಂಬದಲ್ಲಿ ಶಾಂತಿ ಸಮೃದ್ಧವಾಗಿ ನೆಲೆಯೂರಬೇಕಾದರೆ ತಾಯಿ ಪಾತ್ರ ಪ್ರಮುಖವಾಗಿದೆ. ತಾನು ನೋವು ಉಂಡರು ನಮಗೆ ಒಳಿತನ್ನು ಬಯಸುವ ದೊಡ್ಡ ಗುಣ ತಾಯಿಯಲ್ಲಿ ಕಾಣಬಹುದಾಗಿದೆ. ಆಕೆಯ ಋಣ ತೀರಿಸಲು ಸಾಧ್ಯವಿಲ್ಲ’ ಎಂದರು.

ಸಭಾಪಾಲಕ ರೆವರೆಂತ ಸಂತೋಷಕುಮಾರ ಮಾತನಾಡಿ, ‘ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ ಎಂಬ ಮಾತಿನಂತೆ ತಾಯಿಗೆ ಸಮಾನವಾದ ವ್ಯಕ್ತಿ ಬೇರೆಲ್ಲೂ ಕಾಣಲು ಸಾಧ್ಯವೇ ಇಲ್ಲ. ನವ ಮಾಸ ಹೊತ್ತು, ಲಾಲನೆ, ಪಾಲನೆ ಮಾಡಿ ತುತ್ತಿಟ್ಟು ಉಣಿಸಿ ನಮ್ಮನ್ನು ಬೆಳೆಸುವ ತಾಯಿ ಶ್ರಮ ದೊಡ್ಡದು’ ಎಂದರು.

ಇದೇ ವೇಳೆ ಎಲ್ಲಾ ತಾಯಂದಿರಿಗೆ ಹೂ ಗುಚ್ಚ ನೀಡಿ ಸತ್ಕರಿಸಲಾಯಿತು. ತಾಯಿಗೆ ಒಳಿತನ್ನು ಬಯಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಪ್ರಮುಖರಾದ ಸ್ಯಾಮವೆಲ್ ಮ್ಯಾಥ್ಯೂ, ವಸಂತ ಕುಮಾರ ದೇವಪುತ್ರ, ಅಮಿತಪಾಲ, ಸಿಮಿಯೋನ್, ಥಾಮಸ್ಮ್ಯಾಥ್ಯೂ, ಜಸ್ಟೀಸ್ ಜಿಮ್ಮಿ, ರಮೇಶ, ರವಿಕುಮಾರ, ವಿಜಯಕುಮಾರ, ಹನೋಕ್, ನವೀನಕುಮಾರ, ಸಂದೀಪಕುಮಾರ, ವಿಕ್ಟೋರಿಯಾ ದೇವಿದಾಸ್, ಸುನೀಲಾ ಶಾಂತಕುಮಾರ, ಸೋನಾಸುಕುಮಾರಿ, ಲಲಿತಾ, ಸಾಗರಿಕಾ, ಸರಿತಾ, ಸಂಗೀತಾ, ರೆಬೆಕ್ಕಾ, ಅನಿತಾ, ಶಾಲಿನಿ, ಶೋಭಾ, ಸ್ಟೆಲ್ಲಾ, ಪವಿತ್ರ, ಸುನೀತಾ, ಎಸ್ತೇರಾ, ರೋಜ್ಬೆಲ್ ಇತರರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-30-1876826640

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.