ಸುರಪುರ: ‘ಸಮಾಜಕ್ಕೆ ದಾದಿಯರು (ನರ್ಸ್) ನೀಡುತ್ತಿರುವ ನಿಸ್ವಾರ್ಥ ಸೇವೆ ಅತ್ಯಂತ ಶ್ಲಾಘನೀಯ’ ಎಂದು ಮೆಥೊಡಿಸ್ಟ್ ಚರ್ಚ್ನ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ದೇವದಾಸ್ ಆನಂದಪ್ಪ ಹೇಳಿದರು.

ನಗರದ ಮೆಥೊಡಿಸ್ಟ್ ಸೆಂಟ್ರಲ್ ಚರ್ಚ್ನಲ್ಲಿ ಏರ್ಪಡಿಸಿದ್ದ ವಿಶ್ವ ದಾದಿಯಂದಿರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ರೋಗಿಗಳ ಆರೈಕೆಯಲ್ಲಿ ದಾದಿಯರು ನೀಡುತ್ತಿರುವ ಸಮರ್ಪಿತ ಸೇವೆಯನ್ನು ಗೌರವಿಸಿ ಅಭಿನಂದಿಸುವ ಉದ್ದೇಶದಿಂದ ಈ ದಿನಾಚರಣೆ ವಿಶ್ವದಾದ್ಯಂತ ಆಚರಿಸಲಾಗುತ್ತದೆ’ ಎಂದರು.

‘ಬಹುತೇಕ ದಾದಿಯರು ಕ್ರೈಸ್ತ ಧರ್ಮಕ್ಕೆ ಸೇರಿದವರು ಎಂಬುದು ಗಮನಾರ್ಹ. ಈಗ ಬೇರೆ ಧರ್ಮದವರು ಈ ಸೇವೆಗೆ ಸೇರುತ್ತಿದ್ದರೂ ಈ ಸೇವೆಯಲ್ಲಿ ಬಹುಪಾಲು ಕ್ರೈಸ್ತ ದಾದಿಯರದ್ದೇ ಆಗಿದೆ’ ಎಂದರು.

ರೋಷಿನಿ ಮಾತನಾಡಿ, ‘ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮ ದಿನವನ್ನು ದಾದಿಯರ ದಿನವೆಂದು ಆಚರಿಸಲಾಗುತ್ತದೆ. ದಾದಿಯರ ಸೇವೆ ಎಲ್ಲರಿಗೂ ಮಾದರಿ’ ಎಂದರು.

ಸುಕುಮಾರಿ ಇಮಾನುವೆಲ್ ನಿರೂಪಿಸಿದರು. ಸೋನಾ ಸುಕುಮಾರಿ ವಂದಿಸಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಹೂಗುಚ್ಛ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಸಭಾಪಾಲಕ ರೆವರೆಂಡ್ ಸಂತೋಷಕುಮಾರ, ಸಾಮುವೆಲ್ ಮ್ಯಾಥ್ಯೂ, ವಸಂತಕುಮಾರ ಡೇವಿಡ್, ದೇವಪುತ್ರ, ಪಾಲನಾಯ್ಕ, ಥಾಮಸ್ ಮ್ಯಾಥ್ಯೂ, ಜಸ್ಟಿನ್ ಜೆಮ್ಮಿ, ರಮೇಶ, ಹನೋಕ, ನವೀನಕುಮಾರ, ಸಂದೀಪಕುಮಾರ, ವಿಕ್ಟೋರಿಯಾ, ಪ್ರಭುಕುಮಾರಿ, ಸುನೀಲಾ, ಸುಮತಿ, ಲಲಿತಾ, ಸಾಗರಿಕಾ, ಸರಿತಾ, ರತ್ನಮ್ಮ, ಅನಿತಾ, ಶೋಭಾ, ಸ್ಟೆಲ್ಲಾ, ರೂಬಿ, ಮಾಲಾ, ರೋಜಬೆಲ್ ಇತರರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-30-1799260754

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.