ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ 21-02-2021ರಿಂದ 27-02-2021

Last Updated 20 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)
ಕಾರ್ಯಕ್ಷೇತ್ರದ ಸನ್ನಿವೇಶಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವಿರಿ. ಮನೆಯ ನವೀಕರಣ ಕಾರ್ಯವನ್ನು ಆದ್ಯತೆಯ ಮೇರೆಗೆ ಕೈಗೆತ್ತಿಗೊಳ್ಳುವಿರಿ. ವ್ಯಾಪಾರ ಮತ್ತು ವ್ಯವಹಾರಗಳಿಂದ ಬಂದ ಹಣವನ್ನು ಭೂಮಿಯ ಮೇಲೆ ನೋಡಲು ಹೂಡಲು ತೀರ್ಮಾನಿಸುವಿರಿ. ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಕಾಣುವಿರಿ. ರಾಜಕಾರಣಿಗಳು ಜನರನ್ನು ನಂಬಿಸುವಲ್ಲಿ ಯಶಸ್ವಿಯಾಗುವರು. ವೃತ್ತಿಯಲ್ಲಿ ದೂರ ಪ್ರಯಾಣಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾದಬಹುದು. ನಿಮ್ಮ ಮಕ್ಕಳಿಂದ ನಿಮಗೆ ಧನಸಹಾಯ ಒದಗಿಬರುವುದು. ಸಿದ್ಧಪಡಿಸಿದ ಸ್ತ್ರೀಯರ ಬಟ್ಟೆಗಳನ್ನು ಮಾರುವವರಿಗೆ ವ್ಯಾಪಾರದಲ್ಲಿ ಅಭಿವೃದ್ಧಿ ಇದೆ.

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಕನ್ನಡಕಗಳನ್ನು ಮಸೂರಗಳನ್ನು ಮಾರುವವರಿಗೆ ವ್ಯಾಪಾರದಲ್ಲಿ ವಿಸ್ತರಣೆ ಇದೆ. ಅವರ ಮಾಡುವ ಕಲಾತ್ಮಕ ಮಸೂರಗಳಿಗೆ ಬೇಡಿಕೆ ಹೆಚ್ಚುತ್ತದೆ. ನಿರುದ್ಯೋಗಿಗಳು ಸಿಕ್ಕ ಉದ್ಯೋಗದ ಅವಕಾಶವನ್ನು ಬಳಸಿಕೊಳ್ಳುವುದು ಒಳ್ಳೆಯದು. ಬಹಳ ದಿನದಿಂದ ಕಾಯುತ್ತಿದ್ದ ನ್ಯಾಯಾಲಯದ ಕಟ್ಟಲೆಗಳಿಗೆ ಚಾಲನೆ ದೊರೆಯುತ್ತದೆ. ವೃತ್ತಿಯಲ್ಲಿ ಒತ್ತಡಗಳು ಹೆಚ್ಚಾಗಬಹುದು ತಾಳ್ಮೆಯಿಂದ ವ್ಯವಹರಿಸುವುದು ಉತ್ತಮ. ವ್ಯವಹಾರಗಳಲ್ಲಿ ನಿರೀಕ್ಷಿತ ಮಟ್ಟದ ಆದಾಯಗಳನ್ನು ಕಾಣಬಹುದು. ಕಣ್ಣಿನತೊಂದರೆಗಳನ್ನು ನಿರ್ಲಕ್ಷಿಸಬೇಡಿರಿ. ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ಸಮಾಚಾರಗಳು ದೊರೆಯುತ್ತವೆ.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಉನ್ನತ ಅಧ್ಯಯನಕ್ಕಾಗಿ ಬಂಧುಗಳಿಂದ ಸಹಕಾರ ಮತ್ತು ಸಲಹೆಗಳು ದೊರೆಯುತ್ತವೆ. ಉದ್ಯೋಗದಲ್ಲಿನ ಸಮಸ್ಯೆಗಳಿಗೆ ಮೇಲಧಿಕಾರಿಯ ಬಳಿ ವೈಯಕ್ತಿಕವಾಗಿ ಮಾತನಾಡಿದಲ್ಲಿ ಪರಿಹಾರ ದೊರೆಯುವುದು. ಹಿರಿಯರೊಂದಿಗೆ ಚರ್ಚಿಸುವುದರಿಂದ ವ್ಯಾಪಾರದಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಶುಭ ಕಾರ್ಯಕ್ಕಾಗಿ ಅನಿರೀಕ್ಷಿತ ಪ್ರಯಾಣವನ್ನು ಕೈಗೊಳ್ಳಬಹುದು. ಸರ್ಕಾರಿ ಮಟ್ಟದಲ್ಲಿ ಕೃಷಿಕರ ಕೆಲವು ಬೇಡಿಕೆಗಳು ಈಡೇರಬಹುದು. ನೀರಿನ ವ್ಯಾಪಾರವನ್ನು ಮಾಡುವವರಿಗೆ ವ್ಯವಹಾರದಲ್ಲಿ ವಿಸ್ತರಣೆ ಇದೆ. ಸರ್ಕಾರಿ ದಾಖಲಾತಿಗಳನ್ನು ನಿರ್ವಹಣೆ ಮಾಡುವವರು ಎಚ್ಚರವಾಗಿರಿ, ದಾಖಲಾತಿಗಳು ಕಳವು ಆಗುವ ಸಾಧ್ಯತೆ ಇದೆ.

ಕಟಕ ರಾಶಿ( ಪುರ‍್ವಸು 4 ಪುಷ್ಯ ಆಶ್ಲೇಷ)
ಮಂಗಳ ಕಾರ್ಯಗಳ ಬಗ್ಗೆ ಸರಿಯಾದ ನಿರ್ಧಾರವನ್ನು ಕೈಗೊಳ್ಳುವಿರಿ. ಸಹೋದ್ಯೋಗಿಗಳ ನಡುವೆ ಇದ್ದ ಮನಸ್ತಾಪಗಳು ದೂರವಾಗುವವು. ಕಚೇರಿ ಕಾರ್ಯನಿಮಿತ್ತ ಕೈಗೊಂಡಿದ್ದ ದೂರ ಪ್ರದೇಶದ ಪ್ರಯಾಣಗಳು ನಿಮಗೆ ಲಾಭವನ್ನು ಕೊಡುತ್ತವೆ. ಆರ್ಥಿಕ ಸ್ಥಿತಿಯು ಪುನಶ್ಚೇತನಗೊಳ್ಳುತ್ತದೆ. ಆತ್ಮವಿಶ್ವಾಸ ಮತ್ತು ಸ್ವಪ್ರಯತ್ನದಿಂದ ಕಾರ್ಯಸಿದ್ಧಿಗೆ ಅನುಕೂಲವಾಗುತ್ತದೆ. ಮಕ್ಕಳಿಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾದ ಅನಿವಾರ್ಯತೆ ಇದೆ. ಸರಕಾರಿ ಕೆಲಸದ ಕೆಲವು ಅಧಿಕಾರಿಗಳಿಗೆ ಆದಾಯ ವೃದ್ಧಿಸುತ್ತದೆ. ದಿನಸಿ ವ್ಯಾಪಾರಿಗಳ ವ್ಯಾಪಾರ ಭರದಿಂದ ಸಾಗುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಗಮನವಿರಲಿ.

ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ವಿದೇಶಿ ವ್ಯವಹಾರದ ಸಂಪರ್ಕದಿಂದಾಗಿ ನಿಮ್ಮ ವ್ಯವಹಾರಕ್ಕೆ ಹೊಸತಿರುವು ಬರುತ್ತದೆ. ಹಿರಿಯ ವೈದ್ಯಾಧಿಕಾರಿಗಳಿಗೆ ಪದೋನ್ನತಿಯ ಸಂದರ್ಭವಿದೆ. ಹಣಕಾಸಿನ ವಿಚಾರದಲ್ಲಿ ಯಥಾಸ್ಥಿತಿ ಇರುತ್ತದೆ. ಕೆಲವು ಖಾಸಗಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಹಂಗಾಮಿ ನೌಕರರಿಗೆ ಖಾಯಂ ನೌಕರಿ ದೊರೆಯುವ ಲಕ್ಷಣಗಳಿವೆ. ಸ್ಥಿರಾಸ್ತಿ ಕೊಳ್ಳುವ ಬಗ್ಗೆ ಯಾವುದೇ ನಿರ್ಧಾರಗಳನ್ನು ಈಗ ತೆಗೆದುಕೊಳ್ಳಬೇಡಿರಿ. ನಿಮ್ಮ ನೆರೆಹೊರೆಯವರೊಂದಿಗೆ ಸಂಬಂಧಗಳು ಸಾಕಷ್ಟು ವೃದ್ಧಿಯಾಗುತ್ತವೆ. ಸ್ವಂತ ಆರೋಗ್ಯದ ಬಗ್ಗೆ ಗಮನ ಹರಿಸಿರಿ. ಹಿರಿಯರಿಂದ ಭೂಮಿಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಯುವಿರಿ. ಕಚೇರಿ ಕೆಲಸದ ಮೇಲೆ ದೂರದ ಊರಿಗೆ ಅಥವಾ ವಿದೇಶಕ್ಕೆ ಹೋಗಿ ಬರಬಹುದು.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಉದ್ಯೋಗಿಗಳಿಗೆ ಕೆಲಸದ ಒತ್ತಡ ಸ್ವಲ್ಪ ಕಡಿಮೆಯಾಗುತ್ತದೆ. ಪ್ರಯಾಣ ಕಾಲದಲ್ಲಿ ಆಭರಣಗಳ ಬಗ್ಗೆಮಹಿಳೆಯರು ಎಚ್ಚರಿಕೆ ವಹಿಸುವುದು ಅಗತ್ಯ. ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವವರಿಗೆ ಅನುದಾನದ ಕೊರತೆ ಎದುರಾಗಬಹುದು. ಹೊಸ ಕೈಗಾರಿಕೆಯನ್ನು ಆರಂಭಿಸುವ ಬಗ್ಗೆ ಸೂಕ್ತ ವಿಚಾರಗಳನ್ನು ಕಲೆಹಾಕುವಿರಿ. ವಾಹನ ಮಾರಾಟಗಾರರಿಗೆ ಪ್ರಗತಿ ಇರುತ್ತದೆ. ಸಂಗಾತಿಯ ಆಸೆ ತೀರಿಸಲು ಸೂಕ್ತ ಹಣದ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ. ಮನೆಪಾಠ ಮಾಡುವವರಿಗೆ ನಿಂತಿದ್ದ ಆದಾಯಗಳು ಪುನಹ ಆರಂಭವಾಗುತ್ತವೆ. ನಿಮ್ಮದೇ ಆಸ್ತಿಯನ್ನು ಖರೀದಿ ಮಾಡುವ ಬಗ್ಗೆ ಹೊಸ ಆಶಾಭಾವನೆ ಮೂಡುತ್ತದೆ.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಆರ್ಥಿಕ ಅಡಚಣೆಗಳು ಹಂತಹಂತವಾಗಿ ನಿವಾರಣೆಯಾಗುತ್ತವೆ. ಗಹನವಾದ ವಿಚಾರವೊಂದನ್ನು ನಿಮ್ಮ ಸ್ನೇಹಿತರ ಸಲಹೆಪಡೆದು ಪರಿಹಾರ ಕಂಡುಕೊಳ್ಳುವಿರಿ. ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಸರುಗಳಿಸಲು ಯತ್ನಿಸುವಿರಿ. ಕ್ರೀಡಾ ಪಟುಗಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಬೇಕಾದ ಅವಕಾಶ ದೊರೆಯುವುದು. ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವವರಿಗೆ ಉತ್ತಮ ಅವಕಾಶ ದೊರೆಯುತ್ತದೆ. ವಿದೇಶಿ ವ್ಯಾಪಾರಗಳಲ್ಲಿ ಬಂಡವಾಳ ಹೂಡುವುದಕ್ಕೆ ಮುನ್ನ ಸರಿಯಾಗಿ ಅದರ ಬಗ್ಗೆ ತಿಳಿಯಿರಿ.ಉದ್ಯೋಗದಲ್ಲಿ ಮೇಲಧಿಕಾರಿಗಳ ಕೃಪೆ ಒದಗಿ ಸೂಕ್ತ ಸ್ಥಾನ ದೊರೆಯುತ್ತದೆ.

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)
ಕಾರ್ಮಿಕ ವರ್ಗದವರಿಗೆ ಬಿಡುವಿಲ್ಲದ ಕೆಲಸವಿರುತ್ತದೆ, ಕೆಲಸಕ್ಕೆ ತಕ್ಕ ಸಂಭಾವನೆಯೂ ಸಹ ದೊರೆಯುತ್ತದೆ. ಕಟ್ಟಡ ನಿರ್ಮಾಣ ಕೆಲಸಗಾರರು ಅವರ ಕೆಲಸದಲ್ಲಿ ಎಚ್ಚರಿಕೆಯನ್ನು ವಹಿಸಬೇಕು. ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಕೆಲವರಿಗೆ ಅಪೇಕ್ಷಿತ ಸ್ಥಳಕ್ಕೆ ವರ್ಗಾವಣೆಯಾಗುವ ಅವಕಾಶಗಳಿವೆ. ವಾಹನ ರಿಪೇರಿಗಾಗಿ ಸ್ವಲ್ಪ ಹಣ ಖರ್ಚಾಗಬಹುದು. ಧನ ಆದಾಯದಲ್ಲಿ ಅಷ್ಟೇನೂ ವ್ಯತ್ಯಾಸವಿರುವುದಿಲ್ಲ. ಬರಹಗಾರರಿಗೆ ಹೆಚ್ಚಿನ ಸೌಲಭ್ಯ ದೊರೆತು ಹೊಸ ಕೃತಿಗಳನ್ನು ರಚಿಸಬಹುದು. ರೇಷ್ಮೆ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ವಾರಾಂತ್ಯಕ್ಕೆ ದೇವತಾ ದರ್ಶನದ ಯೋಗವಿದೆ.

ಧನಸ್ಸು ರಾಶಿ( ಮೂಲ ಪೂರ್ವಷಾಢ ಉತ್ತರಾಷಾಢ 1 )
ಹಮ್ಮಿಕೊಂಡ ಕೆಲಸಗಳನ್ನು ಪೂರೈಸಲು ಇದ್ದ ಅಡ್ಡಿ ಆತಂಕಗಳು ನಿವಾರಣೆಯಾಗುತ್ತದೆ. ಆತ್ಮ ವಿಶ್ವಾಸದಿಂದ ಮತ್ತು ಧೃಡ ಸಂಕಲ್ಪದಿಂದ ಮಾಡಿದ ಕೆಲಸಗಳಿಗೆ ಉತ್ತಮ ಫಲಿತಾಂಶ ಬರುತ್ತದೆ. ಆಸ್ತಿ ಲಾಭದ ಲಕ್ಷಣಗಳಿವೆ. ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಮೂಡಿಸಲು ಸಾಕಷ್ಟು ಶ್ರಮ ವಹಿಸುವಿರಿ. ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ಸ್ಥಿರಾಸ್ತಿಯನ್ನು ಮಾಡಲು ಎಲ್ಲ ಕ್ರಮಗಳನ್ನು ಅನುಸರಿಸಬಹುದು. ಮನೆಯಲ್ಲಿ ದೇವತಾರಾಧನಾ ಕಾರ್ಯಕ್ರಮವನ್ನು ಆಯೋಜಿಸುವಿರಿ. ಲೇವಾದೇವಿ ವ್ಯವಹಾರದಲ್ಲಿ ಸ್ವಲ್ಪ ಅಭಿವೃದ್ಧಿ ಇರುತ್ತದೆ. ತಂದೆಯಿಂದ ವ್ಯವಹಾರದ ಸೂಕ್ಷ್ಮಗಳು ಅರ್ಥವಾಗ ತೊಡಗುತ್ತದೆ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಹಣ್ಣು ತರಕಾರಿ ಹಣ್ಣು ವ್ಯಾಪಾರಿಗಳಿಗೆ ವ್ಯವಹಾರವನ್ನು ವ್ಯವಹಾರ ವೃದ್ಧಿಸಿ ಲಾಭವಿರುತ್ತದೆ. ಕೃಷಿ ಚಟುವಟಿಕೆಗಳು ಭರದಿಂದ ಸಾಗುತ್ತವೆ. ಹಣದ ಒಳ ಹರಿವಿನಲ್ಲಿ ಏರಿಕೆ ಇರುತ್ತದೆ. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಕಚೇರಿ ಒತ್ತಡದಿಂದ ವೈಯಕ್ತಿಕ ಕೆಲಸಗಳು ನಿಧಾನವಾಗುತ್ತವೆ. ಕರಕುಶಲ ವಸ್ತುಗಳು ಮತ್ತು ಬೊಂಬೆಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಸಾಕಷ್ಟು ಎಚ್ಚರಿಕೆಯನ್ನು ವಹಿಸಬೇಕಾದ ಅನಿವಾರ್ಯತೆ ಇರುತ್ತದೆ. ಗೃಹ ನಿರ್ಮಾಣ ಕಾರ್ಯದಲ್ಲಿ ತೊಡಗಿ ಕೊಂಡಿರುವವರಿಗೆ ಕಾರ್ಯಸಿದ್ದಿ ಇರುತ್ತದೆ. ಮಕ್ಕಳ ಹಟಮಾರಿತನ ನಿಮಗೆ ಬೇಸರ ತರುತ್ತದೆ.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಹಿರಿಯರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ಸಂತೋಷಪಡುವರು. ವ್ಯವಹಾರದಲ್ಲಿ ಪ್ರಗತಿ ಕುಂಠಿತವಾಗಿ ಆದಾಯದಲ್ಲಿ ಹಿನ್ನಡೆಯನ್ನು ಕಾಣಬಹುದು. ಹೊಸ ವಾಹನವನ್ನು ಖರೀದಿ ಮಾಡುವ ಯೋಗವಿದೆ.ಗಣ್ಯ ವ್ಯಕ್ತಿಗಳೊಡನೆ ಪರಿಚಯ ಬೆಳೆಯುವ ಸಾಧ್ಯತೆಯಿದೆ. ವ್ಯಕ್ತಿಗೌರವ ಹೆಚ್ಚಾಗುವ ಸಾಧ್ಯತೆಯಿದೆ.ಲೇವಾದೇವಿ ವ್ಯವಹಾರಗಳು ಸದ್ಯದಲ್ಲಿ ಬೇಡವೇ ಬೇಡ. ಸರ್ಕಾರಿ ಸಾಲಗಳು ಸರಾಗವಾಗಿ ದೊರೆಯುತ್ತವೆ. ಚಿನ್ನಾಭರಣಗಳ ಮಾರಾಟ ಮಳಿಗೆಗಳನ್ನು ತೆರೆಯಬೇಕೆಂದು ಆಶಿಸುವವರು ಈಗ ತೆರೆಯಬಹುದು. ವೃತ್ತಿಯಲ್ಲಿ ನೀವು ಗೈದ ನಿಸ್ವಾರ್ಥ ಸೇವೆಗೆ ಬೆಲೆ ಬರುತ್ತದೆ.

ಮೀನ ರಾಶಿ( ಪರ‍್ವಭಾದ್ರ 4 ಉತ್ತರಾಭಾದ್ರ ರೇವತಿ)
ವ್ಯವಹಾರದಲ್ಲಿ ನಿಮ್ಮ ವಿರೋಧಿಗಳು ನಿಮ್ಮನ್ನು ಹೊಗಳಿದಲ್ಲಿ ಅದು ನಿಮ್ಮ ಹಿನ್ನಡೆಗೆ ಕಾರಣವಾಗಬಹುದು. ನಿಮ್ಮ ಒಳ್ಳೆಯತನ ದುರುಪಯೋಗವಾಗದಂತೆ ನೋಡಿಕೊಳ್ಳುವುದು ಬಹುಮುಖ್ಯ. ಹಿರಿಯರ ಮಾತಿನಂತೆ ವ್ಯವಹಾರದಲ್ಲಿ ಬದಲಾವಣೆ ತಂದುಕೊಂಡಲ್ಲಿ ಆದಾಯಸ್ಥಿರತೆಯನ್ನು ಕಾಣಬಹುದು. ಅವಶ್ಯಕತೆಗಿಂತ ಹೆಚ್ಚಿನ ಸಾಲಸೋಲಗಳನ್ನು ಮಾಡದಿರುವುದು ಒಳ್ಳೆಯದು. ಹಣಕಾಸಿನ ಸಂಸ್ಥೆಗಳನ್ನು ನಡೆಸುವವರ ಆದಾಯದಲ್ಲಿ ಏರಿಕೆ ಇರುತ್ತದೆ. ವೃತ್ತಿಯಲ್ಲಿ ವೇತನ ಹೆಚ್ಚಳದ ಬಗ್ಗೆ ಚರ್ಚೆಯಾಗಬಹುದು. ತಾಯಿಯ ಆರೋಗ್ಯದ ಬಗ್ಗೆ ಗಮನಹರಿಸಬೇಕಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT