ತಿಪಟೂರು: ‘ಪೌರಾಣಿಕ ನಾಟಕ ಮತ್ತು ಯಕ್ಷಗಾನಗಳು ನಮ್ಮ ಹಿರಿಯರು ಬಿಟ್ಟುಕೊಟ್ಟ ಅಮೂಲ್ಯ ಜ್ಞಾನ ಸಂಪತ್ತಾಗಿದ್ದು, ಈ ಕಲೆಗಳ ಮೂಲಕ ಗ್ರಾಮೀಣ ಭಾಗದಲ್ಲಿ ಒಗ್ಗಟ್ಟು ಸಂಘಟನೆ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಉತ್ತೇಜನ ಸಿಗುತ್ತದೆ’ ಎಂದು ಭಾಗವತ ಮಂಜುನಾಥ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮತ್ತಿಹಳ್ಳಿಯಲ್ಲಿ ಬಿದರೆಗುಡಿಯ ಬಿದರಾಂಬಿಕ ದೇವಿ ಜಾತ್ರೆ ಅಂಗವಾಗಿ, ಬಿದರಾಂಬಿಕ ಮೂಡಲಪಾಯ ಯಕ್ಷಗಾನ ಮಂಡಳಿಯಿಂದ ನಡೆದ ‘ರಕ್ತ ಬೀಜಾಸುರ’ ಅಥವಾ ‘ಅಂಬಿಕಾ ವಿಜಯ’ ನಾಟಕ ಪ್ರದರ್ಶಿಸಲಾಯಿತು.

ಭಾಗವತಿಕೆ ನಡೆಸಿದ ಮಂಜುನಾಥ್ ಮಾತನಾಡಿ, ಸಾಮಾಜಿಕ ಜಾಲತಾಣಗಳ ಆಕರ್ಷಣೆಯಿಂದ ಪೌರಾಣಿಕ ಕಲೆಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಮೃದಂಗ, ತಾಳ, ಮುಖವೇಣಿ, ಹಾರ್ಮೋನಿಯಂ ಮೊದಲಾದ ವಾದ್ಯಗಳ ನೈಜ ಶ್ರವ್ಯಾನುಭವ ಕಡಿಮೆಯಾಗುತ್ತಿರುವುದು ದುಃಖಕರ ಸಂಗತಿ. ಇಂತಹ ಪಾರಂಪರಿಕ ಕಲೆಗಳನ್ನು ಉಳಿಸಲು ಸಾರ್ವಜನಿಕರು ಹಾಗೂ ಯುವಜನರು ಮುಂದಾಗಬೇಕು ಎಂದರು.

ಮೃದಂಗದಲ್ಲಿ ನಾಗರಾಜು, ಮುಖವೀಣೆ ಬಸವರಾಜು ಮತ್ತು ರಂಗನಾಥ್, ಹಿನ್ನೆಲೆ ಗಾಯನ ಲೋಕೇಶ್, ಎಚ್.ಎಸ್ ಸುದ್ದೇಗೌಡ, ರಾಮಕೃಷ್ಣಪ್ಪ, ಪಾತ್ರದಲ್ಲಿ ಎಂ.ಡಿ ಪುಟ್ಟರಾಜು, ಉದಯ್ಕುಮಾರ್, ಎಂ.ಎ.ಲೋಕೇಶ್, ಎಂ.ಎ. ಪರಮೇಶ್, ಸಿದ್ದಲಿಂಗಸ್ವಾಮಿ, ಶಂಕರಲಿಂಗಯ್ಯ, ವಜ್ರಮುನಿ, ಉಮೇಶ್, ಚಿದಾನಂದ್, ರಘು ಎಸ್.ಆರ್., ಉಮೇಶ್, ಸಮರ್ಥ್, ರಘು, ವೇಣು, ಮದನ್, ಗಾನವಿ, ಪರಮೇಶ, ಕುಮಾರ್, ಪುನೀತ್, ಆಶೋಕ್ ಕುಮಾರ್, ಎಂ.ಎನ್ ಮಂಜುನಾಥ್ ಅಭಿನಯಿಸಿದ್ದರು.

ಗ್ರಾಮದ ಪಟೇಲ್ ಜಯಣ್ಣ, ಹಿರಿಯ ಕಲಾವಿದ ಅಂಚೆಕೊಪ್ಪಲು ಶಂಕರಪ್ಪ, ಗ್ರಾಮಸ್ಥರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-17-1402348307

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.