ಶಿರ್ವ: ‘ನಮ್ಮ ತುಳುನಾಡು ಸಾಮರಸ್ಯದ ತವರೂರು. ದೈವ ದೇವರ ಗರ್ಭಗುಡಿ. ಈ ಮಣ್ಣಿನಲ್ಲಿ ಹುಟ್ಟಿದ ನಾವು ಧನ್ಯರು. ನಮ್ಮ ಹಿರಿಯರು ಉನ್ನತ ನೈತಿಕ ಮೌಲ್ಯ, ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ನಾಗ, ದೈವ, ದೇವರಲ್ಲಿ ಭಯ ಭಕ್ತಿ, ನಂಬಿಕೆ, ಕುಟುಂಬದಲ್ಲಿ ಸಾಮರಸ್ಯ, ಸಹಬಾಳ್ವೆಯ ಪಾಠ ಕಲಿಸಿದ್ದಾರೆ’ ಎಂದು ಮುಂಬೈ ಉದ್ಯಮಿ ವಳದೂರು ಪಡುಮನೆ ಗಣೇಶ್ ಪೂಜಾರಿ ಬಣ್ಣಿಸಿದರು.

ಶಿರ್ವ ಸಮೀಪದ ವಲದೂರು ವೆಲ್ಫೇರ್ ಎಸೋಸಿಯೇಶನ್ನ 14ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿ, ಮಕ್ಕಳ ಕೈಗೆ ಮೊಬೈಲ್ ಕೊಡದೆ ಭಜನೆ, ನೃತ್ಯ, ತುಳುನಾಡು ಮಣ್ಣಿನ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಕಲಿಸಿ ಕೊಡಬೇಕು’ ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಕಾಪು ತಾಲ್ಲೂಕು ಘಟಕದ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಮಾತನಾಡಿ, ಹಿರಿಯರಲ್ಲಿರುವ ಒಳ್ಳೆಯ ಸಂಸ್ಕಾರಗಳನ್ನು ನೋಡಿ ಮಕ್ಕಳು ಕಲಿಯುತ್ತಾರೆ. ತಂದೆ ತಾಯಿ, ಗುರುಗಳನ್ನು ಎಂದೂ ಮರೆಯಬಾರದು ಎಂದರು.

ಆಶಾ ಕಾರ್ಯಕರ್ತೆ ಸರಸ್ವತಿ ಭಂಡಾರಿ, ಪಂಜಿಮಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷೆ, ಹೈನುಗಾರಿಕೆ ಸಾಧಕಿ ಹರೀಣಾಕ್ಷಿ ಎಂ. ಶೆಟ್ಟಿ, ಮಲ್ಲಿಗೆ ಕೃಷಿಕೆ ವಿಶಾಲಾಕ್ಷಿ ಶೆಟ್ಟಿ, ದಾನಿಗಳಾದ ಶಾಂತರಾಜ್ ವೈ. ಶೆಟ್ಟಿ, ಗಣೇಶ್ ಪೂಜಾರಿ ವಳದೂರು ಪಡುಮನೆ, ದಿನೇಶ್ ವಿಠಲ್ ಶೆಟ್ಟಿ ಕಲ್ಲೊಟ್ಟೆ ಮನೆ ಅವರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್ಸಿ, ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಸಮಾಜಸೇವಕ ಮಧುಸೂದನ ಸಾಲಿಯಾನ್, ಪ್ರತಿಭಾವಂತ ವಿದ್ಯಾರ್ಥಿ ನಿತಿನ್ ನಾಯಕ್ ಆಸ್ಟ್ರೇಲಿಯಾ ಅವರ ಪರವಾಗಿ ತಂದೆ ನಿತ್ಯಾನಂದ ನಾಯಕ್ ಪಾಲಮೆ ಅವರನ್ನು ಅಭಿನಂದಿಸಲಾಯಿತು.

13 ವರ್ಷ ಸಂಸ್ಥೆಯನ್ನು ಮುನ್ನಡೆಸಿದ ಅಧ್ಯಕ್ಷ ಲೀಲಾಧರ ಶೆಟ್ಟಿ ವಲದೂರು, ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ವಲದೂರು, ಖಜಾಂಚಿ ಸುಕೇಶ್ ಪೂಜಾರಿ ವಲದೂರು ಅವರನ್ನು ನೂತನ ಅಧ್ಯಕ್ಷ ಅಶೋಕ್ ಕುಮಾರ್ ವಲದೂರು ಸನ್ಮಾನಿಸಿದರು.

ಸಂಸ್ಥೆಯ ಗೌರವಾಧ್ಯಕ್ಷ ಶಾಂತರಾಜ ವೈ. ಶೆಟ್ಟಿ ಸಮಾರಂಭ ಉದ್ಘಾಟಿಸಿದರು. ಉಡುಪಿ ತುಳು ಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೆಮ್ತೂರು ದೊಡ್ಡಣ್ಣ ಶೆಟ್ಟಿ ನಾಟಕ ಪಂಥದ ಸಂಚಾಲಕ ಬಿ. ಪ್ರಭಾಕರ ಭಂಡಾರಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಅಶೋಕ್ ಕುಮಾರ್ ವಲದೂರು ಅಧ್ಯಕ್ಷತೆ ವಹಿಸಿದ್ದರು. ಗರಡಿಮನೆ ವಿಶ್ವನಾಥ್ ಪೂಜಾರಿ, ಗೋಪಾಲ ಪೂಜಾರಿ ಭಾಗವಹಿಸಿದ್ದರು. ಉಪನ್ಯಾಸಕಿ ಸುನೀತಾ ನಿರೂಪಿಸಿದರು. ಸುಕೇಶ್ ಪೂಜಾರಿ ವಲದೂರು ವಂದಿಸಿದರು.

ಹರಿಕೃಷ್ಣ ತಂತ್ರಿ ಕುತ್ಯಾರು ನೇತೃತ್ವದಲ್ಲಿ ವಲದೂರು ಬ್ರಹ್ಮಸ್ಥಾನದಲ್ಲಿ ನಾಗಬ್ರಹ್ಮ ತಂಬಿಲ, ಸಾಮೂಹಿಕ ಸತ್ಯನಾರಾಯಣ ಪೂಜೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನ ಸಂತರ್ಪಣೆ, ಬೊಳ್ಜೆ ಉದ್ಯಾವರ ಬ್ರಹ್ಮಬೈದರ್ಕಳ ಯಕ್ಷಗಾನ ಕಲಾ ಮಂಡಳಿ ಅವರಿಂದ ‘ಚಕ್ರವ್ಯೂಹ’ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-28-718046217

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.