ತುಮಕೂರು: ಮಠಗಳು ನೈತಿಕ ಶಿಕ್ಷಣ, ಸಂಸ್ಕಾರ, ಧಾರ್ಮಿಕ ಚಿಂತನೆ ಬೋಧಿಸುತ್ತಿದ್ದವು. ಈಗ ಶಿಕ್ಷಣ ಸಂಸ್ಥೆಗಳನ್ನು ಹೊಂದಿ ಸರ್ಕಾರ ನಿಗದಿ ಪಡಿಸಿರುವ ನೈತಿಕ ಶಿಕ್ಷಣವಿಲ್ಲದ ಪಠ್ಯಕ್ರಮ ಬೋಧಿಸುತ್ತಿರುವುದು ದುರಾದೃಷ್ಟಕರ ಎಂದು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದರು.

ನಗರದ ಹಿರೇಮಠದಲ್ಲಿ ಭಾನುವಾರ ಮಲ್ಲಿಕಾರ್ಜುನ ಸ್ವಾಮಿ ಪುನರ್ ಪ್ರತಿಷ್ಠಾಪನಾ ಮಹೋತ್ಸವದ ವಾರ್ಷಿಕೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಪೂಜಾ, ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಾಠ ಶಾಲೆ ಆಗಬೇಕಾದ ಮಠಗಳು ಪಠ್ಯ ಶಾಲೆಗಳಾಗುತ್ತಿವೆ. ಹಿರೇಮಠ ಧಾರ್ಮಿಕತೆಗೆ ಹೆಚ್ಚು ಒತ್ತು ನೀಡುತ್ತದೆ. ನಿಜ ಅರ್ಥದ ಪಾಠ ಶಾಲೆಯಾಗಿ ಉಪನ್ಯಾಸ, ಭಜನೆ, ಸತ್ಸಂಗ, ಸಂಸ್ಕಾರ ಕಲಿಸುವ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಹಿರೇಮಠ ಹಾಳು ಮಂಟಪವಾಗಿ ಇತಿಹಾಸ ಸಮಾಧಿಯಾಗಿತ್ತು. ಪಟ್ಟಾಧಿಕಾರ ಸ್ವೀಕಾರ ಮಾಡಿದ ನಂತರ ಭಕ್ತರ ಸಹಕಾರದಿಂದ ಹೊಸ ಇತಿಹಾಸ ಸೃಷ್ಟಿಯಾಗಿದೆ. ಈ ಮಠಕ್ಕೆ ಕಟ್ಟಡ ಬಿಟ್ಟರೆ ಬೇರೆ ಆಸ್ತಿ ಇಲ್ಲ. ಇಲ್ಲೊಂದು ಶಕ್ತಿ ಇದೆ. ಆ ಶಕ್ತಿ ಎಲ್ಲವನ್ನೂ ನಡೆಸಿಕೊಂಡು ಹೋಗುತ್ತಿದೆ ಎಂದರು.

ಮಲ್ಲಿಕಾರ್ಜುನ ಸ್ವಾಮಿಗೆ ಕುಂಭಾಭಿಷೇಕ, ನವಗ್ರಹ ಪೂಜೆ, ವಿವಿಧ ಹೋಮ, ಹವನ, ಪೂರ್ಣಾಹುತಿ ನೆರವೇರಿತು. ತೋಟದ ಶನಿಮಹಾತ್ಮ ದೇವಸ್ಥಾನದ ಬಳಿ ಗಂಗಾಪೂಜೆ ನೆರವೇರಿಸಿ, ಹಿರೇಮಠದ ವರೆಗೆ ಪೂರ್ಣಕುಂಭ ಮೆರವಣಿಗೆ ನಡೆಯಿತು. 50 ವರ್ಷ ದಾಂಪತ್ಯ ಬದುಕು ಸಾಗಿಸಿದ ಮೂವರು ದಂಪತಿಗಳು, ಸೈನಿಕರು, ಕ್ರೀಡಾಪಟು, ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-17-750542910

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.