ತುಮಕೂರು: ವೀರಶೈವ– ಲಿಂಗಾಯತ ಧರ್ಮವು ಜೀವನ ನಿರ್ವಹಣೆಗೆ ಸರಿಯಾದ ಮಾರ್ಗದರ್ಶನ ನೀಡುತ್ತಿದೆ. ನಾವು ಅದನ್ನು ಅರ್ಥ ಮಾಡಿಕೊಳ್ಳದೆ ವಿಕೃತಿ ಬೆಳೆಸಿಕೊಳ್ಳುತಿದ್ದೇವೆ ಎಂದು ಸಿದ್ಧಗಂಗಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ವಿಷಾದಿಸಿದರು.

ತಾಲ್ಲೂಕಿನ ಹಿರೇಹಳ್ಳಿ ಸಮೀಪದ ಹಿರೇಮಠದ ತಪೋವನದಲ್ಲಿ ಈಚೆಗೆ ಅಖಿಲ ಭಾರತ ವೀರಶೈವ– ಲಿಂಗಾಯತ ಮಹಾಸಭಾದಿಂದ ಆಯೋಜಿಸಿದ್ದ ಧಾರ್ಮಿಕ ಶಿಬಿರ ಉದ್ಘಾಟಿಸಿ ಮಾತನಾಡಿದರು.

ವೀರಶೈವರೊ, ಲಿಂಗಾಯತರೊ ಎಂಬ ವಿವಾದದಲ್ಲೇ ನಮ್ಮ ಶಕ್ತಿ ವ್ಯಯ ಮಾಡದೆ, ಧರ್ಮದ ಮೂಲ ಆಚರಣೆ ಅನುಸರಿಸಬೇಕು. ಇಬ್ಬಂದಿತನ ಬಿಟ್ಟು ಶಿವನನ್ನು ಆರಾಧಿಸಬೇಕು. ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರದ ಪಾಠ ಕಲಿಸಬೇಕು ಎಂದು ಸಲಹೆ ಮಾಡಿದರು.

ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಸ್.ಪರಮೇಶ್, ‘ವೀರಶೈವ– ಲಿಂಗಾಯತ ಧರ್ಮದ ರೀತಿ ನೀತಿಗಳನ್ನು ಮಕ್ಕಳಿಗೆ, ಯುವ ಜನತೆಗೆ, ಮುಂದಿನ ಪೀಳಿಗೆಗೆ ವರ್ಗಾಯಿಸಲು ಶಿಬಿರ ಆಯೋಜಿಸಲಾಗಿದೆ. ಎಲ್ಲಾ ತಾಲ್ಲೂಕುಗಳಲ್ಲಿ ಶಿಬಿರ ನಡೆಸಲಾಗುವುದು’ ಎಂದು ತಿಳಿಸಿದರು.

ಹಿರೇಮಠ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ‘ಜಾತ್ಯತೀತತೆ ತತ್ವ ಈಗ ಅಪ್ರಸ್ತುತವಾಗಿದೆ. ಜಾತೀಯತೆ ಎಲ್ಲೆಲ್ಲೂ ವಿಜೃಂಭಿಸುತ್ತಿದೆ. ಶರಣರು ಪ್ರತಿಪಾದಿಸಿದ ‘ಇವ ನಮ್ಮವ ಇವ ನಮ್ಮವ’ ಎನ್ನುವ ತತ್ವ ಅಳವಡಿಸಿಕೊಂಡರೆ ಮಾತ್ರ ಪರಿಶುದ್ಧ ಸಮಾಜ ನಿರ್ಮಾಣ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಿ.ವಿ.ಪರಮಶಿವಮೂರ್ತಿ, ‘ವಚನಗಳು ಸಾರ್ವಕಾಲಿಕ ಸತ್ಯವಾಗಿದ್ದರೂ ಅವುಗಳನ್ನು ನಾವು ಮರೆಯುತ್ತಿದ್ದೇವೆ. ವಚನಕಾರರು ಪ್ರತಿಪಾದಿಸಿದ ಧರ್ಮ ಮಾರ್ಗದಿಂದ ವಿಮುಖರಾಗುತ್ತಿದ್ದೇವೆ’ ಎಂದರು.

ವೀರಶೈವ– ಲಿಂಗಾಯತ ಮಹಾಸಭಾ ಪದಾಧಿಕಾರಿಗಳಾದ ಸಾಗರನಹಳ್ಳಿ ನಟರಾಜ್, ಕೆ.ಎಸ್.ಉಮಾ ಮಹೇಶ್, ಕೆ.ಎಲ್.ದರ್ಶನ್, ಟಿ.ಎಂ.ವಿಜಯಕುಮಾರ್, ಆರ್.ಬಿ.ಜಯಣ್ಣ, ಪುಷ್ಪಾ ಉದಯ್, ಸುಮಾ ಪ್ರಸನ್ನ, ಗೀತಾ ರುದ್ರೇಶ್, ನಳಿನಿ ಶಿವಾನಂದ್, ಧರ್ಮಪಾಲ್, ಬಿ.ರಾಜಶೇಖರ್, ರೇಣುಕಾರಾಧ್ಯ, ಬಿ.ಎಸ್.ಮಂಜುನಾಥ್, ಷಡಕ್ಷರಿ, ಸಿ.ಕೆ.ಜಗದೀಶ್, ಡಿ.ಎನ್.ಯೋಗೀಶ್ವರಪ್ಪ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-17-1432715265

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.