ಚಿಂಚೋಳಿ: ‘ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರು ದಾಸೋಹದ ಚಕ್ರವರ್ತಿ ಎನಿಸಿದ ಪುಣ್ಯಪುರುಷರಾಗಿದ್ದಾರೆ. ಜನಿಸಿದ್ದಕ್ಕೆ ತಾಯಿ, ಹೊತ್ತಿದ್ದಕ್ಕೆ ಭೂಮಿತಾಯಿ ಹೆಮ್ಮೆ ಪಡುವಂತಹ ಮಾತೃತ್ವದ ಗುಣ ಹಾಗೂ ಸೇವಾ ಮನೋಭಾವ ಶ್ರೀಗಳನ್ನು ದಾಸೋಹ ಚಕ್ರವರ್ತಿಯಾಗಿಸಿದೆ’ ಎಂದು ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಶಿವಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ತಾಜಲಾಪುರ ಗ್ರಾಮದಲ್ಲಿ ಮಂಗಳವಾರ ಶಿವಕುಮಾರ ಸ್ವಾಮೀಜಿಗಳವರ 119ನೇ ಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸಿದ್ಧಗಂಗಾ ಸಂಪದ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಅನ್ನ, ಆಶ್ರಯ ಮತ್ತು ಶಿಕ್ಷಣದ ಮೂಲಕ ಸಮಾಜವನ್ನು ಬದಲಾಯಿಸಿದ ತೋರಿಸಿದ ಶಿವಕುಮಾರ ಸ್ವಾಮೀಜಿ ಅಭಿನವ ಬಸವಣ್ಣರಾಗಿ ತುಮಕೂರನ್ನು ಅಭಿನವ ಕಲ್ಯಾಣವಾಗಿಸಿದ್ದ ಶ್ರೇಯಸ್ಸು ಸಲ್ಲುತ್ತದೆ’ ಎಂದರು.

‘ಭಾರತವನ್ನು ಪರಕೀಯರು ಆಳ್ವಿಕೆ ಮಾಡಿದರೂ ಕೂಡ ಭಾರತ ಗಟ್ಟಿಯಾಗಿರಲು ಇಲ್ಲಿನ ಅಧ್ಯಾತ್ಮ ಶಕ್ತಿಯೇ ಕಾರಣವಾಗಿದೆ. ನೀವು ಪೂಜೆ ಮಾಡಿ ಧರ್ಮ ಕಾರ್ಯಗಳು ಮಾಡಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ನಿಮಗೆ ಮೂಲ ನಂಬಿಕೆಯಿರಲಿ ಆದರೆ ಮೂಢ ನಂಬಿಕೆ ಬೇಡ’ ಎಂದರು.

‘ಶಿಕ್ಷಣದ ಜತೆಗೆ ಸಂಸ್ಕಾರಕ್ಕೆ ಮಹತ್ವ ನೀಡಿ ಶ್ರೇಷ್ಠ ವಿದ್ಯೆ ಕಾಶಿಯಾಗಿ ರೂಪಿಸಿದ ಶ್ರೇಯಸ್ಸು ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳಿಗೆ ಸಲ್ಲುತ್ತದೆ. ಅವರ ಪ್ರೇರಣೆ ಮತ್ತು ಆಶೀರ್ವಾದಿಂದಲೇ ಭರತನೂರು ಮಠ ಸುಲೇಪೇಟ ಮತ್ತು ಭರತನೂರಿನಲ್ಲಿ ಶಿಕ್ಷಣ ಸಂಸ್ಥೆ ತೆರೆದು ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ’ ಎಂದು ಭರತನೂರು ವಿರಕ್ತ ಮಠದ ಚಿಕ್ಕ ಗುರುನಂಜೇಶ್ವರ ಸ್ವಾಮೀಜಿ ತಿಳಿಸಿದರು.

ಕಂಚಾಳಕುಂಟಿ ನಂದೀಶ್ವರ ಮಠದ ಕರುಣೇಶ್ವರ ಶಿವಾಚಾರ್ಯರು ಮಾತನಾಡಿ, ‘ಸಿದ್ಧಮಠದ ಹಳೆಯ ವಿದ್ಯಾರ್ಥಿಗಳು ಸಂಘ ಕಟ್ಟಿಕೊಂಡು ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಶೌಚಾಲಯ, ಪರಿಸರ ರಕ್ಷಣೆಗೆ ಒತ್ತು ನೀಡಬೇಕು. ಗುರುವಿನಲ್ಲಿ ಶ್ರದ್ಧೆ ಭಕ್ತಿ ಮತ್ತು ನಂಬಿಕೆ ಇರಿಸಿ ಮಾಡುವ ಕೆಲಸ ಎಂದೂ ವಿಫಲವಾಗುವುದಿಲ್ಲ ಈ ನಿಟ್ಟಿನಲ್ಲಿ ನೀವು ಕಾರ್ಯೋನ್ಮುಖರಾಗಬೇಕು’ ಎಂದರು.

ನರನಾಳದ ಶಿವಕುಮಾರ ಶಿವಾಚಾರ್ಯರು, ಚಂದನಕೇರಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಮಾತನಾಡಿದರು.

ಶಂಭುಲಿಂಗಯ್ಯ ಸಾಲಿಮಠ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ನರಸಪ್ಪ ಗೌಡನಹಳ್ಳಿ(ಬ್ಯಾಂಕಿಂಗ್), ವೀರಾರೆಡ್ಡಿ ಪಾಟೀಲ ಕಲ್ಲೂರು(ಕೃಷಿ), ಸುಭಾಷ್ಚಂದ್ರ ಪಾಟೀಲ ಸ್ಮಾರಕ ಟ್ರಸ್ಟ್ನ ಶರಣಗೌಡ ಪಾಟೀಲ ಪಾಳಾ (ಸಮಾಜ ಸೇವೆ), ಸಿದ್ಧಾರೂಢ ಹೊಕ್ಕುಂಡಿ (ಪರಿಸರ ಹಾಗೂ ವನ್ಯಜೀವಿ), ಶಾಮರಾವ್ ಕೊರವಿ (ರಂಗಭೂಮಿ), ಡಾ. ಮಲ್ಲಿಕಾರ್ಜುನ ಗುತ್ತೇದಾರ (ಪಶು ಸೇವೆ), ರಾಹುಲ್ ತೇಲಕರ್ (ಶಿಕ್ಷಣ), ಪಂಪನಗೌಡ (ಸಮಾಜ ಸೇವೆ), ಶಂಭುಲಿಂಗಯ್ಯ ಸಾಲಿಮಠ (ಸಮಾಜ ಸೇವೆ) ಅವರು ಸಲ್ಲಿಸಿದ ಸೇವೆ ಪರಿಗಣಿಸಿ ಸಿದ್ಧಗಂಗಾ ಸಂಪದ -2026 ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಭುರೆಡ್ಡಿ ದೋರನಳ್ಳಿ ಸ್ವಾಗತಿಸಿದರು. ನರಸರೆಡ್ಡಿ ವಾರಂಗಲ್ ಪ್ರಾಸ್ತಾವಿಕ ಮಾತನಾಡಿದರು. ಶಿವರುದ್ರಯ್ಯ ಮಠಪತಿ ನಿರೂಪಿಸಿದರು. ಸತೀಶರೆಡ್ಡಿ ತಾಜಲಾಪುರ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-31-765857624

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.