ಶಿರ್ವ: ಆಧುನಿಕ ಯುಗದಲ್ಲಿ ಯುವ ಪೀಳಿಗೆಗೆ ಯೋಗ್ಯ ಹಾಗೂ ಹೊಂದಾಣಿಕೆ ಆಗುವಂತಹ ಸಂಗಾತಿಯನ್ನು ಹುಡುಕಿಕೊಳ್ಳುವುದು ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ವಧು–ವರರ ಸಮಾವೇಶಗಳು ಯುವಜನರ ಸುಂದರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿ ಕೊಡುತ್ತವೆ ಎಂದು ಬೆಂಗಳೂರಿನ ಸಪ್ತಪದಿ ವಿವಾಹ ಮಾಹಿತಿ ಕೇಂದ್ರದ ಅಧ್ಯಕ್ಷ ನಾಗೇಂದ್ರ ಕಾಮತ್ ಹೇಳಿದರು.

ಬಂಟಕಲ್ಲು ರೋಟರಿ ಭವನದಲ್ಲಿ ಆರ್ಎಸ್ಬಿ ಹಾಗೂ ಬಿಜಿಎಸ್ಬಿ ಸಮಾಜ ಬಾಂಧವರ ಆಯೋಜನೆಯಲ್ಲಿ ಸಪ್ತಪದಿ ವಿವಾಹ ಮಾಹಿತಿ ಕೇಂದ್ರದ ವತಿಯಿಂದ ನಡೆದ ‘ಋಣಾನುಬಂಧ’ ವಧು–ವರರ ಸಮಾವೇಶ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾಜ ಬಾಂಧವರನ್ನು ಒಂದೆಡೆ ಸೇರಿಸಿ ಪರಸ್ಪರ ಪರಿಚಯ ಮಾಡಿಕೊಳ್ಳುವ ಮೂಲಕ ವಿವಾಹ ಪ್ರಕ್ರಿಯೆಯನ್ನು ಸುಲಭಗೊಳಿಸುವುದು ಈ ಕೇಂದ್ರದ ಮುಖ್ಯ ಉದ್ದೇಶವಾಗಿದ್ದು, ಇದು ಉಚಿತ ಸೇವೆಯಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜ್ಯೋತಿಷಿ ಮಾಣ್ಯೂರು ವೈ ಉಪೇಂದ್ರ ಪ್ರಭು ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಜಾತಕ ಫಲಗಳನ್ನು ಪರಿಶೀಲಿಸಿ ವಿವಾಹವಾಗುವುದು ದಾಂಪತ್ಯ ಜೀವನದ ದೀರ್ಘಾವಧಿ ಯಶಸ್ಸಿಗೆ ಒಳಿತು ಎಂದರು.

ವಿವಾಹ ಮಾಹಿತಿ ಕೇಂದ್ರದ ವತಿಯಿಂದ ಉಪೇಂದ್ರ ಪ್ರಭು ಹಾಗೂ ಉದ್ಯಮಿ ಎಂ.ಎನ್.ನಾಯಕ್, ಅಂತರರಾಷ್ಟ್ರೀಯ ತರಬೇತುದಾರ ಸುಬ್ರಹ್ಮಣ್ಯ ಕುಲೇದು ಅವರನ್ನು ಸನ್ಮಾನಿಸಲಾಯಿತು.

ಕಾರ್ಕಳ ಹಿರ್ಗಾನದ ಶ್ರೀಆದಿಶಕ್ತಿ ಮಹಾಲಕ್ಷ್ಮಿ ದೇವಳದ ಮಾಜಿ ಆಡಳಿತ ಮೊಕ್ತೇಸರ ಅಶೋಕ್ ನಾಯಕ್, ಉದ್ಯಮಿ ವಾಸುದೇವ ಕೃಷ್ಣ, ಪ್ರಧಾನ ಸಂಚಾಲಕ ಎಂ.ಡಿ.ಪ್ರಭು, ನಿವೃತ್ತ ಮುಖ್ಯ ಶಿಕ್ಷಕ ಚಂದ್ರಹಾಸ ಪ್ರಭು ಮುದರಂಗಡಿ ಇದ್ದರು.

ಸುನಿಲ್ ಬೋರ್ಕಾರ್ ಪುತ್ತೂರು ನಿರೂಪಿಸಿದರು. ಸರೋಜಿನಿ ಕೊಡಿಬೆಟ್ಟು ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-28-309339557

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.