ಉಡುಪಿ: ಪ್ರಾರ್ಥನೆ, ಉಪವಾಸ, ದಾನ ಧರ್ಮದ ಮೂಲಕ ದೇವರ ಸಾಮಿಪ್ಯವನ್ನು ಕಾಣಲು ಪವಿತ್ರ ವಾರವು ಕ್ರೈಸ್ತರಿಗೆ ಮಾರ್ಗದರ್ಶಿಯಾಗಿದೆ ಎಂದು ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಮಲ್ಪೆ ಯುಬಿಎಂ ಎಬನೇಜರ್ ಚರ್ಚಿನಲ್ಲಿ ಭಾನುವಾರ ಆಯೋಜಿಸಿದ್ದ ಕ್ರೈಸ್ತ ಐಕ್ಯತಾ ಪ್ರಾರ್ಥನಾ ಕೂಟದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.

ಪವಿತ್ರ ವಾರದಲ್ಲಿ ಯೇಸುಕ್ರಿಸ್ತರ ಸಂಕಷ್ಟ, ಮರಣವನ್ನು ಧ್ಯಾನಿಸಲು ಕ್ರೈಸ್ತ ವಿಶ್ವಾಸಿಗಳು ಧ್ಯಾನಿಸುವ ವಿಶೇಷ ಸಮಯವಾಗಿದೆ. ನಮ್ಮ ಜೀವನದಲ್ಲಿ ಕಷ್ಟ, ಸಮಸ್ಯೆಗಳ ಶಿಲುಬೆಗಳನ್ನು ಹೊತ್ತು ಯೇಸು ಸ್ವಾಮಿ ತೋರಿದ ಹಾದಿಯಲ್ಲಿ ಸಾಗಲು ಪವಿತ್ರ ವಾರ ಇನ್ನಷ್ಟು ಸಹಕಾರಿಯಾಗಿದೆ ಎಂದು ಹೇಳಿದರು.

ಕ್ಯಾಂಪಸ್ ಕ್ರುಸೆಡ್ ಇಂಡಿಯಾ ಮಂಗಳೂರಿನ ರಮೇಶ್, ಸಂತೆಕಟ್ಟೆ ಮೌಂಟ್ ರೋಸರಿ ಚರ್ಚ್ನ ಧರ್ಮಗುರು ರೊಕ್ ಡಿಸೋಜ ದೇವರ ವಾಕ್ಯದ ಮೇಲೆ ಪ್ರಬೋಧನೆ ನೀಡಿದರು.

ಯುಬಿಎಂ ಕ್ರಿಸ್ತ ಕಾರುಣ್ಯ ಚರ್ಚ್ ಕಟಪಾಡಿ, ಯುಬಿಎಂ ಜುಬಿಲಿ ಚರ್ಚ್ ಉಡುಪಿ, ಯುಬಿಎಂ ಕ್ರಿಸ್ತ ಕೃಪಾ ಮಣಿಪಾಲ, ಯುಬಿಎಂ ಕ್ರಿಸ್ತ ಶಾಂತಿ ಚರ್ಚ್ ಉದ್ಯಾವರ, ಸಿಎಸ್ ಐ ಎಬನೇಜರ್ ಮಲ್ಪೆ, ಸಂತ ಅನ್ನಮ್ಮ ಚರ್ಚ್ ತೊಟ್ಟಂ ಗಾಯನ ತಂಡಗಳಿಂದ ಸ್ತುತಿಗಾಯನ ಜರುಗಿತು.

ಕಥೊಲಿಕ್ ಧರ್ಮಗುರುಗಳಾದ ಫರ್ಡಿನಾಂಡ್ ಗೊನ್ಸಾಲ್ವಿಸ್, ವಿನ್ಸೆಂಟ್ ಕ್ರಾಸ್ತಾ, ವಿಲ್ಸನ್ ಡಿಸೋಜ, ಅಶ್ವಿನ್ ಆರಾನ್ಹಾ, ಯುಬಿಎಂ ಚರ್ಚ್ನ ಸಂತೋಷ್ ಎ., ಸ್ಟೀಫನ್ ಬಂಡಿ, ರಮೇಶ್ ಮುದಲಗಿ, ಮನೋಜ್ ವೈ .ಎಸ್., ವಿನಯ್ ಸಂದೇಶ್, ಪ್ರಮುಖರಾದ ಡೇನಿಯಲ್ ಜೆ. ಅಮ್ಮನ್ನ, ಸ್ಟಾರ್ವಿನ್ ಅಮ್ಮನ್ನ, ಮೋಹನ್ ಪಿ ಅಮ್ಮನ್ನ ಉಪಸ್ಥಿತರಿದ್ದರು.

ಕುಮಾರ್ ಸಾಲಿನ್ಸ್ ಸ್ವಾಗತಿಸಿದರು. ಜುವೆಲ್ ವಂದಿಸಿದರು. ತೊಟ್ಟಂ ಚರ್ಚ್ನ ಧರ್ಮಗುರು ಡೆನಿಸ್ ಡೆಸಾ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-28-76170651

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.