ಬ್ರಹ್ಮಾವರ: ದೇವಾಲಯದ ಗರ್ಭಗುಡಿಯು ಮನುಷ್ಯನ ದೇಹವಿದ್ದಂತೆ. ನಮ್ಮ ದೇಹದಲ್ಲಿ ಜೀವಚೈತನ್ಯ ಹೇಗೆ ನೆಲೆಸಿದೆಯೋ, ಹಾಗೆಯೇ ಗರ್ಭಗುಡಿಯಲ್ಲಿ ಭಗವಂತನ ಚೈತನ್ಯವಿರುತ್ತದೆ. ದೇಹ ಸುಸ್ಥಿತಿಯಲ್ಲಿದ್ದರೆ ಮಾತ್ರ ಜೀವ ನೆಲೆಸಲು ಸಾಧ್ಯ, ಅದೇ ರೀತಿ ಗರ್ಭಗುಡಿ ಸುಸ್ಥಿತಿಯಲ್ಲಿದ್ದಾಗ ದೈವೀ ಚೈತನ್ಯ ವೃದ್ಧಿಯಾಗುತ್ತದೆ ಎಂದು ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.

ವಾರಂಬಳ್ಳಿ ಬಿರ್ತಿಯ ಶ್ರೀ ವೇಣುಗೋಪಾಲಕೃಷ್ಣ ದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬಿರ್ತಿಯಲ್ಲಿ ಗೊಲ್ಲ ಸಮುದಾಯದವರ ಅಪಾರ ಒಗ್ಗಟ್ಟಿನ ಫಲವಾಗಿ ಇಂದು ಸುಂದರವಾದ ದೇವಸ್ಥಾನ ನಿರ್ಮಾಣಗೊಂಡಿದೆ ಎಂದರು.

ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಭಾರತವು ಧಾರ್ಮಿಕ ಚಟುವಟಿಕೆ ಮತ್ತು ಸಂಸ್ಕೃತಿಗೆ ಹೆಸರಾದ ಏಕೈಕ ರಾಷ್ಟ್ರ. ಇಲ್ಲಿನ ದೈವಿಕ ಪರಂಪರೆಯನ್ನು ವಿಶ್ವದ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.

ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಕಾಶ್ ಗೊಲ್ಲ ಅಧ್ಯಕ್ಷತೆ ವಹಿಸಿದ್ದರು. ಸ್ಥಳದಾನ ನೀಡಿದ ರಾಮ ಗೊಲ್ಲ, ಶಿಲ್ಪಿಗಳಾದ ಗಣೇಶ ಬಸ್ರೂರು, ವಾಸ್ತುಶಿಲ್ಪಿ ಗಣೇಶ್ ಹಿರಿಯಡಕ, ಧಾರ್ಮಿಕ ವಿಧಿ ನೆರವೇರಿಸಿದ ಲಕ್ಷ್ಮೀನಾರಾಯಣ ಅಡಿಗ, ಬಿ. ರಾಜಾರಾಮ ಸೋಮಯಾಜಿ ಹಾಗೂ ಆರ್ಥಿಕ ಸಹಕಾರ ನೀಡಿದವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ವಿಶ್ವನಾಥ ಶೆಣೈ, ಬಿರ್ತಿ ರಾಜೇಶ್ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಎಸ್. ನಾರಾಯಣ, ನಿತ್ಯಾನಂದ ಬಿ.ಆರ್., ದಯಾನಂದ ಬಿ.ಆರ್. ಉಪಸ್ಥಿತರಿದ್ದರು.

ಶಿವಶಂಕರ್ ಯು. ಸ್ವಾಗತಿಸಿದರು. ರತ್ನಾಕರ ಯಾದವ ಸನ್ಮಾನಿತರ ವಿವರ ನೀಡಿದರು. ಆರ್.ಜೆ. ಪ್ರಸನ್ನ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪೂರ್ವಾಹ್ನ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬ್ರಹ್ಮಕಲಶ ಹಾಗೂ ಅಭಿಷೇಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-28-1518775704

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.