ಉಜಿರೆ: ಮುನಿಗಳ ವಿಹಾರ, ಧಾಮಸಂಪ್ರೋಕ್ಷಣೆ, ಬಸದಿಗಳ ಪಂಚಕಲ್ಯಾಣ, ಧಾರ್ಮಿಕ ಶಿಬಿರ, ಬಾಹುಬಲಿಸ್ವಾಮಿಯ ಮಹಾಮಸ್ತಕಾಭಿಷೇಕ, ಜಿನಭಜನೆ ಹಾಡವ ಚಟುವಟಿಕೆಯಲ್ಲಿ ಮಕ್ಕಳು ಸಕ್ರಿಯರಾಗಿ ಭಾಗವಹಿಸುವಂತೆ ಪ್ರೇರಣೆ ನೀಡಬೇಕು ಎಂದು ಭಾರತೀಯ ಜೈನ್ಮಿಲನ್ ವಲಯ ಎಂಟರ ಉಪಾಧ್ಯಕ್ಷ ಸುದರ್ಶನ್ ಜೈನ್ ಹೇಳಿದರು.

ಉಜಿರೆ ಎಸ್ಡಿಎಂ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಬೆಳ್ತಂಗಡಿ ಜೈನ್ಮಿಲನ್ನ ನೂತನ ಅಧ್ಯಕ್ಷ ಸನ್ಮತಿ ಕುಮಾರ್ ಮತ್ತು ಸದಸ್ಯರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ಜೈನ್ಮಿಲನ್ ವಲಯ ಎಂಟರ ನಿರ್ದೇಶಕ ಬಿ.ಸೋಮಶೇಖರ ಶೆಟ್ಟಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ನಿಕಟಪೂರ್ವ ಅಧ್ಯಕ್ಷ ಡಾ.ನವೀನ್ ಕುಮಾರ್ ಜೈನ್ ಮಾತನಾಡಿದರು.

ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯರ್ಥಿಗಳನ್ನು ಅಭಿನಂದಿಸಲಾಯಿತು. ಧೀಮತಿ ಜೈನ ಮಹಿಳಾ ಸಮಾಜದ ಅಧ್ಯಕ್ಷೆ ಡಾ.ರಜತಾ ಪಿ.ಶೆಟ್ಟಿ, ಬಿ.ಪ್ರಮೋದ್ ಕುಮಾರ್, ಬಿ.ಸೋಮಶೇಖರ ಶೆಟ್ಟಿ, ಬಿ.ಭುಜಬಲಿ ಧರ್ಮಸ್ಥಳ, ಧರಣೇಂದ್ರ ಕುಮಾರ್ ಜೈನ್, ನೂತನ ಅಧ್ಯಕ್ಷ ಸನ್ಮತಿ ಕುಮಾರ್ ಮಾತನಾಡಿದರು.

ಬಿ.ಭುಜಬಲಿ, ಟಿಸಿಬಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ಜೈನ್, ರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಲಾಸ್ಯ ಉಜಿರೆ ಅವರನ್ನು ಗೌರವಿಸಲಾಯಿತು.

ಸುಮನ್ ಕುಮಾರ್ ಜೈನ್ ವಂದಿಸಿದರು. ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಧರ್ಮ ಪಾಲ ಜೈನ್ ಶಾಂತಿಮಂತ್ರ ಪಠಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-29-1119003054

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.